ಖಾಲಿ ಹೊಟ್ಟೆಯಲ್ಲಿ ಈ 2 ಬೀಜಗಳನ್ನು ಜಗಿದು ತಿಂದ್ರೆ ಹೈ ಶುಗರ್ ಕೂಡ ಕೆಲ ಹೊತ್ತಲ್ಲೇ ಕಂಟ್ರೋಲ್ ಆಗುತ್ತೆ!
ಮಧುಮೇಹ ರೋಗಿಗಳಲ್ಲಿ ಸಕ್ಕರೆಯ ಚಯಾಪಚಯ ದುರ್ಬಲಗೊಳ್ಳುತ್ತದೆ. ಹಾಗಾಗಿಯೇ, ಆಹಾರ ಸೇವಿಸಿದಾಗ ದೇಹವು ಸಕ್ಕರೆಯನ್ನು ಜೀರ್ಣಿಸಿಕೊಳ್ಳುವ ಬದಲು ಅದನ್ನು ರಕ್ತದಲ್ಲಿ ಬೆರೆಸುತ್ತದೆ. ಇದರಿಂದಾಗಿ ಬ್ಲಡ್ ಶುಗರ್ ಏರುಪೇರಾಗುತ್ತದೆ.
ಮಧುಮೇಹಿಗಳಿಗೆ ಎರಡು ಬಗೆಯ ಬೀಜಗಳು ತುಂಬಾ ಲಾಭದಾಯಕವಾಗಿವೆ. ಖಾಲಿ ಹೊಟ್ಟೆಯಲ್ಲಿ ಇವುಗಳ ಸೇವನೆಯು ಚಯಾಪಚಯವನ್ನು ಹೆಚ್ಚಿಸಿ ಇನ್ಸುಲಿನ್ ಕೋಶಗಳ ವೇಗವನ್ನು ಹೆಚ್ಚಿಸುತ್ತವೆ ಎನ್ನಲಾಗುತ್ತದೆ.
ಮಧುಮೇಹ ನಿಯಂತ್ರಣಕ್ಕೆ ಅಗಸೆ ಬೀಜಗಳು ಮತ್ತು ಸೂರ್ಯಕಾಂತಿ ಬೀಜಗಳನ್ನು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಸೂರ್ಯಕಾಂತಿ ಬೀಜಗಳಲ್ಲಿ ಕಂಡು ಬರುವ ಸೆಕೊಸೊಲಾರಿಶೀನಾಲ್ ಡಿಗ್ಲುಕೋಸೈಡ್ ಉತ್ತಮ ಗ್ಲೈಸೆಮಿಕ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಗೆ ತುಂಬಾ ಲಾಭದಾಯಕವಾಗಿದೆ.
ಅಗಸೆ ಬೀಜಗಳಲ್ಲಿ ಫೈಬರ್ ಹೆಚ್ಚಾಗಿದ್ದು ಇದು ಜೀರ್ಣಕ್ರಿಯೆ, ಸಕ್ಕರೆ ಚಯಾಪಚಯವನ್ನು ವೇಗಗೊಳಿಸಿ, ಇನ್ಸುಲಿನ್ ಕೋಶಗಳನ್ನು ಉತ್ತೇಜಿಸುತ್ತದೆ. ಇದರಿಂದಾಗಿ ಮಧುಮೇಹಿಗಳಲ್ಲಿ ಬ್ಲಡ್ ಶುಗರ್ ಏರುಪೇರಾಗುವುದನ್ನು ತಪ್ಪಿಸಲು ಸಹಾಯಕವಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.