ಇನ್ನೊಂದು ತಿಂಗಳು ಸೂರ್ಯನ ರೀತಿ ಬೆಳಗುವುದು ಈ ರಾಶಿಯವರ ಅದೃಷ್ಟ ! ಹೆಜ್ಜೆ ಹೆಜ್ಜೆಗೂ ಭಾಗ್ಯೋದಯ
ಏಪ್ರಿಲ್ 14 ರಂದು ಮಧ್ಯಾಹ್ನ 03.12 ಕ್ಕೆ ಸೂರ್ಯ ಮೇಷ ರಾಶಿಗೆ ಕಾಲಿಡುತ್ತಾನೆ. ಇದರ ನಂತರ ಸೂರ್ಯನು ಮೇಷ ರಾಶಿಯಲ್ಲಿ 1 ತಿಂಗಳ ಕಾಲ ಇರಲಿದ್ದಾನೆ. ಮತ್ತೆ ಮೇ 15 ರಂದು ಬೆಳಿಗ್ಗೆ 11.58 ಕ್ಕೆ ವೃಷಭ ರಾಶಿಗೆ ಪ್ರವೇಶವಾಗುತ್ತದೆ. ಮೇಷ ರಾಶಿಯಲ್ಲಿ ಒಂದು ತಿಂಗಳವರೆಗೆ ಸೂರ್ಯ ಇರುವಾಗ 4 ರಾಶಿಯವರ ಅದೃಷ್ಟವನ್ನು ಬೆಳಗುತ್ತಾನೆ. ಹಾಗಿದ್ದರೆ ಸೂರ್ಯದೇವ ದಯೆ ತೋರುವ ಅದೃಷ್ಟ ರಾಶಿಗಳು ಯಾವುವು ನೋಡೋಣ.
ಮೇಷ ರಾಶಿ : ಸೂರ್ಯನ ರಾಶಿ ಬದಲಾವಣೆಯು ಮೇಷ ರಾಶಿಯವರಿಗೆ ಶುಭಕರವಾಗಿರುತ್ತದೆ. ಸೂರ್ಯನು ಮೇಷ ರಾಶಿಗೆ ಪ್ರವೇಶ ಮಾಡಿದ್ದು, ಈ ರಾಶಿಯವರಿಗೆ ಇದ್ದಕ್ಕಿದ್ದಂತೆ ಲಾಭವಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಉದ್ಯೋಗ ಮಾಡುವವರಿಗೆ ಬಡ್ತಿ ದೊರೆಯಲಿದೆ. . ವ್ಯಾಪಾರ ವೃದ್ಧಿಯಾಗಲಿದೆ.
ಮಿಥುನ ರಾಶಿ : ಸೂರ್ಯ ಸಂಚಾರವು ಮಿಥುನ ರಾಶಿಯವರಿಗೆ ಹಲವು ರೀತಿಯಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ. ಉದ್ಯಮಿಗಳು ಲಾಭ ಗಳಿಸುವ ಅವಕಾಶವನ್ನು ಪಡೆಯುತ್ತಾರೆ. ಆದಾಯ ಹೆಚ್ಚಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ವಿದೇಶ ಪ್ರಯಾಣ ಯೋಗ ಕೂಡಿ ಬರಬಹುದು.
ಸಿಂಹ ರಾಶಿ : ಸೂರ್ಯನ ಸಂಚಾರವು ಸಿಂಹ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿದ್ದು, ಈ ರಾಶಿಯವರ ಮೇಲೆ ಯಾವಾಗಲೂ ದಯೆ ತೋರುತ್ತಾನೆ. ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದ ಅವಕಾಶ ಸಿಗಬಹುದು. ವೇತನ ಹೆಚ್ಚಾಗಬಹುದು. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಎದುರಾಗಿರುವ ಅಡೆತಡೆಗಳು ನಿವಾರಣೆಯಾಗುತ್ತವೆ.
ವೃಶ್ಚಿಕ ರಾಶಿ : ಸೂರ್ಯನ ಸಂಚಾರವು ವೃಶ್ಚಿಕ ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ಲಾಭವನ್ನು ನೀಡುತ್ತದೆ. ಹೆಚ್ಚುತ್ತಿರುವ ಆದಾಯದಿಂದ ನೆಮ್ಮದಿ ಸಿಗಲಿದೆ. ಹೊರಗೆ ಉಳಿದಿರುವ ಹಣ ಬಂದು ಕೈ ಸೇರಲಿದೆ ಆರೋಗ್ಯ ಉತ್ತಮವಾಗಿರುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)