ಸೂಪರ್‌ಸ್ಟಾರ್ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರು, ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಾದ ತಲೈವ! ಅಭಿಮಾನಿಗಳಲ್ಲಿ ಹೆಚ್ಚಾಯ್ತು ಆತಂಕ
ACTOR RAJINIKANTH: ತಲೈವ ರಜನಿಕಾಂತ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಸೆಪ್ಟೆಂಬರ್ 30 ರಂದು ಮಧ್ಯರಾತ್ರಿ ರಜನಿಕಾಂತ್ ಅವರುಆಸ್ಪತ್ರೆಗೆ ದಾಕಲಾಗಿದ್ದು, ಸುದ್ದಿ ಕೇಳಿ ಅಭಿಮಾನಿಗಳು ಆತಂಕದಲ್ಲಿದ್ದಾರೆ.
ವೈದ್ಯ ಡಾ. ಸಾಯಿ ಸತೀಶ್ ರಜನಿಕಾಂತ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ನಟನಿಗೆ ಹೃದಯದ ಸಮಸ್ಯೆ ಎದುರಾಗಿರಬಹುದು ಎಂದು ಊಹಿಸಲಾಗಿದೆ.
ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ನಟನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 73 ವರ್ಷದ ನಟ ರಜನಿಕಾಂತ್ ಮಧ್ಯರಾತ್ರಿ ದಿಢೀರನೆ ಆಸ್ಪತ್ರೆಗೆ ದಾಖಲಾಗಿರುವುದು ಅಭಿಮಾನಿಗಳ್ಲಿ ಆತಂಕ ಹೆಚ್ಚಿಸಿದೆ.
ನಟನಿಗೆ ಚಿಕಿತ್ಸೆ ನಡುತ್ತಿರುವ ವೈದ್ಯರು, ಆರೋಗ್ಯ ಸ್ಥಿತಿಯ ಕುರಿತು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ, ಇಂದು (ಅಕ್ಟೋಬರ್ 1) ಬೆಳಗ್ಗೆ ಆಸ್ಪತ್ರೆಯ ಕ್ಯಾತ್ ಲ್ಯಾಬ್‌ನಲ್ಲಿ ನಟನಿಗೆ ಕಾರ್ಡಿಯಾಕ್ ಚಿಕಿತ್ಸೆ ನಡೆಸಾಗುತ್ತದೆ ಎನ್ನು ಮಾಹಿತಿ ವರದಿ ಹೊರಬಿದ್ದಿದ್ದು, ನಟನ ಆರೋಗ್ಯದ ಕುರಿತು ಇನ್ನೂ, ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ.
ಸೆಪ್ಟೆಂಬರ್ 30ರ ಮಧ್ಯರಾತ್ರಿ ನಟನಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ, ತಕ್ಷಣವೇ ಅವರನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲು ಮಾಲಾಗಿದ್ದು, ವೈದ್ಯರು ರಜನಿಕಾಂತ್ ಅವರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಸದ್ಯ ವೈದ್ಯರು ಈ ಕುರಿತು ಯಾವುದೇ ಮಾಹಿತಿ ಹಂಚಿಕೊಳ್ಳದೆ ಇರುವುದು ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ.
ವರದಿಗಳ ಪ್ರಕಾರ, ಬೆಳಗ್ಗೆ 6 ಗಂಟೆಗೆ ನಟನಿಗೆ ವೈದ್ಯಕೀಯ ತಪಾಸಣೆ ನಡೆಯಲಿದೆ, ಪರೀಕ್ಷೆ ನಡೆಸಿದ ನಂತರ ನಟನಿಗೆ ಯವ ಚಿಕಿತ್ಸೆ ನೀಡಬೇಕ ಎಂಬುದನ್ನು ವೈದ್ಯರು ತೀರ್ಮಾನಿಸಲಿದ್ದಾರೆ. ಇನ್ನೂ, ವೈದ್ಯರು ಈ ಕುರಿತು ಸ್ಪಾಷ್ಟನೆ ನೀಡಿದರಷ್ಟೆ ಸಮಸ್ಯೆ ಎಂದು ಗೊತ್ತಾಗಲಿದೆ, ಅಭಿಮಾನಿಗಳಂತೂ ನಟನ ಪರಸ್ಥಿತಿ ಕಂಡು ಕಂಗಾಲಾಗಿದ್ದಾರೆ.