ಟಿಪ್ಸ್, ರೆಮಿಡಿ ಯಾವುದು ಬೇಡ... ಈ ಆಹಾರ ಸೇವಿಸಿ ಕೂದಲು ಬೆಳ್ಳಗಾಗುವುದನ್ನು ತಡೆಯಿರಿ
ಆಯುರ್ವೇದದ ಪ್ರಕಾರ, ಕೂದಲು ಬೆಳ್ಳಗಾಗುವುದನ್ನು ತಪ್ಪಿಸಲು ಕೆಲವು ಸೂಪರ್‌ಫುಡ್‌ಗಳು ನಿಮಗೆ ತುಂಬಾ ಲಾಭದಾಯಕ ಎಂದು ಸಾಬೀತುಪಡಿಸುತ್ತವೆ.
ಕೂದಲಿನ ಸರ್ವ ಸಮಸ್ಯೆಗೂ ರಾಮಬಾಣವಾಗಿರುವ ಈ 'ನಾಲ್ಕು' ಆಹಾರಗಳು ನಿಮ್ಮ ಡಯಟ್ನಲ್ಲಿದ್ದರೆ ಉದ್ದವಾದ, ಸ್ಟ್ರಾಂಗ್ ಕಪ್ಪು ಹೊಳೆಯುವಂತಹ ಕೂದಲನ್ನು ಹೊಂಡಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ನಿಯಮಿತವಾಗಿ ಈ ಆಹಾರಗಳ ಬಳಕೆಯೂ ಕೂದಲು ಬೇಗ ಬೆಳ್ಳಗಾಗುವುದನ್ನು ತಡೆದು ಗಾಢ ಕಪ್ಪು ಕೂದಲನ್ನು ಹೊಂದಲು ಸಹಕಾರಿ ಆಗಿದೆ.
ಕರಿಬೇವಿನ ಸೊಪ್ಪಿನಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಎ, ಬಿ ಮತ್ತು ಸಿ ಮತ್ತು ಕ್ಯಾಲ್ಸಿಯಂ, ಫಾಸ್ಫರಸ್ ಮತ್ತು ಕಬ್ಬಿಣದಂತಹ ಖನಿಜಗಳು ಹೇರಳವಾಗಿದೆ. ಇದರ ಸೇವನೆಯು ಕೂದಲನ್ನು ಬುಡದಿಂದ ಬಲಗೊಳಿಸುವುದರ ಜೊತೆಗೆ ಗಾಢ ಕಪ್ಪು ಬಣ್ಣವನ್ನು ಒದಗಿಸುತ್ತದೆ.
ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಸಿ ಮತ್ತು ತಾಮ್ರ ಸಮೃದ್ಧವಾಗಿರುವ ಸ್ಟ್ರಾಬೆರಿ ಹಣ್ಣಿನ ಸೇವನೆಯು ಕೂದಲಿಗೆ ಆರೋಗ್ಯಕರ ಹೊಳಪನ್ನು ಒದಗಿಸುತ್ತದೆ. ಇದು ಕೂದಲಿನ ಕಿರು ಚೀಲಗಳನ್ನು ಸ್ಟ್ರಾಂಗ್ ಆಗಿಸುತ್ತದೆ.
ಬಡವರ ಬಾದಾಮಿ ಕಡಲೆಬೀಜವು ಪ್ರೋಟೀನ್, ವಿಟಮಿನ್ ಇ, ತಾಮ್ರ, ಮ್ಯಾಂಗನೀಸ್, ಬಯೋಟಿನ್, ಫೋಲೇಟ್‌ಗಳ ಅತ್ಯುತ್ತಮ ಮೂಲ. ಇದರ ಸೇವನೆಯಿಂದ ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ.
ನಿತ್ಯ ಒಂದು ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಕೂದಲು ಉದುರುವುದನ್ನು ತಪ್ಪಿಸಿ ಬುಡದಿಂದಲೂ ಸ್ಟ್ರಾಂಗ್ ಲಾಂಗ್ ಹೇರ್ ಹೊಂದಬಃದೂ. ಅಷ್ಟೇ ಅಲ್ಲ, ಇದು ಕೂದಲಿಗೆ ನೈಸರ್ಗಿಕ ಕಪ್ಪು ಬಣ್ಣವನ್ನು ಒದಗಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.