Budhaditya And Vipareet Rajyogas: ಜುಲೈ 17ಕ್ಕೆ ಸೂರ್ಯ-ಬುಧರ ಕೃಪೆಯಿಂದ ಈ ಜನರಿಗೆ ಹೊಡೆಯಲಿದೆ ಜಾಕ್ ಪಾಟ್!

Wed, 05 Jul 2023-9:44 pm,

ಮಾತು ಹಾಗೂ ಬುದ್ಧಿವಂತಿಕೆಯ ಕಾರಕ ಗ್ರಹವಾಗಿರುವ ಬುಧ  ಜುಲೈ 8, 2023 ರಂದು, ಮಧ್ಯಾಹ್ನ 12.19 ಕ್ಕೆ ಕರ್ಕ ರಾಶಿಯನ್ನು ಪ್ರವೇಶಿಸಲಿದೆ, ಮತ್ತೊಂದೆಡೆ, ಜುಲೈ 17, 2023 ರಂದು, ಬೆಳಗ್ಗೆ  5.19 ಕ್ಕೆ, ಸೂರ್ಯನು ಕೂಡ ಕರ್ಕ ರಾಶಿಗೆ ಸಾಗಲಿದ್ದಾನೆ. ಇದರಿಂದ ಕರ್ಕ ರಾಶಿಯಲ್ಲಿ ಬುಧ ಮತ್ತು ಸೂರ್ಯನ ಮೈತ್ರಿಯಿಂದ, ಬುಧಾದಿತ್ಯ ಮತ್ತು ವಿಪರೀತ ರಾಜಯೋಗವು ರೂಪಗೊಳ್ಳುತ್ತಿವೆ. ಈ ಎರಡು ಯೋಗಗಳಿಂದಾಗಿ 3 ರಾಶಿಗಳ ಜನರು ಬಂಬಾಜ್ ಜಾಕ್ ಪಾಟ್ ಹೊಡೆಯಲಿದ್ದಾರೆ. .  

ಮಕರ ರಾಶಿ- ಮಕರ ರಾಶಿಯವರಿಗೆ ವಿಪರೀತ ರಾಜಯೋಗ ಅತ್ಯಂತ ಮಂಗಳಕರ ಸಿದ್ಧ ಸಾಬೀತಾಗಲಿದೆ. ಈ ಅವಧಿಯಲ್ಲಿ ಮಕರ ಜಾತಕದ, ವ್ಯಕ್ತಿಯು ಕೋರ್ಟ್ ಕಚೇರಿ ವಿಷಯಗಳಲ್ಲಿ ಯಶಸ್ಸನ್ನು ಪಡೆಯುತ್ತಾನೆ. ಈ ಅವಧಿಯಲ್ಲಿ ನಿಮ್ಮ ಧೈರ್ಯ ಮತ್ತು ಶೌರ್ಯವು ಹೆಚ್ಚಾಗಲಿದೆ. ನೀವು ಹಳೆಯ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಶತ್ರುಗಳ ಮೇಲೆ ಜಯ ಸಾಧಿಸುವಿರಿ.  

ಕರ್ಕ ರಾಶಿ- ಕರ್ಕ ರಾಶಿಯ ಜನರಿಗೆ  ರಾಜಯೋಗವು ಸಾಕಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಈ ಅವಧಿಯಲ್ಲಿ, ವಿದೇಶಗಳಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಲಾಭವಾಗಬಹುದು. ಬ್ಯಾಂಕಿಂಗ್, ಹೂಡಿಕೆ, ಆಮದು-ರಫ್ತಿಗೆ ಸಂಬಂಧಿಸಿದ ಜನರು ಈ ಅವಧಿಯಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ಸೂರ್ಯನ ಪ್ರಭಾವದಿಂದ, ಈ ಸಮಯದಲ್ಲಿ ನೀವು ಕೆಲಸದ ಸ್ಥಳದಲ್ಲಿ ಸಾಕಷ್ಟು ಘನತೆ-ಗೌರವ ಪಡೆಯುವಿರಿ ಮತ್ತು ಸ್ಥಗಿತಗೊಂಡ ಕೆಲಸ ಕಾರ್ಯಗಳಿಗೆ ಮತ್ತೆ ಗತಿ ಸಿಗಲಿದೆ.   

ವೃಶ್ಚಿಕ ರಾಶಿ- ವೃಶ್ಚಿಕ ರಾಶಿಯ ಜನರಿಗೆ ವಿಪರೀತ ರಾಜಯೋಗ ಅತ್ಯಂತ ಶುಭ ಫಲದಾಯಿ ಸಾಬೀತಾಗಲಿದೆ. ಆರೋಗ್ಯ ಚೆನ್ನಾಗಿರುತ್ತದೆ. ಹಳೆಯ ಕಾಯಿಲೆಯಿಂದ ಮುಕ್ತಿ ಹೊಂದುವಿರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹಠಾತ್ ಹಣ ಬರುವ ಸಾಧ್ಯತೆಗಳಿವೆ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಂಶೋಧನೆ ಅಥವಾ ತನಿಖೆಯಲ್ಲಿ ತೊಡಗಿರುವ ಜನರು ಪ್ರಯೋಜನ ಪಡೆಯುತ್ತಾರೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link