ಕರ್ಕ ರಾಶಿಗೆ ಸೂರ್ಯನ ಪ್ರವೇಶ, ಪಾಶ್ವಿಕ ಯೋಗ ನಿರ್ಮಾಣ, ಯಾರ ಮೇಲೆ ಹೇಗೆ ಪ್ರಭಾವ?
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯದೇವ ಕರ್ಕ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದ ಅಲ್ಲಿ ಪಾಶ್ವಿಕ ಯೋಗ ಕೂಡ ನಿರ್ಮಾಣಗೊಂಡಿದೆ. ಇದರಿಂದ ಒಟ್ಟು ಮೂರು ಜಾತಕದವರು ತುಂಬಾ ಎಚ್ಚರಿಕೆಯಿಂದ ಇರಬೇಕಾದ ಕಾಲ ಬಂದಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಮಿಥುನ ರಾಶಿ- ನಿಮ್ಮ ಗೋಚರ ಜಾತಕದ ಕೇಂದ್ರ ಹಾಗೂ ತ್ರಿಕೋನ ಭಾವದಲ್ಲಿ ಯಾವುದೇ ಶುಭ ಗ್ರಹ ಇಲ್ಲದ ಕಾರಣ, ಪಾಶ್ವಿಕ ರಾಜಯೋಗ ನಿಮ್ಮ ಪಾಲಿಗೆ ಹಾನಿಕಾರಕ ಸಾಬೀತಾಗುವ ಸಾಧ್ಯತೆ ಇದೆ. ತಂದೆ-ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಿ. ಆಸ್ತಿ-ಪಾಸ್ತಿ ಖರೀದಿ ಹಾಗೂ ಮಾರಾಟ ಮಾಡುವುದರಿಂದ ಆದಷ್ಟು ದೂರ ಉಳಿಯಿರಿ. ಬಾಳಸಂಗಾತಿಯ ಜೊತೆಗೆ ವಿರಸ ಉಂಟಾಗುವ ಸಾಧ್ಯತೆ ಇದೆ, ಹೀಗಾಗಿ ವಾಗ್ವಾದದಿಂದ ಆದಷ್ಟು ದೂರ ಉಳಿಯಿರಿ. ನೌಕರವರ್ಗದ ಜನರು ಕಾರ್ಯಸ್ಥಳದಲ್ಲಿ ಅಡೆತಡೆಗಳನ್ನು ಎದುರಿಸಬಹುದು. ಹೀಗಾಗಿ ಮೊದಲೇ ಯೋಜನೆ ರೂಪಿಸಿಕೊಂಡು ಕೆಲಸಕ್ಕೆ ಆಣಿಯಾಗಿ. ಆದಷ್ಟು ನಿರ್ಲಕ್ಷ ಧೋರಣೆ ತಳೆಯದೆ ಇರುವುದು ಉತ್ತಮ.
ಕನ್ಯಾ ರಾಶಿ: ನಿಮ್ಮ ಗೋಚರ ಜಾತಕದ ಕೇಂದ್ರ ಹಾಗೂ ತ್ರಿಕೋನ ಭಾವದಲ್ಲಿಯೂ ಕೂಡ ಯಾವುದೇ ಶುಭ ಗ್ರಹ ಇಲ್ಲದ ಕಾರಣ ಈ ಪಾಶ್ವಿಕ ಯೋಗ ನಿಮಗೆ ಹಾನಿಕಾರಕ ಸಾಬೀತಾಗಲಿದೆ. ಈ ಅವಧಿಯಲ್ಲಿ ಯಾವುದೇ ಹೊಸ ಕಾರ್ಯ ಆರಂಭಿಸಬೇಡಿ. ದಾಂಪತ್ಯ ಜೀವನದಲ್ಲಿಯೂ ಕೂಡ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದೆ. ತಂದೆ-ತಾಯಿಯರ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಇನ್ನೊಂದೆಡೆ ಪಾರ್ಟ್ನರ್ಶಿಪ್ ವ್ಯವಹಾರದಲ್ಲಿಯೂ ಕೂಡ ನಿಮಗೆ ಹಾನಿ ಸಂಭವಿಸುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದ ಬಗ್ಗೆಯೂ ಕೂಡ ನೀವು ವಿಶೇಷ ಕಾಳಜಿವಹಿಸುವ ಕಾಲ ಇದು ಎಂಬುದನ್ನು ಮರೆಯಬೇಡಿ.
ಧನು ರಾಶಿ: ನಿಮ್ಮ ಗೋಚರ ಜಾತಕದ ಮಾತೃ ಭಾವ ಹಾಗೂ ಸುಖ-ಸೌಕರ್ಯಗಳ ಭಾವಕ್ಕೆ ಅಧಿಪತಿಯಾಗಿದ್ದಾನೆ. ಆತ ರಾಹು ಪೀಡಿತನಾಗಿದ್ದಾನೆ. ಹೀಗಾಗಿ ಪಾಶ್ವಿಕ ಯೋಗ ನಿಮ್ಮ ಪಾಲಿಗೂ ಕೂಡ ಅಹಿತಕರ ಸಾಬೀತಾಗಲಿದೆ. ಇನ್ನೊಂದೆಡೆ ಶನಿದೇವನ ದೃಷ್ಟಿಯೂ ಕೂಡ ನಿಮ್ಮ ಜಾತಕದ ಮೇಲಿದೆ. ಇದರಿಂದ ನಿಮಗೆ ಕಷ್ಟಗಳು ಎದುರಾಗುವ ಸಾಧ್ಯತೆ ಇದೆ. ತಾಯಿಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಆಸ್ತಿಗೆ ಸಂಬಂಧಿಸಿದ ವಹಿವಾಟುಗಳನ್ನು ಆದಷ್ಟು ತಪ್ಪಿಸಿ ಅಥವಾ ಎಚ್ಚರಿಕೆಯಿಂದ ಮಾಡಿ. ವೃತ್ತಿಜೀವನದಲ್ಲಿಯೂ ಕೂಡ ಸಂಕಷ್ಟಗಳು ಎದುರಗಳಿವೆ. ವಾದವಿವಾದಗಳಿಂದ ದೂರ ಉಳಿಯಿರಿ. ಒಂದು ಸಂತೋಷದ ವಿಷಯ ಎಂದರೆ, ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಯೋಗವಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)