ಈ super Drink ಅನ್ನು ಬೆಳಿಗ್ಗೆ ಎದ್ದ ತಕ್ಷಣ ಕುಡಿದು ಬಿಡಿ ! ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಆಗಿ ಬಿಡುತ್ತದೆ

Fri, 15 Mar 2024-12:30 pm,

ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಅವರು ಹೆಚ್ಚಿನ ಸಕ್ಕರೆ ಹೊಂದಿರುವ ಆಹಾರ ಸೇವನೆಯಿಂದ ದೂರ ಇರಬೇಕು. ಇದರೊಂದಿಗೆ, ಮಧುಮೇಹ ರೋಗಿಗಳಿಗೆ ದೈಹಿಕ ಚಟುವಟಿಕೆ ಕೂಡಾ ಬಹಳ ಮುಖ್ಯವಾಗಿದೆ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಕೆಲವು ಸರಳ ನೈಸರ್ಗಿಕ ಪಾನೀಯಗಳು ಇಲ್ಲಿವೆ.  

ಮಧುಮೇಹ ರೋಗಿಗಳಿಗೆ ಬೆಳಿಗ್ಗೆ ಹಾಗಲಕಾಯಿ ರಸವನ್ನು ಕುಡಿಸಬೇಕು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಮಾತ್ರವಲ್ಲದೆ ಇತರ ಅನೇಕ ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸುತ್ತದೆ. ಇದರ ಕಹಿಯು ಮಧುಮೇಹಿಗಳ ಆರೋಗ್ಯಕ್ಕೆ ಸಿಹಿಯಾಗಿರುತ್ತದೆ.   

ಮಧುಮೇಹಿಗಳಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುವ ವಸ್ತುಗಳಲ್ಲಿ ನೆಲ್ಲಿಕಾಯಿಗೆ ಪ್ರಮುಖ ಸ್ಥಾನವಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿನ ಹೆಚ್ಚಳವನ್ನು ತಡೆಯುತ್ತದೆ. ನೆಲ್ಲಿಕಾಯಿ ರಸವು ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿಯೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ.   

ಅರಿಶಿನದಲ್ಲಿರುವ ಕರ್ಕ್ಯುಮಿನ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅರಿಶಿನ ಹಾಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಅಲರ್ಜಿ ವಿರೋಧಿ ಗುಣಗಳನ್ನು ಹೊಂದಿದೆ.

ಅಲೋವೆರಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹಿಗಳು ಅಲೋವೆರಾ ಜ್ಯೂಸ್ ಅನ್ನು ಪ್ರತಿದಿನ ಕುಡಿಯಬಹುದು.

ಗ್ರೀನ್ ಟೀ  ಮಧುಮೇಹ ರೋಗಿಗಳಿಗೆ ಇದು ಸೂಕ್ತವಾಗಿರುವ ಪಾನೀಯ. ಪ್ರತಿದಿನ ಗ್ರೀನ್ ಟೀ ಕುಡಿಯುವುದರಿಂದ ಟೈಪ್ 2 ಮಧುಮೇಹದ ಅಪಾಯ ಕಡಿಮೆಯಾಗುತ್ತದೆ.  (ಸೂಚನೆ :  ಈ ಲೇಖನ ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸುವುದಿಲ್ಲ )

ZEENEWS TRENDING STORIES

By continuing to use the site, you agree to the use of cookies. You can find out more by Tapping this link