1 ವರ್ಷದ ಬಳಿಕ ಈ ರಾಶಿಗೆ ಸಿರಿ-ಸಂಪತ್ತು ಹೊತ್ತು ತಂದ ಸೂರ್ಯದೇವ! ದುಡ್ಡಿನ ಮಜ್ಜನ, ಹೆಚ್ಚಾಗಲಿದೆ ಸ್ಥಾನ-ಪ್ರತಿಷ್ಠೆ
ಗ್ರಹಗಳ ರಾಜನಾದ ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಹೀಗೆ ಒಂದು ರಾಶಿಗೆ ಮತ್ತೆ ಮರಳಲ್ಲಿ ಇಡೀ ವರ್ಷ ತೆಗೆದುಕೊಳ್ಳುತ್ತದೆ.
ಆಗಸ್ಟ್ 17 ರಂದು, ಮಧ್ಯಾಹ್ನ 1.23 ಕ್ಕೆ ಸೂರ್ಯನು ತನ್ನದೇ ಆದ ರಾಶಿ ಅಂದರೆ ಸಿಂಹವನ್ನು ಪ್ರವೇಶಿಸುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ರಾಶಿಗಳ ಜನರು ವಿಶೇಷ ಲಾಭವನ್ನು ಪಡೆಯುತ್ತಾರೆ.
ಮೇಷ ರಾಶಿ: ಈ ರಾಶಿಯಲ್ಲಿ ಸೂರ್ಯನು ಐದನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ ಮತ್ತು ಈ ಮನೆಯ ಅಧಿಪತಿ. ಹೀಗಾಗಿ ಈ ರಾಶಿಯ ಜನರ ಏಕಾಗ್ರತೆ, ಬುದ್ಧಿವಂತಿಕೆ ಮತ್ತು ಶಕ್ತಿಯು ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ ಮತ್ತು ಶ್ರಮದ ಫಲವನ್ನು ಸಹ ನೀವು ಪಡೆಯುತ್ತೀರಿ.
ವೃಷಭ ರಾಶಿ: ಈ ರಾಶಿಯಲ್ಲಿ ಸೂರ್ಯನು ನಾಲ್ಕನೇ ಮನೆಗೆ ಪ್ರವೇಶ ಮಾಡುತ್ತಿದ್ದಾನೆ ಮತ್ತು ಅವನೇ ಈ ಮನೆಯ ಅಧಿಪತಿ. ಹೀಗಾಗಿ ಈ ರಾಶಿಯವರಿಗೆ ಸಮಾಜದಲ್ಲಿ ಗೌರವ, ಸ್ಥಾನ, ಪ್ರತಿಷ್ಠೆ ದೊರೆಯುತ್ತದೆ. ಆರೋಗ್ಯ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೂ ಬಡ್ತಿ ಸಿಗಬಹುದು. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ.
ಸಿಂಹ ರಾಶಿ: ಈ ರಾಶಿಯಲ್ಲಿ ಸೂರ್ಯನು ಲಗ್ನ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಈ ರಾಶಿಯ ಜನರು ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಸಂಪತ್ತು ವೃದ್ಧಿಯಾಗಲಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ.
ತುಲಾ ರಾಶಿ: ಈ ರಾಶಿಯಲ್ಲಿ ಸೂರ್ಯನು ಹನ್ನೊಂದನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಯ ಜನರಿಗೆ ಇದ್ದಕ್ಕಿದ್ದಂತೆ ಹಣಕಾಸಿನ ಲಾಭ ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಯಶಸ್ಸನ್ನು ಸಾಧಿಸಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)