Sun Transit In Sagitarius: ಮಂದ ಸೂರ್ಯನೂ ಕೂಡ ಭಾಗ್ಯ ಬೆಳಗುತ್ತಾನೆ, ಯಾವ ರಾಶಿಗಳ ಮೇಲೆ ಕೃಪಾವೃಷ್ಟಿ ತಿಳಿಯಲು ಲೇಖನ ಓದಿ
ಮೇಷ - ಧನು ರಾಶಿಯ ಸೂರ್ಯನು ಮೇಷ ರಾಶಿಯವರಿಗೆ ಅದೃಷ್ಟವನ್ನು ಹೆಚ್ಚಿಸಲಿದ್ದಾನೆ. ಘನತೆ-ಗೌರವ ಹೆಚ್ಚಾಗಲಿದೆ. ಜ್ಞಾನ ವೃದ್ಧಿಯಾಗಲಿದೆ. ತಂದೆಯೊಂದಿಗಿನ ಸಂಬಂಧವು ಉತ್ತಮವಾಗಿರಲಿದೆ.
ವೃಷಭ - ವೃಷಭ ರಾಶಿಯವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ದೂರಾಗಲಿದೆ. ಗೃಹ ನಿರ್ಮಾಣದ ಕನಸು ನನಸಾಗಲಿದೆ. ಸೂರ್ಯನಿಗೆ ಅರ್ಘ್ಯ ಅರ್ಪಿಸುವುದರಿಂದ ಹೆಚ್ಚಿನ ಲಾಭ ಸಿಗಲಿದೆ.
ಕರ್ಕ - ಧನು ರಾಶಿಯಲ್ಲಿ ವಾಸಿಸುತ್ತಿರುವ ಸೂರ್ಯ ಕರ್ಕ ರಾಶಿಯವರಿಗೆ ಪ್ರಯೋಜನವನ್ನು ನೀಡಲಿದ್ದಾನೆ. ಸಾಲದ ಹೊರೆಯಿಂದ ಮುಕ್ತಿ ಸಿಗಲಿದೆ. ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ತಂದೆ ನೀಡಿರುವ ಸಲಹೆಗಳನ್ನು ಪಾಲಿಸುವುದರಿಂದ ನಿಮಗೆ ಲಾಭ ಸಿಗಲಿದೆ.
ಸಿಂಹ - ಸಿಂಹ ರಾಶಿಯ ಜನರಲ್ಲಿ ಹೆಚ್ಚಿದ ಆತ್ಮವಿಶ್ವಾಸವು ಅವರಿಂದ ಎಂತಹ ದೊಡ್ಡ ಕೆಲಸವನ್ನಾದರೂ ಕೂಡ ಮಾಡಿಸಬಹುದು. ಕೆಲಸಕ್ಕೆ ಮೆಚ್ಚುಗೆ ಸಿಗಲಿದೆ. ವ್ಯಕ್ತಿತ್ವ ಬೆಳಗಲಿದೆ.
ತುಲಾ - ತುಲಾ ರಾಶಿಯ ಜನರ ಸಾಮರ್ಥ್ಯ ಹೆಚ್ಚಾಗಲಿದೆ. ಧನ-ಲಾಭದ ಸಂಕೇತಗಳಿವೆ. ಬಡ್ತಿ-ಗೌರವ ಹೆಚ್ಚಾಗಲಿದೆ. ಪ್ರಭಾವದ ವ್ಯಾಪ್ತಿ ಹೆಚ್ಚಾಗುತ್ತದೆ.