ದೀಪಾವಳಿಯ ಬಳಿಕ ವೃಶ್ಚಿಕ ರಾಶಿಗೆ ಸೂರ್ಯನ ಪ್ರವೇಶ, ಧನಕುಬೇರ ಕೃಪೆಯಿಂದ ಈ ಜನರಿಗೆ ಅಷ್ಟೈಶ್ವರ್ಯ ಪ್ರಾಪ್ತಿಯೋಗ!
Sun Transit In Vruschika Rashi: ಶೀಘ್ರದಲ್ಲಿಯೇ ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯನ ವೃಶ್ಚಿಕ ರಾಶಿ ಗೋಚರ ನೆರವೇರಲಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದ್ದು, ಇವರಿಗೆ ಅಷ್ಟೈಶ್ವರ್ಯ ಪ್ರಾಪ್ತಿಯಾಗಲಿದೆ. (Spiritual News In Kannada)
ಮೀನ ರಾಶಿ: ಈ ಅವಧಿಯಲ್ಲಿ ಸೂರ್ಯ ನಿಮ್ಮ ಜಾತಕದ ನವಮ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಅಪ್ರತ್ಯಕ್ಷ ರೂಪದಲ್ಲಿ ನಿಮಗೆ ಧನಲಾಭ ಉಂಟಾಗಲಿದೆ ಮತ್ತು ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಅಪಾರ ಸುಧಾರಿಸಲಿದೆ. ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸಲಿದ್ದು, ಈ ಯಾತ್ರೆ ನಿಮಗೆ ಶುಭ ಫಲಗಳನ್ನು ನೀಡುವ ಸಾಧ್ಯತೆ ಇದೆ. ಮನೆಯಲ್ಲಿ ಧಾರ್ಮಿಕ ಅಥವಾ ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ಗೋಚರ ಜಾತಕದ ಶಷ್ಟಮ ಭಾವಕ್ಕೆ ಸೂರ್ಯ ಅಧಿಪತಿ, ಹೀಗಾಗಿ ಈ ಅವಧಿಯಲ್ಲಿ ಕೋರ್ಟ್-ಕಚೇರಿ ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.
ಕರ್ಕ ರಾಶಿ: ಸೂರ್ಯ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಸಂಚರಿಸಲಿದ್ದಾನೆ ಹೀಗಾಗಿ ಮಕ್ಕಳ ಕಡೆಯಿಂದ ನಿಮಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಮಕ್ಕಳ ನೌಕರಿ ಅಥವಾ ವಿವಾಹ ನಿಶ್ಚಿತಾರ್ಥ ಜರಗುವ ಸಾಧ್ಯತೆ ಇದೆ. ಪ್ರೇಮ ಸಂಬಂಧಗಳಲ್ಲಿ ಕೂಡ ನಿಮಗೆ ಯಶಸ್ಸು ಸಿಗಲಿದೆ. ಇದಲ್ಲದೆ ನಿಮಗೆ ಭೂಮಿ-ವಾಹನ ಹಾಗೂ ಕೌಟುಂಬಿಕ ಸುಖ ಕೂಡ ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಅಪಾರ ವೃದ್ಧಿಯಾಗಲಿದೆ. ಧನಪ್ರಾಪ್ತಿಯ ಎಲ್ಲಾ ಯೋಗಗಳು ಗೋಚರಿಸುತ್ತಿವೆ. ವಿದ್ಯಾರ್ಥಿಗಳ ಪಾಲಿಗೆ ಸಮಯ ಉತ್ತಮವಾಗಿದೆ.
ಕನ್ಯಾ ರಾಶಿ: ಸೂರ್ಯನ ವೃಶ್ಚಿಕ ಗೋಚರದ ಅವಧಿಯಲ್ಲಿ ಸೂರ್ಯ ನಿಮ್ಮ ಜಾತಕ್ಕದ ತೃತೀಯ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸದಲ್ಲಿ ಅಪಾರ ವೃದ್ಧಿಯನ್ನು ನೀವು ಗಮನಿಸಬಹುದು. ಸಾಹಸ ಪರಾಕ್ರಮ ಕೂಡ ಹೆಚ್ಚಾಗಲಿದೆ. ಸರ್ಕಾರಿಯೆ ಆಗಲಿ ಅಥವಾ ಖಾಸಗಿಯೇ ಆಗಿರಲಿ, ನೌಕರವರ್ಗದ ಜನರಿಗೆ ಈ ಅವಧಿಯಲ್ಲಿ ಪದೋನ್ನತಿ ಭಾಗ್ಯ ಪ್ರಾಪ್ತಿಯಾಗಲಿದೆ. ಸೂರ್ಯ ನಿಮ್ಮ ಜಾತಕದ 12ನೇ ಭಾವಕ್ಕೆ ಅಧಿಪತಿ, ಹೀಗಾಗಿ ಈ ಅವಧಿಯಲ್ಲಿ ನೀವು ಹಣ ಉಳಿತಾಯ ಮಾಡುವಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸುವಿರಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)