ಹೊಸ ವರ್ಷಾರಂಭದಲ್ಲಿಯೇ ಶತ್ರು ರಾಹುವಿನ ಜೊತೆ ಸೂರ್ಯನ ಮೈತ್ರಿ, ಈ ಜನರಿಗೆ ಭಾಗ್ಯೋದಯ-ಉನ್ನತಿಯ ಯೋಗ!

Fri, 22 Dec 2023-4:55 pm,

ಗ್ರಹಗಳ ರಾಜ ಸೂರ್ಯ ಹೊಸ ವರ್ಷಾರಂಭದಲ್ಲಿ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಆದರೆ ಮೀನ ರಾಶಿಯಲ್ಲಿ ಈಗಾಗಲೇ ರಾಹು ವಿರಾಜಮಾನನಾಗಿರುವ ಕಾರಣ ಅಲ್ಲಿ ಈ ಎರಡೂ ಗ್ರಹಗಳ ಮತಿರಿ ನೆರವೇರಲಿದೆ. ಮೀನ ರಾಶಿಯಲ್ಲಿ ಶತ್ರುವಿನ ಜೊತೆಗೆ ಸೂರ್ಯನ ಮೈತ್ರಿ ಕೆಲ ರಾಶಿಗಳ ಜನರ ಮೇಲೆ ಸಕಾರಾತ್ಮಕ ಪ್ರಭಾವ ಉಂಟು ಮಾಡಲಿದೆ. ಬನ್ನಿ ಈ ಮೈತ್ರಿಯಿಂದ ಲಾಭ ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)  

ವೃಷಭ ರಾಶಿ: ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ಈ ಮೈತ್ರಿ ನೆರೆವೆರುತ್ತಿದೆ. ಇದರಿಂದ ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲಿವೆ ಮತ್ತು ಮಹತ್ವಾಕಾಂಕ್ಷೆಗಳು ಪೂರ್ಣಗೊಳ್ಳಲಿವೆ. ಇದರ ಜೊತೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ಭಾರಿ ಧನಲಾಭದಿಂದ ಆರ್ಥಿಕ ಸ್ಥಿತಿ ಪ್ರಬಲವಾಗಲಿದೆ. ಕೆಲಸದಲ್ಲಿ ನೀವು ನಿಮ್ಮ ಶತಪ್ರತಿಶತ ಕೊಡುಗೆ ನೀಡುವ ಕಾರಣ ದೊಡ್ಡ ಪ್ರಾಜೆಕ್ಟ್ ಗಳು ನಿಮ್ಮದಾಗಲಿವೆ. 

ಕನ್ಯಾ ರಾಶಿ: ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ಈ ಮೈತ್ರಿ ರಚನೆಯಾಗುತ್ತಿದೆ. ಇದರಿಂದ ನಿಮ್ಮ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಹೆಚ್ಚಾಗಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ ಮತ್ತು ಇದರಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಮಾನಸಿಕ ಒತ್ತಡದಿಂದ ಮುಕ್ತಿ ಸಿಗಲಿದೆ ಮತ್ತು ಕಾರ್ಯಸ್ಥಳದಲ್ಲಿ ಪ್ರಶಂಸೆಗೆ ಪಾತ್ರರಾಗಿವಿರಿ. ವ್ಯಾಪಾರದ ಕುರಿತು ಹೇಳುವುದಾದರೆ. ದೊಡ್ಡ ಒಪ್ಪಂದಗಳನ್ನು ಮಾಡಿಕೊಳ್ಳುವಿರಿ. 

ಮಕರ ರಾಶಿ: ಸೂರ್ಯ ಹಾಗೂ ರಾಹುವಿನ ಈ ಮೈತ್ರಿಯಿಂದ ನಿಮ್ಮ ಜೀವನದ ಮೇಲೂ ಕೂಡ ಸಕಾರಾತ್ಮಕ ಪ್ರಭಾವ ಹೆಚ್ಚಾಗಲಿದೆ. ಸಣ್ಣಪುಟ್ಟ ಕಾರ್ಯಗಳಲ್ಲಿಯೂ ಕೂಡ ಯಶಸ್ಸು ನಿಮ್ಮದಾಗಲಿದೆ. ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ, ಈ ಅವಧಿಯಲ್ಲಿ ನಿಮ್ಮ ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ.. ಸೂರ್ಯದೇವನ ಕೃಪೆಯಿಂದ ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯಬೇಡಿ, ಏಕೆಂದರೆ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ ಎಂದರೆ ತಪ್ಪಾಗಲಾರದು. ಕಾರ್ಯಸ್ಥಳದಲ್ಲಿ ನಿಮ್ಮ ಸ್ಥಿತಿ ಪ್ರಬಲವಾಗಿರಲಿದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link