ರಾಹುಲ್ ದ್ರಾವಿಡ್‌ಗೆ ಭಾರತ ರತ್ನ..?ಅಚ್ಚರಿ ಹೇಳಿಕೆ ಕೊಟ್ಟ ಸುನೀಲ್ ಗವಾಸ್ಕರ್..!
Sunil Gavaskar: ಭಾರತ ತಂಡ ಟಿ20 ವಿಶ್ವಕಪ್ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದೆ. ಈ ಗೆಲುವಿಗೆ ಮುಖ್ಯ ಕಾರಣರಾದವರಲ್ಲಿ ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಕೂಡ ಒಬ್ಬರು. ಇದೀಗ ರಾಹುಲ್ ದ್ರಾವಿಡ್ ಅವರಿಗೆ ಭಾರತ ರತ್ನ ನೀಡಬೇಕೆಂದು ಹೇಳಿ ಭಾರತ ತಂಡದ ಮಾಜಿ ಕ್ರಿಕೆಟಿಗೆ ಸುನಿಲ್ ಗವಾಸ್ಕರ್ ಒತ್ತಾಯಿಸಿದ್ದಾರೆ.
ಭಾರತ ತಂಡದ ಆಟಗಾರರು ಅಷ್ಟು ಒತ್ತಡದ ನಡುವೆಯೂ ಗೆದ್ದು ಬೀಗಿದದಾರೆ. ಪ್ರತಿ ಹೆಜ್ಜೆಯಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿ ವೀರರು, ಗೆದ್ದು ಚಾಂಪಿನ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಎಂದು ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಈ ಪಂದ್ಯವನ್ನು ಗೆಲ್ಲಲು ಸಹಾಯ ಮಾಡುವ ಮೂಲಕ ರಾಹುಲ್ ದ್ರಾವಿಡ್ ತಮ್ಮ ಕೋಚ್ ಅಧಿಕಾರಕ್ಕೆ ವಿದಾಯ ಕೂಡ ಹೇಳಿದ್ದಾರೆ. ಕ್ರಿಕೆಟ್‌ನಲ್ಲಿ ರಾಹುಲ್ ದರಾವಿಡ್ ಮಾಡಿರುವ ಕೆಲಸ ಅಗಾದ. ಕೇವಲ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಅಷ್ಟೆ ಅಲ್ಲ, ರಾಹುಲ್ ದರಾವಿಡ್ ಅವರು ಕ್ರಿಕೆಟ್‌ಗೆ ನೀಡಿರುವ ಕೊಡುಗೆ ಅಪಾರ. ಅವರಿಗೆ ಈ ಗೌರವ ನೀಡುವುದು ಸೂಕ್ತ ಎಂದಿದ್ದಾರೆ.
ಈ ಮುಂಚೆ ಭಾರತ ರತ್ನ ಪ್ರಶಸ್ತಿಯನ್ನು ಕೇವಲ ಒಬ್ಬರೇ ಒಬ್ಬರು ಪಡೆದಿದ್ದಾರೆ. ಅದು ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್. 2013ರಲ್ಲಿ ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದಾದ ಒಂದು ವರ್ಷದ ನಂತರ ಅಂದರೆ 2014ರಲ್ಲಿ ಅವರು ಕ್ರಿಕೆಟ್‌ಗೆ ನೀಡಿದ ಕೊಡುಗೆಗೆ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೀಗ ಇದೇ ಗೌರವ ರಾಹುಲ್ ದ್ರಾವಿಡ್‌ಗೂ ಸಿಗಬೇಕೆಂದು ಸುನಿಲ್ ಗವಾಸ್ಕರ್ ಮನವಿ ಮಾಡಿದ್ದಾರೆ.
" ರಾಹುಲ್ ದ್ರಾವಿಡ್ ಅವರ ಸಾಧನೆಗಳನ್ನು ಗುರುತಿಸಿ ಅವರಿಗೆ ಸರ್ಕಾರ, ಭಾರತ ಪ್ರಶಸ್ತಿ ನೀಡಬೇಕು, ಈ ಪ್ರಶಸ್ತಿಗೆ ಅವರು ತುಂಬಾ ಅರ್ಹರು" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ