ಸದಾ ಯವ್ವನವಾಗಿರಲು ಬಯಸುತ್ತೀರಾ..? ಹಾಗಿದ್ರೆ ತಪ್ಪದೇ ಈ 5 ಆಹಾರಗಳನ್ನು ಸೇವಿಸಿ..

Fri, 08 Nov 2024-1:12 pm,

ನೀವು ನಿಮ್ಮ ಆಹಾರ ಪದ್ಧತಿಯನ್ನು ಬದಲಿಸಿ, ಪ್ರತಿನಿತ್ಯದ ಆಹಾರದಲ್ಲಿ ಈ 5 ಪದಾರ್ಥಗಳನ್ನು ಸೇರಿಸಿದರೆ, ನಿಮ್ಮ ಚರ್ಮವು ಶಾಶ್ವತವಾಗಿ ಕಾಂತಿಯುತವಾಗಿ ಯೌವನದಿಂದ ಇರುತ್ತದೆ. ವಯಸ್ಸಾದ ಛಾಯೆಗಳು ಕಾಣಿಸುವುದೇ ಇಲ್ಲ. ಈ ಆಹಾರಗಳನ್ನು ಸೇವಿಸುವುದರಿಂದ ಚರ್ಮವು ಶಾಶ್ವತವಾಗಿ ಹೊಳೆಯುತ್ತಿರುತ್ತದೆ..    

ಸೌತೆಕಾಯಿ : ಚರ್ಮದ ಆರೈಕೆಗಾಗಿ ಸೌತೆಕಾಯಿ ಅದ್ಭುತಗಳನ್ನು ಮಾಡುತ್ತದೆ. ಇದು ಮುಖವನ್ನು ಶಾಶ್ವತವಾಗಿ ಹೈಡ್ರೀಕರಿಸುವ ಮೂಲಕ ಮುಖದ ಹೊಳಪನ್ನು ಕಾಪಾಡುತ್ತದೆ. ಇದರಲ್ಲಿ ಹೆಚ್ಚಿನ ನೀರಿನ ಅಂಶವಿದೆ. ಆದ್ದರಿಂದ ಇದು ಚರ್ಮದ ಆರೈಕೆಗೆ ತುಂಬಾ ಒಳ್ಳೆಯದು..  

ಸಿಹಿ ಗೆಣಸು : ಸಿಹಿ ಗೆಣಸು ತ್ವಚೆಯನ್ನು ಆರ್ಧ್ರಕಗೊಳಿಸುವಲ್ಲಿ ಅದ್ಭುತಗಳನ್ನು ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಎ ಇದಕ್ಕೆ ಸಹಾಯ ಮಾಡುತ್ತದೆ. ಮುಖದ ಮೇಲಿನ ಎಣ್ಣೆಯನ್ನು ನಿಯಂತ್ರಿಸುತ್ತದೆ. ಮೊಡವೆಗಳು ಮತ್ತು ಕಲೆಗಳನ್ನೂ ಸಹ ಮಾಯವಾಗಿಸುತ್ತದೆ. ಇದರಲ್ಲಿರುವ ಬೀಟಾ ಕ್ಯಾರೋಟಿನ್ ಚರ್ಮವನ್ನು ದೀರ್ಘಕಾಲದವರೆಗೆ ಯೌವನದಿಂದ ಇಡುತ್ತದೆ.  

ಮೊಸರು : ಮೊಸರು ಸಕ್ರಿಯ ಬ್ಯಾಕ್ಟೀರಿಯಾದಿಂದ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲವು ಚರ್ಮವನ್ನು ಮೃದುಗೊಳಿಸುತ್ತದೆ. ಚರ್ಮವನ್ನು ಎಫ್ಫೋಲಿಯೇಟ್ ಮಾಡಲು ಮತ್ತು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಮುಖದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಸತು, ವಿಟಮಿನ್ ಬಿ2, ವಿಟಮಿನ್ ಬಿ5 ಮತ್ತು ವಿಟಮಿನ್ ಬಿ12 ಹೇರಳವಾಗಿದೆ.  

ಕ್ವಿನೋವಾ ಒಂದು ಹೂವಿನ ಸಸ್ಯ. ಇದು ಅಮರನಾಥ ತಳಿಗೆ ಸೇರಿದೆ. ಇದು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿದೆ. ಇದರಲ್ಲಿರುವ ರೈಬೋಫ್ಲಾವಿನ್ ಚರ್ಮದ ಸ್ಥಿತಿಸ್ಥಾಪಕತ್ವ ಮತ್ತು ಸಂಯೋಜಕ ಅಂಗಾಂಶಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಚರ್ಮವನ್ನು ಮೃದುಗೊಳಿ, ಮುಖದ ಮೇಲಿನ ಸುಕ್ಕುಗಳು ಮಾಯವಾಗಿಸುತ್ತದೆ..  

ಕಲಗ (Oyster) ಅಥವಾ ಕಪ್ಪೆಚಿಪ್ಪು. ಇದು ಸಾಕಷ್ಟು ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವ ಆಹಾರ.. ಸತು, ಕಬ್ಬಿಣ, ತಾಮ್ರ ಮತ್ತು ಸೆಲೆನಿಯಂನಂತಹ ಪೋಷಕಾಂಶಗಳ ಸಮೃದ್ಧಿಯಿಂದಾಗಿ ಚರ್ಮವು ಯಾವಾಗಲೂ ಆರೋಗ್ಯಕರವಾಗಿರುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link