Sun Salutation: ಸೂರ್ಯ ನಮಸ್ಕಾರದ ಪ್ರಯೋಜನಗಳ ಬಗ್ಗೆ ತಿಳಿಯಿರಿ
ಮಹಿಳೆಯರ ಅನಿಯಮಿತ ಮುಟ್ಟಿನ ಚಕ್ರವನ್ನು ಹೊಂದಿದ್ದರೆ ಸೂರ್ಯ ನಮಸ್ಕಾರ ಮಾಡಬೇಕು. ಈ ವ್ಯಾಯಾಮವು ಸರಿಯಾದ ಸಮಯದಲ್ಲಿ ಪೀರಿಯಡ್ಸ್ ಆಗಲು ಸಹಾಯ ಮಾಡುತ್ತದೆ. ಈ ಅಭ್ಯಾಸವು ಸುಲಭ ಹೆರಿಗೆಗೂ ಸಹ ಸಹಾಯ ಮಾಡುತ್ತದೆ.
ಸೂರ್ಯ ನಮಸ್ಕಾರವು ನಿಮ್ಮ ಬೆನ್ನುಮೂಳೆಯನ್ನು ಬಲಪಡಿಸುತ್ತದೆ ಮತ್ತು ನಿಮ್ಮ ಸೊಂಟವು ಹೆಚ್ಚು ಫ್ಲೆಕ್ಸಿಬಲ್ ಆಗುತ್ತದೆ. ನಿಮ್ಮ ಸ್ನಾಯುಗಳು, ಕೀಲುಗಳು, ಅಸ್ಥಿರಜ್ಜು ಮತ್ತು ಅಸ್ಥಿಪಂಜರದ ವ್ಯವಸ್ಥೆಯನ್ನು ಹಿಗ್ಗಿಸಲು ಮತ್ತು ಬಲಪಡಿಸುತ್ತದೆ.
ಸೂರ್ಯ ನಮಸ್ಕಾರ ಮಾಡುವಾಗ ಉಸಿರನ್ನು ತೆಗೆದುಕೊಳ್ಳುವ, ಬಿಡುವ ಪ್ರಕ್ರಿಯೆಯಿಂದ ಶ್ವಾಸಕೋಶಕ್ಕೆ ಸರಾಗವಾಗಿ ಶುದ್ಧ ಗಾಳಿ ಹೋಗುತ್ತದೆ.
ಸೂರ್ಯ ನಮಸ್ಕಾರದ ಆಸನಗಳನ್ನು ನಿಯಮಿತವಾಗಿ ಮಾಡಿದಾಗ ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ. ಚಪ್ಪಟೆ ಹೊಟ್ಟೆ ಪಡೆಯಲು ನೀವು ಈ ಆಸನಗಳನ್ನು ಪ್ರಯತ್ನಿಸಬಹುದು.
ಸೂರ್ಯ ನಮಸ್ಕಾರ ಮಾಡುವುದರಿಂದ ನಿಮ್ಮ ಜ್ಞಾಪಕಶಕ್ತಿ ಮತ್ತು ನರಮಂಡಲವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಮ್ಮನ್ನು ಶಾಂತಗೊಳಿಸಲು ಮತ್ತು ಆತಂಕವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.