Sun Transit 2021: ನಾಳೆ ಈ ದೊಡ್ಡ ರಾಶಿಗೆ ಸೂರ್ಯನ ಪ್ರವೇಶ, ಬೆಳಗಲಿದೆ ಈ ರಾಶಿಗಳ ಭಾಗ್ಯ, ನಿಮ್ಮ ರಾಶಿ ಇದರಲ್ಲಿದೆಯಾ?

Sat, 16 Oct 2021-9:09 pm,

1. ಧನು ರಾಶಿ - ಸೂರ್ಯನ ರಾಶಿ ಪಲ್ಲಟದಿಂದ ಧನು ರಾಶಿಯ ಜತಕದವರು ಲಾಭವನ್ನು ಪಡೆಯಲಿದ್ದಾರೆ. ಕೌಟುಂಬಿಕ ಪರಿಸ್ಥಿತಿ ಸುಖಕರವಾಗಿರಲಿದೆ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ಉದ್ಯೋಗದಲ್ಲಿರುವ ಜನರು ತಮ್ಮ ಪರಿಶ್ರಮದ ಫಲವನ್ನು ಪಡೆಯುತ್ತಾರೆ.

2. ಮಕರ ರಾಶಿ: ಸೂರ್ಯನ ತುಲಾ ಗೋಚರ ಮಕರ ಜಾತಕದವರಿಯೂ ಕೂಡ ಲಾಭ ನೀಡಲಿದೆ. ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ ನಿಮ್ಮದಾಗಲಿದೆ. ತಂದೆಯ ಜೊತೆಗಿನ ಸಂಬಂಧ ಒತ್ತಡದಿಂದ ಕೂಡಿರುವ ಸಾಧ್ಯತೆ ಇದೆ. ಅದನ್ನು ಸರಿದಾರಿಗೆ ತರಲು ನೀವೇ ಪ್ರಯತ್ನಿಸಬೇಕು. ವೃತ್ತಿಜೀವನದಲ್ಲಿ ಮುಂದುವರೆಯಲು ಸಹಾಯ ಸಿಗಲಿದೆ.

3. ಸಿಂಹ ರಾಶಿ - ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರಾಗಲಿವೆ. ವ್ಯಾಪಾರಿಗಳಿಗೆ ಸಮಯ ಅನುಕೂಲಕರವಾಗಿರಲಿದೆ. ಸಂಗಾತಿಯ ಜೊತೆಗಿನ ಸಂಬಂಧ ಗಟ್ಟಿಯಾಗಲಿದೆ. ಸರ್ಕಾರಿ ನೌಕರಿಯಲ್ಲಿರುವವರ ಆದಾಯ ಹೆಚ್ಚಾಗಲಿದೆ.

4. ಮೀನ ರಾಶಿ - ಕುಟುಂಬ ಸದಸ್ಯನಿಗೆ ಮದುವೆಯ ಪ್ರಸ್ತಾಪ ಬರುವ ಸಾಧ್ಯತೆ ಇದೆ. ಕೌಟುಂಬಿಕ ಜೀವನ ನೆಮ್ಮದಿಯಿಂದ ಕೂಡಿರಲಿದೆ. ಕಾರ್ಯಕ್ಷೇತ್ರದಲ್ಲಿ ಬಡ್ತಿಯ ಯೋಗ. ಸಹೋದರ-ಸಹೋದರಿಯರ ಜೊತೆಗಿನ ಸಂಭಾಧ ಸುಧಾರಣೆಯಾಗಲಿದೆ. ನೌಕರ ವರ್ಗದವರ ಆದಾಯ ವೃದ್ಧಿಯಾಗಲಿದೆ. 

5. ತುಲಾ ರಾಶಿ - ಜೀವನದಲ್ಲಿ ಮುಂದುವರೆಯಲು ಹಲವು ಅವಕಾಶಗಳು ಲಭಿಸಲಿವೆ. ಲವ್ ಲೈಫ್ ಉತ್ತಮವಾಗಿರಲಿದೆ. ವಿದೇಶದಲ್ಲಿ ನೌಕರಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ವ್ಯಾಪಾರದಲ್ಲಿ ಲಾಭದ ಸಂಕೇತ.

6. ಮಿಥುನ ರಾಶಿ - ವಿದೇಶಕ್ಕೆ ತೆರಳಿ ವಿದ್ಯಾಭ್ಯಾಸ ನಡೆಸುವ ಯೋಗ ನಿರ್ಮಾಣಗೊಳ್ಳುತ್ತಿದೆ. ಪ್ರೇಮ ಸಂಬಂಧದಲ್ಲಿ ನಿಮಗೆ ಉತ್ತಮ ಫಲ ಪ್ರಾಪ್ತಿಯಾಗಲಿದೆ. ಸಂಗಾತಿಯ ಜೊತೆಗೆ ಹಿಲ್ ಸ್ಟೇಷನ್ ಸುತ್ತಾಡುವ ಯೋಗ ಬರಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link