ಉತ್ತರಾ ಫಾಲ್ಗುಣಿ ನಕ್ಷತ್ರಕ್ಕೆ ಸೂರ್ಯನ ಪ್ರವೇಶ, ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ಅಪಾರ ಧನಕೀರ್ತಿ-ಲಾಭ ಪ್ರಾಪ್ತಿ!
ಸೂರ್ಯನ ಸ್ವನಕ್ಷತ್ರ ಗೋಚರದಿಂದ ಹಲವು ರಾಶಿಗಳ ಜೀವನದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇನ್ನೊಂದೆಡೆ ಅವರ ಜೀವನದಲ್ಲಿ ಅಹಂಕಾರ ಕೂಡ ಸ್ಥಾನ ಪಡೆದುಕೊಳ್ಳುತ್ತದೆ. ಆದರೆ, ಸ್ವಲ್ಪ ಯೋಚನೆಯಿಂದ ಮುಂದಕ್ಕೆ ಸಾಗಿದರೆ, ತನ್ನ ಪ್ರಭಾವಶಾಲಿ ವ್ಯಕ್ತಿತ್ವದ ಕಾರಣ ಪ್ರತಿಯೊಬ್ಬರ ಫೇವರಿಟ್ ಎನಿಸಿಕೊಳ್ಳುತ್ತಾರೆ.
ಮಿಥುನ ರಾಶಿ: ಸೂರ್ಯನ ಉತ್ತರಾ ಫಾಲ್ಗುಣಿ ನಕ್ಷತ್ರ ಪ್ರವೇಶ ನಿಮ್ಮ ಆತ್ಮವಿಶ್ವಾಸವನ್ನು ಅಪಾರ ಹೆಚ್ಚಿಸಲಿದೆ. ನಿಂತುಹೋದ ಕೆಲಸ ಕಾರ್ಯಗಳಿಗೆ ಪುನಃ ವೇಗ ಸಿಗಲಿದೆ. ಹಲವು ಡೀಲ್ ಗಳನ್ನು ಅಂತಿಮಗೊಳಿಸುವಿರಿ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕಾಲ ಉತ್ತಮವಾಗಲಿದೆ. ಉನ್ನತ ಅಧಿಕಾರಿಗಳು ನಿಮ್ಮ ಆತ್ಮವಿಶ್ವಾಸ ಹಾಗೂ ನೇತೃತ್ವದ ಗುಣಗಳಿಂದ ಪ್ರಭಾವಿತರಾಗುವರು. ಇದರಿಂದ ನಿಮಗೆ ದೊಡ್ಡ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಕಠಿಣ ಪರಿಶ್ರಮದ ಲಾಭ ನಿಮಗೆ ಸಿಗಲಿದೆ. ಹೂಡಿಕೆ ಕೂಡ ನಿಮಗೆ ಸಾಕಷ್ಟು ಲಾಭ ತಂದು ಕೊಡಲಿದೆ. ಉತ್ತಮ ಆದಾಯ ನಿಮ್ಮದಾಗಲಿದೆ. ಅಪ್ರತ್ಯಕ್ಷವಾಗಿ ನಿಮಗೆ ಧನಪ್ರಾಪ್ತಿಯಾಗಲಿದೆ ಹಾಗೂ ಯಾವುದಾದರೊಂದು ರೀತಿಯಲ್ಲಿ ಆರ್ಥಿಕ ಲಾಭ ನಿಮ್ಮದಾಗಲಿದೆ. ಇದಲ್ಲದೆ ಯಾತ್ರೆಯಿಂದ ಕೂಡ ನಿಮಗೆ ಲಾಭವಾಗಲಿದೆ.
ಸಿಂಹ ರಾಶಿ: ನಿಮ್ಮ ಜಾತಕದ ಮೊದಲ ಭಾವಕ್ಕೆ ಸೂರ್ಯ ಅಧಿಪತಿಯಾಗಿದ್ದಾನೆ. ಹೀಗಿರುವಾಗ ಸೂರ್ಯನ ಈ ಸ್ವನಕ್ಷತ್ರ ಗೋಚರ ನಿಮಗೆ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಜನರಿಗೆ ಯಶಸ್ಸು ಪ್ರಾಪ್ತಿಯಾಗಲಿದೆ. ಈ ಜಾತಕದವರಿಗೆ ನೇತೃತ್ವ ಕೌಶಲ್ಯ, ಆಕರ್ಷಕ ವ್ಯಕ್ತಿತ್ವ ಪ್ರಾಪ್ತಿಯಾಗಲಿದೆ. ಹೀಗಿರುವಾಗ ಸಾಮಾಜಿಕ ಘನತೆ-ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ಶಾಂತಿಯಿಂದ ನೀವು ಕೈಗೊಂಡ ನಿರ್ಧಾರಗಳು ಸರಿ ಸಾಬೀತಾಗಳಿವೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಪ್ರತಿಯೊಬ್ಬರು ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಪೂರ್ಣಗೊಳ್ಳಲಿದೆ.
ಧನು ರಾಶಿ- ನಿಮ್ಮ ಗೋಚರ ಜಾತಕದ ನವಮ ಭಾವಕ್ಕೆ ಸೂರ್ಯ ಅಧಿಪತಿಯಾಗಿದ್ದಾನೆ. ಹೀಗಿರುವಾಗ ಸೂರ್ಯನ ಈ ಸ್ವನಕ್ಷತ್ರ ಗೋಚರ ನಿಮ್ಮ ಧನ-ಧಾನ್ಯವನ್ನು ಹೆಚ್ಚಿಸಲಿದೆ. ಇತರ ಮೇಲೆ ದಯೆ ತೋರುವಿರಿ ಮತ್ತು ಸಂವೇದನೆಯನ್ನು ವ್ಯಕ್ತಪಡಿಸುವಿರಿ. ಹೀಗಿರುವಾಗ ಎಲ್ಲರ ಪ್ರೀತಿಗೆ ನೀವು ಪಾತ್ರರಾಗುವಿರಿ. ಪ್ರತಿಯೊಬ್ಬರು ನಿಮ್ಮ ಕುರಿತು ಪ್ರಶಂಸೆಯ ಮಾತುಗಳನ್ನಾಡಲಿದ್ದಾರೆ. ವೃತ್ತಿಜೀವನದಲ್ಲಿಯೂ ಕೂಡ ನಿಮಗೆ ಆಕಸ್ಮಿಕ ಲಾಭ ಉಂಟಾಗಲಿದೆ. ಕಾರ್ಯಸ್ಥಳದಲ್ಲಿ ನಿಮ್ಮ ಪ್ರತಿಷ್ಠೆ ಹಲವು ಪಟ್ಟು ಹೆಚ್ಚಾಗಲಿದೆ. ಅಧಿಕಾರ ಸ್ಥಾನದಲ್ಲಿರುವವರಿಗೆ ಯಶಸ್ಸು ಪ್ರಾಪ್ತಿಯಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)