ವಿರಾಟ್ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಲು ಕಾರಣ ಈ ಸ್ಟಾರ್ ಕ್ರಿಕೆಟಿಗ! ಅಂದು ಕೊಹ್ಲಿ ಹೆಸರು ಸೂಚಿಸಿದ್ದು ಯಾರು ಗೊತ್ತಾ?

Sat, 13 Jul 2024-4:09 pm,

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇತ್ತೀಚೆಗೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಈ ಎಲ್ಲದರ ಮಧ್ಯೆ, ಟೀಂ ಇಂಡಿಯಾಗೆ ಕೊಹ್ಲಿ ಆಯ್ಕೆಯಾಗಲು ಕಾರಣವೇನು? ಅದಕ್ಕೆ ಕಾರಣವಾದ ಆ ವ್ಯಕ್ತಿ ಕಾರಣವಾಗಿರುವ ಬಗ್ಗೆ ನಾವಿಂದು ಈ ವರದಿಯಲ್ಲಿ ತಿಳಿಸಲಿದ್ದೇವೆ

ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತು ಕಂಡ ಅದ್ಭುತ ಆಟಗಾರ. ಇಂತಹ ಆಟಗಾರನನ್ನು ಟೀಂ ಇಂಡಿಯಾಗೆ ಸೂಚಿಸಿದ್ದು ಓರ್ವ ದಿಗ್ಗಜ ಕ್ರಿಕೆಟಿಗ

ಆತ ಬೇರಾರು ಅಲ್ಲ, ಮಾಜಿ ಕ್ರಿಕೆಟಿಗ ಸುರೇಶ್ ರೈನಾ. 2008ರ ಉದಯೋನ್ಮುಖ ಆಟಗಾರರ ಪಂದ್ಯಾವಳಿಯ ಸಂದರ್ಭದಲ್ಲಿ ಕೊಹ್ಲಿ ಬಹಿರಂಗಪಡಿಸಿದ್ದರು.

ಆಸ್ಟ್ರೇಲಿಯಾದಲ್ಲಿ, ಆಗಿನ ಮುಖ್ಯ ಆಯ್ಕೆಗಾರ ದಿಲೀಪ್ ವೆಂಗ್‌ಸರ್ಕರ್ ಮತ್ತು ಸುರೇಶ್ ರೈನಾ, ವಿರಾಟ್ ಅವರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳಲು ಸೂಚಿಸಿದ್ದರು.

ಕೊಹ್ಲಿ ಆರಂಭದಲ್ಲಿ ಸುಬ್ರಮಣ್ಯಂ ಬದರಿನಾಥ್ ನಾಯಕತ್ವದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಫಾರ್ಮ್ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿ, ಆ ಬಳಿಕ ಸ್ಥಾನ ಪಡೆಯಲು ಹೆಣಗಾಡುವಂತಾಯಿತು.

ಅದಾದ ನಂತರ ಬೆಂಚ್’ನಲ್ಲಿ ಕುಳಿತಿದ್ದ ಕೊಹ್ಲಿಯಲ್ಲಿ ಮೈದಾನಕ್ಕೆ ಪ್ರವೇಶಿಸುವಂತೆ ಮಾಡಿದ್ದು ಸುರೇಶ್ ರೈನಾ ನೀಡಿದ ಸಲಹೆ.

ರೈನಾ ನಾಯಕನಾಗಿ ಪಂದ್ಯಾವಳಿಯ ಮಧ್ಯದಲ್ಲಿ ಸೇರಿಕೊಂಡಾಗ, ಕೋಚ್ ಪ್ರವೀಣ್ ಆಮ್ರೆ ಜೊತೆ ತಂಡದಲ್ಲಿ ಕೊಹ್ಲಿ ಅನುಪಸ್ಥಿತಿಯ ಬಗ್ಗೆ ವಿಚಾರಿಸಿದರು. ಅದಾದ ಬಳಿಕ ರೈನಾ ಅವರ ಒತ್ತಾಯದ ಮೇರೆಗೆ, ಅಜಿಂಕ್ಯ ರಹಾನೆ ಬದಲಿಗೆ ಕೊಹ್ಲಿ ಆರಂಭಿಕ ಸ್ಥಾನಕ್ಕೆ ಬಡ್ತಿ ಪಡೆದರು. ಈ ನಿರ್ಧಾರವು ಕೊಹ್ಲಿ ಪ್ರದರ್ಶನದಲ್ಲಿ ಮಹತ್ವದ ತಿರುವು ನೀಡಿತು.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಕೊಹ್ಲಿ, "2008ರಲ್ಲಿ ನಾವು ಆಸ್ಟ್ರೇಲಿಯಾದಲ್ಲಿ ಎಮರ್ಜಿಂಗ್ ಕಪ್ ಆಡುತ್ತಿದ್ದೆವು. ಸುರೇಶ್ ರೈನಾ ನನ್ನ ಬಗ್ಗೆ ಕೇಳಿರಬೇಕು. ಮೊದಲು ಬದರಿನಾಥ್ ನಾಯಕರಾಗಿದ್ದರು. ಅವರ ನಂತರ ರೈನಾ ನಾಯಕತ್ವವನ್ನು ಪಡೆದರು. ಆಗ ಪ್ರವೀಣ್ ಆಮ್ರೆ ನಮ್ಮ ಕೋಚ್. ಆ ಸಂದರ್ಭದಲ್ಲಿ ನನ್ನನ್ನು ಬೆಂಚ್ ಮೇಲೆ ಕೂರಿಸಲಾಯಿತು. ಏಕೆಂದರೆ ಮೊದಲ ಎರಡು-ಮೂರು ಪಂದ್ಯಗಳಲ್ಲಿ ನಾನು ಪ್ರದರ್ಶನ ನೀಡಲಿಲ್ಲ. ಆದರೆ ರೈನಾ ಮತ್ತು ಅಂದು ಮುಖ್ಯ ಆಯ್ಕೆಗಾರರಾಗಿದ್ದ ದಿಲೀಪ್ ವೆಂಗ್ಸಾಕರ್ ಸರ್ ನನಗೆ ಮತ್ತೆ ಅವಕಾಶ ನೀಡಿದರು” ಎಂದು ಹೇಳಿದ್ದಾರೆ.ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಕೊಹ್ಲಿ, "2008ರಲ್ಲಿ ನಾವು ಆಸ್ಟ್ರೇಲಿಯಾದಲ್ಲಿ ಎಮರ್ಜಿಂಗ್ ಕಪ್ ಆಡುತ್ತಿದ್ದೆವು. ಸುರೇಶ್ ರೈನಾ ನನ್ನ ಬಗ್ಗೆ ಕೇಳಿರಬೇಕು. ಮೊದಲು ಬದರಿನಾಥ್ ನಾಯಕರಾಗಿದ್ದರು. ಅವರ ನಂತರ ರೈನಾ ನಾಯಕತ್ವವನ್ನು ಪಡೆದರು. ಆಗ ಪ್ರವೀಣ್ ಆಮ್ರೆ ನಮ್ಮ ಕೋಚ್. ಆ ಸಂದರ್ಭದಲ್ಲಿ ನನ್ನನ್ನು ಬೆಂಚ್ ಮೇಲೆ ಕೂರಿಸಲಾಯಿತು. ಏಕೆಂದರೆ ಮೊದಲ ಎರಡು-ಮೂರು ಪಂದ್ಯಗಳಲ್ಲಿ ನಾನು ಪ್ರದರ್ಶನ ನೀಡಲಿಲ್ಲ. ಆದರೆ ರೈನಾ ಮತ್ತು ಅಂದು ಮುಖ್ಯ ಆಯ್ಕೆಗಾರರಾಗಿದ್ದ ದಿಲೀಪ್ ವೆಂಗ್ಸಾಕರ್ ಸರ್ ನನಗೆ ಮತ್ತೆ ಅವಕಾಶ ನೀಡಿದರು” ಎಂದು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link