Sun Transit In Aries 2023: ನಾಳೆ ಮಂಗಳನ ಮನೆಗೆ ಸೂರ್ಯನ ಪ್ರವೇಶ, 5 ರಾಶಿಗಳ ಜನರ ಜೀವನದಲ್ಲಿ ಭಾರಿ ಹಲ್ಚಲ್!
ಮೇಷ ರಾಶಿ: ನಿಮ್ಮ ಜಾತಕದಲ್ಲಿಯೇ ಸೂರ್ಯ ಪ್ರಥಮ ಭಾವದಲ್ಲಿ ಗೋಚರಿಸಲಿದ್ದಾನೆ. ಹೀಗಿರುವಾಗ ಮೇಷ ರಾಶಿಯ ಜಾತಕದವರ ಸ್ವಭಾವದಲ್ಲಿ ನೀವು ಸ್ವಲ್ಪ ಪರಿವರ್ತನೆಯನ್ನು ಕಾಣಬಹುದು, ಸಿಟ್ಟಿನ ಮೇಲೆ ನಿಯಂತ್ರಣವಿರಲಿ. ಏಕೆಂದರೆ ಕೈಗೂಡಿ ಬಂದ ಕೆಲಸಗಳು ಇದರಿಂದ ಹಾಳಾಗುವ ಸಾಧ್ಯತೆ ಇದೆ. ಆದರೆ ನೌಕರಿ ಹಾಗೂ ಬಿಸ್ನೆಸ್ ನಲ್ಲಿ ನಿಮಗೆ ಅಪಾರ ಲಾಭದ ಸಂಕೇತಗಳು ಗೋಚರಿಸುತ್ತಿವೆ.
ವೃಷಭ ರಾಶಿ: ನಿಮ್ಮ ಗೋಚರ ಜಾತಕದ ದ್ವಾದಶ ಭಾವದಲ್ಲಿ ಸೂರ್ಯನ ಈ ಗೋಚರ ನೆರವೇರುತ್ತಿದೆ. ಹೀಗಿರುವಾಗ ಈ ರಾಶಿಯ ಜಾತಕದವಾರು ಸ್ವಲ್ಪ ಸಮಸ್ಯೆಗಳನ್ನು ಎದುರಿಸಬೇಕಾಗುವ ಕಾಲ ಬರಲಿದೆ. ಸಾಕಷ್ಟು ಪರಿಶ್ರಮದ ಬಳಿಕ ಯಶಸ್ಸು ನಿಮ್ಮದಾಗಲಿದೆ. ಇದಲ್ಲದೆ ಪ್ರತಿಯೊಂದು ಕೆಲಸದಲ್ಲಿ ಯಾವುದಾದರೊಂದು ಅಡೆತಡೆ ಎದುರಾಗಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯ ಅಷ್ಟಮ ಭಾವದಲ್ಲಿ ಸೂರ್ಯನ ಈ ಗೋಚರ ನೆರವೇರುತ್ತಿದೆ. ಹೀಗಿರುವಾಗ ಈ ರಾಶಿಯ ಜಾತಕದವರಿಗೆ ಈ ಗೋಚರ ಶುಭ ಸಾಬೀತಾಗುತ್ತಿಲ್ಲ. ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ವ್ಯಾಪಾರದಲ್ಲಿ ಏರಿಳಿತಗಳು ಕಂಡುಬರಲಿವೆ. ಇದಲ್ಲದೆ ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡುವವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ಕಾಲ ಇದಾಗಿದೆ.
ಮಕರ ರಾಶಿ: ಈ ರಾಶಿಯ ಚತುರ್ಥ ಭಾವದಲ್ಲಿ ಸೂರ್ಯನ ಈ ಸಂಕ್ರಮಣ ನಡೆಯುತ್ತಿದೆ. ಹೀಗಿರುವಾಗ ಈ ರಾಶಿಯ ಜನರ ಜೀವನದಲ್ಲಿ ಸ್ವಲ್ಪ ಏರಿಳಿತಗಳು ಕಂಡುಬರಲಿವೆ. ಬಿಸ್ನೆಸ್ ಹಾಗೂ ನೌಕರಿಯಲ್ಲಿ ಕಷ್ಟಗಳು ಎದುರಾಗಳಿವೆ. ಹೀಗಾಗಿ ಯಾವುದೇ ರೀತಿಯ ಹೂಡಿಕೆ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಹೂಡಿಕೆ ಮಾಡುವುದು ಉತ್ತಮ. ಇದಲ್ಲದೆ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸುವುದು ಯಾವುದಕ್ಕೂ ಉತ್ತಮ.
ಮೀನ ರಾಶಿ: ಈ ರಾಶಿಯ ದ್ವಿತೀಯ ಭಾವದಲ್ಲಿ ಸೂರ್ಯ ಸಂಕ್ರಮಣ ನೆರವೇರುತ್ತಿದೆ. ಹೀಗಾಗಿ ನಿಮ್ಮ ಪಾಲಿಗೆ ಧನಹಾನಿಯ ಯೋಗ ಎದುರಾಗುವ ಸಾಧ್ಯತೆ ಇದೆ. ಕಾರ್ಯಸ್ಥಳದಲ್ಲಿ ಸಂಕಷ್ಟಗಳು ಎದುರಾಗಬಹುದು. ವ್ಯಾಪಾರದಲ್ಲಿ ಸ್ವಲ್ಪ ಕಡಿಮೆ ಲಾಭ ಸಿಗಬಹುದು. ಅನಾವಶ್ಯಕ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸ್ವಲ್ಪ ವಾಗ್ವಾದದ ಸ್ಥಿತಿ ಇರುವ ಸಾಧ್ಯತೆ ಇದೆ. ಸಂಯಮದಿಂದ ಇರುವುದು ಉತ್ತಮ. ಎಲ್ಲವೂ ಸರಿ ಹೋಗುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)