ಸಮಂತಾ ʼಯಶೋದಾʼ ಟ್ರೈಲರ್‌ ರಿಲೀಸ್‌ ಮಾಡೋಕೆ ಇಷ್ಟೋಂದು ಹೀರೋಗಳಾ..!

Wed, 26 Oct 2022-7:38 pm,

ಸಮಂತಾ ʼಯಶೋದʼ ಸಿನಿಮಾಗಾಗಿ ಅವರ ಕ್ಲೋಜ್ ಫ್ರೆಂಡ್ಸ್ ಕಮ್ ಸ್ಟಾರ್ ಹೀರೋಗಳು ಸಾಥ್‌ ನೀಡುತ್ತಿದ್ದಾರೆ. ಯಶೋದಾ ಸಿನಿಮಾ ಬಹುತೇಕ ಎಲ್ಲಾ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. 

ಈ ಸಿನಿಮಾದ ಟ್ರೈಲರ್‌ ಅನ್ನು ಒಂದೊಂದು ಭಾಷೆಯಲ್ಲಿ ಒಂದೊಂದು ಸ್ಟಾರ್ ಹೀರೋ ಬಿಡುಗಡೆ ಮಾಡಲು ರೆಡಿಯಾಗಿದ್ದಾರೆ. ಟಾಲಿವುಡ್‌ ಸ್ಟಾರ್‌ ಸೂರ್ಯ ತಮಿಳು ಟ್ರೇಲರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಸೂರ್ಯ ಅವರೊಂದಿಗೆ ಸಮಂತಾ ಒಳ್ಳೆ ಗೆಳೆತನ ಹೊಂದಿದ್ದಾರೆ.   

ಅಲ್ಲದೆ, ಅವರ ಜೊತೆ ಹಲವಾರು ಸಿನಿಮಾಗಳಲ್ಲಿಯೂ ನಟಿಸಿದ್ದು, ಸದ್ಯ ಸಮಂತಾ ಸಿನಿಮಾಗೆ ಸೂರ್ಯ ಕೈ ಜೋಡಿಸಲಿದ್ದಾರೆ. ಇನ್ನು ರಕ್ಷಿತ್ ಶೆಟ್ಟಿ ಚಾರ್ಲಿ ಸಿನಿಮಾದಿಂದ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ. ಹೀಗಾಗಿ ರಕ್ಷಿತ್‌ ಅವರು ಸಮಂತಾ ʼಯಶೋದಾʼ ಟ್ರೈಲರ್‌ ಬಿಡುಗಡೆ ಮಾಡಲಿದ್ದಾರೆ.

ಇನ್ನು ಹಾಲಿವುಡ್‌ ಸ್ಟಾರ್‌ ವರುಣ್‌ ಧವನ್‌ ಜೊತೆ ಉತ್ತಮ ಸಮಂತಾ ಗುಡ್‌ ರಿಲೇಶನ್‌ಶಿಪ್‌ ಹೊಂದಿದ್ದು, ಹಿಂದಿ ಟ್ರೈಲರ್‌ನ್ನು ಅವರು ಬಿಡುಗಡೆ ಮಾಡುತ್ತಿದ್ದಾರೆ. ಮಲಯಾಳಂ ದುಲ್ಕರ್ ಸಲ್ಮಾನ್, ತೆಲುಗು ಟ್ರೈಲರ್‌ ಅನ್ನು ವಿಜಯ್ ದೇವರಕೊಂಡ ರಿಲೀಸ್‌ ಮಾಡ್ತಾರೆ.

ಯಶೋದಾ ಟ್ರೈಲರ್‌ ಬರುವ ತಿಂಗಳು ಅಂದ್ರೆ ನವೆಂಬರ್‌ 11 ರಂದು ಬಿಡುಗಡೆಯಾಗಲಿದೆ. ಅಲ್ಲದೆ, ಸಾಲು ಸಾಲು ಸಿನಿಮಾಗಳಲ್ಲಿ ಸಮಂತಾ ಬ್ಯುಸಿಯಾಗಿದ್ದು, ಅವರ ಶಾಕುಂತಲ ಸಿನಿಮಾ ಕೂಡ ತೆರೆಗೆ ಬರಲು ಸಿದ್ಧವಾಗಿದೆ. ವಿಜಯ ದೇವರಕೊಂಡ ಜೊತೆ ಸಿನಿಮಾ ಒಂದರಲ್ಲಿ ಸಮಂತಾ ನಟಿಸಲಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link