ಮಕರ ಸಂಕ್ರಾಂತಿಗೂ ಮುನ್ನವೇ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು !ವರ್ಷ ಪೂರ್ತಿ ಸೂರ್ಯನಂತೆಯೇ ಪ್ರಜ್ವಲಿಸುವುದು ನಿಮ್ಮ ಬದುಕು
ಸೂರ್ಯನ ನಕ್ಷತ್ರ ಬದಲಾವಣೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಸೂರ್ಯನ ನಕ್ಷತ್ರ ಬದಲಾವಣೆಯೊಂದಿಗೆ ಕೆಲವು ರಾಶಿಯವರ ಜೀವನದಲ್ಲಿ ಪ್ರಗತಿಯ ಹೊಸ ಬಾಗಿಲು ತೆರೆಯುವುದು.
ಈ ರಾಶಿಯವರು ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಸಂಕ್ರಾಂತಿಗೂ ಮುನ್ನವೇ ಸೂರ್ಯನ ಕಾರಣದಿಂದಲೇ ಇವರ ಬಾಳು ಸೂರ್ಯನಂತೆ ಪ್ರಜ್ವಲಿಸುವುದು.
ಮೇಷ ರಾಶಿ : ಉದ್ಯೋಗಸ್ಥರು ವಿಶೇಷ ಪ್ರಗತಿಯನ್ನು ಪಡೆಯುತ್ತಾರೆ. ಇದರಿಂದ ಉದ್ಯಮಿಗಳಿಗೆ ದುಪ್ಪಟ್ಟು ಲಾಭವಾಗಲಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು. ಪೂರ್ವಿಕರ ಆಸ್ತಿಯಿಂದ ಲಾಭ ಪಡೆಯಬಹುದು.
ಸಿಂಹ ರಾಶಿ :ಹಣಕಾಸಿನ ಸಮಸ್ಯೆಗಳು ದೂರವಾಗುವುದು. ಕಾಡುತ್ತಿದ್ದಆರೋಗ್ಯ ಸಮಸ್ಯೆ ದೂರವಾಗುವುದು. ಉದ್ಯೋಗಸ್ಥರು ಶುಭ ಸುದ್ದಿ ಕೇಳುವಿರಿ. ನಿಮ್ಮ ಮನದ ಆಸೆ ಈಡೇರುವುದು.
ಧನು ರಾಶಿ : ನಿಮ್ಮ ಕೈ ಸೇರದೆ ಹೊರಗೆ ಉಳಿದಿರುವ ಹಣ ಮತ್ತೆ ನಿಮ್ಮದಾಗುವುದು. ವೃತ್ತಿ ಬದುಕಿನಲ್ಲಿ ಹೊಸ ಉತ್ತುಂಗಕ್ಕೆ ಏರುವಿರಿ. ಪೂರ್ವಿಕರ ಆಸ್ತಿಯಿಂದ ಲಾಭವಾಗುವುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.