Makar Sankranti 2023: ಮಕರ ಸಂಕ್ರಾಂತಿಯ ದಿನ ಸೂರ್ಯನಂತೆ ಹೊಳೆಯಲಿದೆ ಈ ರಾಶಿಗಳ ಜನರ ಭಾಗ್ಯ

Wed, 11 Jan 2023-8:46 pm,

1. ಸೂರ್ಯನ ಈ ಸಂಕ್ರಮಣ ಮಕರ ರಾಶಿಯವರಿಗೆ ಅಪಾರ ಲಾಭವನ್ನು ನೀಡಲಿದೆ. ಈ ರಾಶಿಯವರಿಗೆ ಮಕರ ಸಂಕ್ರಾಂತಿಯ ದಿನದಂದು ವಿಶೇಷ ಲಾಭಗಳು ಸಿಗಲಿವೆ. ಈ ದಿನ ನೀವು ಕೈ ಹಾಕುವ ಯಾವುದೇ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುವಿರಿ. ಪ್ರಗತಿಯ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ. ಹಳೆಯ ಕಾಯಿಲೆಯಿಂದ ಮುಕ್ತಿ ಸಿಗುತ್ತದೆ.  

2. ಮೇಷ ರಾಶಿಯವರಿಗೆ ಮಕರ ಸಂಕ್ರಾಂತಿ ಶುಭ ಸುದ್ದಿ ತರಲಿದೆ. ಈ ದಿನ ನೀವು ಉದ್ಯೋಗದಲ್ಲಿ ಬಡ್ತಿ ಪತ್ರವನ್ನು ಪಡೆಯಬಹುದು. ಸೂರ್ಯದೇವನ ಕೃಪೆಯಿಂದ ಪ್ರತಿಯೊಂದು ಕೆಲಸವೂ ಪೂರ್ಣಗೊಳ್ಳಲಿದೆ ಮತ್ತು ನಿಮ್ಮ ಗುರಿಗಳನ್ನು ಸಾಧಿಸುವಿರಿ. ಕುಟುಂಬದ ಬೆಂಬಲ ಸಿಗಲಿದೆ. ಕುಟುಂಬದಲ್ಲಿ ಕೆಲ ಶುಭ ಕಾರ್ಯಗಳನ್ನು ಆಯೋಜಿಸಬಹುದು.  

3. ಮಕರ ಸಂಕ್ರಾಂತಿಯಂದು ಸಿಂಹ ರಾಶಿಯವರಿಗೆ ಸೂರ್ಯನ ವಿಶೇಷ ಅನುಗ್ರಹ ಪ್ರಾಪ್ತಿಯಾಗಲಿದೆ. ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಮತ್ತೊಂದೆಡೆ, ಕೆಲವರಿಗೆ ಕೆಲಸದಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಅತ್ಯುತ್ತಮ ಅವಕಾಶಗಳು ಸಿಗಲಿವೆ. ಶತುಗಳ ಮೇಲೆ ಜಯ ಸಾಧ್ಸಿಉವಿರಿ.ಆಮದು-ರಫ್ತಿಗೆ ಸಂಬಂಧಿಸಿದ ಜನರು ಭಾರಿ ಲಾಭವನ್ನು ಗಳಿಸುತ್ತಾರೆ.  

4. ಮಕರ ಸಂಕ್ರಾಂತಿಯಂದು ವೃಶ್ಚಿಕ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಈ ಸಮಯದಲ್ಲಿ, ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ನೀವು ಅದರಲ್ಲಿ ಯಶಸ್ಸನ್ನು ಪಡೆಯುವಿರಿ. ಸರ್ಕಾರಿ ನೌಕರಿಯಲ್ಲಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ಧೈರ್ಯ ಹೆಚ್ಚಾಗಲಿದೆ ಮತ್ತು ಪ್ರಯಾಣದಿಂದ ಲಾಭವಿದೆ.  

5. ಸೂರ್ಯನ ಕೃಪೆಯಿಂದ ಕನ್ಯಾ ರಾಶಿಯವರಿಗೆ ಶುಭ ಫಲ ಪ್ರಾಪ್ತಿಯಾಗಲಿವೆ. ತಂದೆಯ ಬೆಂಬಲ ಸಿಗಲಿದೆ. ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನು ಗಳಿಸುವರು. ಗೌರವದಲ್ಲಿ ಹೆಚ್ಚಳವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕರಿಗೆ ಶೀಘ್ರದಲ್ಲೇ ಯಶಸ್ಸು ಸಿಗಲಿದೆ. (ಹಕ್ಕುತ್ಯಾಗ - ಈ ಲೇಖನನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link