ಚಳಿಗಾಲದಲ್ಲಿ ಇದೇ ಕಾರಣಕ್ಕೆ ತಿನ್ನಬೇಕು ಮೆಂತ್ಯೆ ಸೊಪ್ಪು !
ಚಳಿಗಾಲದಲ್ಲಿ ಮೆಂತ್ಯ ಸೊಪ್ಪು ಹೆಚ್ಚಿಗೆ ಸಿಗುವುದರಿಂದ ಇದನ್ನೂ ಬೇರೆ ಬೇರೆ ವಿಧದ ಆಹಾರಗಳಲ್ಲಿ ಬಳಸಬಹುದು. ಮೆಂತ್ಯೆ ಪಲ್ಯ, ಸೊಪ್ಪು ಸಾರು, ಚಪಾತಿ ಹೀಗೆ ನಾನಾ ರೀತಿಯಲ್ಲಿ ಮೆಂತ್ಯೆ ಸೊಪ್ಪನ್ನು ಬಳಸಬಹುದು.
ಹೈ ಬ್ಲಡ್ ಶುಗರ್ ಇರುವವರು ಮೆಂತ್ಯೆ ಸೊಪ್ಪನ್ನು ಸೇವಿಸಬೇಕು. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಮೆಂತ್ಯ ಸೊಪ್ಪನ್ನು ಸೇವಿಸುವುದರಿಂದ ದೇಹವು ಅನೇಕ ರೀತಿಯ ಪೌಷ್ಟಿಕಾಂಶಗಳನ್ನು ಪಡೆಯುತ್ತದೆ. ಇದನ್ನು ತಿನ್ನುವುದರಿಂದ ದೇಹವು ಸಂಪೂರ್ಣವಾಗಿ ಬೆಚ್ಚಗಿರುತ್ತದೆ.
ಮೆಂತ್ಯೆ ಸೊಪ್ಪು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಚಳಿಗಾಲದಲ್ಲಿ ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಮೆಂತ್ಯೆ ಸೊಪ್ಪು ಸೇವನೆಯಿಂದ ದೇಹದ ನಾನಾ ಭಾಗಗಳಲ್ಲಿ ಕಾಣಿಸಿಕೊಳ್ಳುವ ನೋವು ನಿವಾರಣೆಯಾಗುತ್ತದೆ.
ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮೆಂತ್ಯೆ ಸೊಪ್ಪು ಸಹಕಾರಿಯಾಗಿದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ಇದು ದೂರವಿಡುತ್ತದೆ. (ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.)