ಕಾವ್ಯಾ ಮಾರನ್ ಎಷ್ಟೊಂದು ಸಿರಿವಂತೆ ಗೊತ್ತಾ? ವಿರಾಟ್ ಕೊಹ್ಲಿಗಿಂತಲೂ ದುಪ್ಪಟ್ಟು ಆಸ್ತಿ ಹೊಂದಿರುವ ಈಕೆ ಕನ್ನಡದ ಪ್ರಖ್ಯಾತ ಚಾನೆಲ್’ವೊಂದರ ಮಾಲಕಿ
ಸನ್’ರೈಸರ್ಸ್ ಹೈದರಾಬಾದ್ (SRH) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವೆ ನಡೆದ ಐಪಿಎಲ್ ಫೈನಲ್ ಫೈಟ್’ನಲ್ಲಿ ಕೆಕೆಆರ್ ಗೆಲುವಿನ ನಗೆಬೀರಿ, ಚಾಂಪಿಯನ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಅಂದಹಾಗೆ ನಾವಿಂದು ಈ ವರದಿಯಲ್ಲಿ ಸನ್’ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಆಸ್ತಿ ಮೌಲ್ಯ ಎಷ್ಟಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕಾವ್ಯಾ ಮಾರನ್ ತಂದೆ ತನ್ನ ಭಾರತೀಯ ದೂರದರ್ಶನದ ರಾಜ ಎಂದೇ ಕರೆಯಲ್ಪಡುವವರು. ಇವರ ಸಂಪತ್ತಿನ ಬಗ್ಗೆ ಹೇಳುವುದಾದರೆ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾಗಿಂತ ದುಪ್ಪಟ್ಟು ಇದೆ,
ಕಾವ್ಯಾ ಮಾರನ್ ಜನಿಸಿದ್ದು ಆಗಸ್ಟ್ 1992ರಲ್ಲಿ ಚೆನ್ನೈನಲ್ಲಿ... ತಮ್ಮ ಶಾಲಾ ಶಿಕ್ಷಣವನ್ನು ಚೆನ್ನೈನಲ್ಲಿ ಪೂರ್ಣಗೊಳಿಸಿದ ಅವರು, ಚೆನ್ನೈನ ಸ್ಟೀಲ್ ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ವಾಣಿಜ್ಯದಲ್ಲಿ ಪದವಿ ಪಡೆದರು. ಆ ಬಳಿಕ ಲಂಡನ್‌ಗೆ ತೆರಳಿ ಅಲ್ಲಿಂದಲೇ ಎಂಬಿಎ ಮುಗಿಸಿದರು. ಕಾವ್ಯಾ ಕುಟುಂಬ ರಾಜಕೀಯ ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ.
ತಂದೆಯ ಹೆಸರು ಕಲಾನಿಧಿ ಮಾರನ್. ಕಲಾನಿಧಿ ಸನ್ ಗ್ರೂಪ್’ನ ಅಧ್ಯಕ್ಷ ಮತ್ತು ಸಂಸ್ಥಾಪಕರು. ಕಾವ್ಯಾ ಕುಟುಂಬಕ್ಕೂ ರಾಜಕೀಯ ಪ್ರಭಾವವಿದೆ. ಅವರ ಅಜ್ಜ ಮರಸೋಲಿ ಮಾರನ್ ಮಾಜಿ ಕೇಂದ್ರ ವಾಣಿಜ್ಯ ಸಚಿವರಾಗಿದ್ದು, ಅವರ ಚಿಕ್ಕಪ್ಪ ದಯಾನಿಧಿ ಮಾರನ್ ಕೇಂದ್ರ ಸಚಿವರಾಗಿದ್ದರು.
ಕಾವ್ಯ ಕಲಾನಿಧಿ ಮಾರನ್ ಒಬ್ಬಳೇ ಮಗು. ಫೋರ್ಬ್ಸ್ ಪಟ್ಟಿಯ ಪ್ರಕಾರ, ಭಾರತದ ಬಿಲಿಯನೇರ್’ಗಳ ಪಟ್ಟಿಯಲ್ಲಿ 82 ನೇ ಸ್ಥಾನದಲ್ಲಿದ್ದಾರೆ. ಸುಮಾರು 24 ಸಾವಿರ ರೂಪಾಯಿ ಆಸ್ತಿ ಹೊಂದಿದ್ದಾರೆ. ದೂರದರ್ಶನ ಚಾನೆಲ್’ಗಳು, ಪತ್ರಿಕೆಗಳು, ವಾರಪತ್ರಿಕೆಗಳು, ಸ್ಯಾಟಲೈಟ್ ಸೇವೆಗಳು, ಉತ್ಪಾದನಾ ಸೌಲಭ್ಯಗಳು ಎಲ್ಲೆಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
ಕಾವ್ಯ ಸುಮಾರು 24 ಸಾವಿರ ಕೋಟಿಯ ಒಡತಿ ಎಂದೇ ಹೇಳಬಹುದು. SRH ನಿರ್ವಹಣೆಯಲ್ಲೂ ತೊಡಗಿಸಿಕೊಂಡಿರುವ ಕಾವ್ಯಾ, ಸನ್ ಟಿವಿ ಇ-ಕಾಮರ್ಸ್ ವ್ಯವಹಾರದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.
ಕಳೆದ ವರ್ಷ ಡಿಸೆಂಬರ್’ನಲ್ಲಿ ಐಪಿಎಲ್ ಹರಾಜು ನಡೆದಾಗ ಕಾವ್ಯಾ ಗಮನ ಸೆಳೆದಿದ್ದರು. ಅವರ ತಂಡವು ಆಸ್ಟ್ರೇಲಿಯನ್ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಅವರನ್ನು 20 ಮಿಲಿಯನ್’ಗಿಂತಲೂ ಹೆಚ್ಚು ಬೆಲೆಗೆ ಖರೀದಿಸಿತು.