ಸೂರ್ಯ ಗೋಚಾರದಿಂದ 3 ಶುಭಕರ ರಾಜಯೋಗದಿಂದ ಈ ರಾಶಿಯವರ ಬಾಳೇ ಬಂಗಾರ
ಆಗಸ್ಟ್ 15ರ ಈ ದಿನ ಗ್ರಹಗಳ ಅಧಿಪತಿ ಸೂರ್ಯದೇವ ತನ್ನದೇ ಆದ ಸಿಂಹ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಸೂರ್ಯ ರಾಶಿ ಪರಿವರ್ತನೆಯಿಂದ ಶುಭ ಯೋಗಗಳು ನಿರ್ಮಾಣವಾಗಲಿವೆ.
ಈಗಾಗಲೇ ಸಿಂಹ ರಾಶಿಯಲ್ಲಿ ಬುಧ-ಶುಕ್ರರ ಯುತಿಯಿಂದ ಲಕ್ಷ್ಮೀ ನಾರಾಯಣ ಯೋಗ ರೂಪುಗೊಂಡಿದೆ.
ಇದೀಗ ಸಿಂಹ ರಾಶಿಗೆ ಸೂರ್ಯನ ಪ್ರವೇಶದೊಂದಿಗೆ ಸೂರ್ಯ-ಬುಧರ ಸಂಯೋಗದಿಂದ ಬುಧಾದಿತ್ಯ ರಾಜಯೋಗ ಹಾಗೂ ಸೂರ್ಯ-ಶುಕ್ರರ ಸಂಯೋಗದಿಂದ ಶುಕ್ರಾದಿತ್ಯ ರಾಜಯೋಗಗಳು ನಿರ್ಮಾಣವಾಗಲಿವೆ.
ಈ ರೀತಿಯಲ್ಲಿ ಸಿಂಹರಾಶಿಯಲ್ಲಿ ಲಕ್ಷ್ಮೀ ನಾರಾಯಣ, ಬುಧಾದಿತ್ಯ, ಶುಕ್ರಾದಿತ್ಯ ರಾಜಯೋಗದಿಂದಾಗಿ ಕೆಲವು ರಾಶಿಯವರ ಬದುಕು ಸೂರ್ಯನಂತೆಯೇ ಉಜ್ವಲಿಸಲಿದೆ ಎಂದು ಹೇಳಲಾಗುತ್ತಿದೆ.
ಕೈ ಹಾಕಿದ ಕೆಲಸಗಲಲ್ಲೆಲ್ಲಾ ವಿಜಯ. ಮಕ್ಕಳಿಂದ ಸಂತಸದ ಸುದ್ದಿ, ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಜೊತೆಗೆ ದಾಂಪತ್ಯ ಜೀವನದಲ್ಲಿ ಸುಖ-ನೆಮ್ಮದಿಯನ್ನು ಕಾಣಬಹುದು.
ವ್ಯಾಪಾರಸ್ಥರಿಗೆ ಸುವರ್ಣ ಸಮಯ. ನಿಮ್ಮ ಬಹುದಿನಗಳ ಕನಸು ನನಸಾಗುವ ಕಾಲ. ಉದ್ಯೋಗಸ್ಥರಿಗೆ ಬಡ್ತಿ, ದೂರ ಪ್ರಯಾಣದಿಂದ ಧನಲಾಭವಾಗಲಿದೆ.
ಆಪ್ತ ಸ್ನೇಹಿತರಿಂದ ಸ್ಥಗಿತಗೊಂಡಿರುವ ಕೆಲಸಗಳಲ್ಲಿ ಪ್ರಗತಿ ಕಂಡು ಬರಲಿದೆ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆರೋಗ್ಯದಲ್ಲಿ ಸುಧಾರಣೆ. ಕಾರ್ಮಿಕ ವರ್ಗದವರಿಗೆ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಹಣಕಾಸಿನ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ.
ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು ವ್ಯಾಪಾರ-ವ್ಯವಹಾರದಲ್ಲಿ ಯಶಸ್ಸು. ಸಂಪತ್ತು ವೃದ್ದಿಯಾಗಿ ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುವ ಸಾಧ್ಯತೆ ಇದೆ. ವ್ಯಾಪಾರವನ್ನು ವಿಸ್ತರಿಸಲು ಅನುಕೂಲಕರ ಸಮಯ.
ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ಅದೃಷ್ಟದ ಸಮಯ. ಉದ್ಯೋಗಸ್ಥರಿಗೆ ಕೀರ್ತಿ, ಯಶಸ್ಸು. ಪ್ರಯಾಣದಿಂದ ಲಾಭ. ಬೇರೆಡೆ ಸಿಲುಕಿರುವ ಹಣ ಕೈ ಸೇರುವ ಕಾಲ. ಉತ್ತಮ ಆರೋಗ್ಯವನ್ನು ಅನುಭವಿಸುವಿರಿ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.