ಶಾಕಿಂಗ್ ಎಲಿಮಿನೇಷನ್.. ಬಿಗ್ ಬಾಸ್ ನಲ್ಲಿ ಫಿನಾಲೆಗೆ ಬರ್ತಾರೆ ಎಂದುಕೊಂಡ ಈ ಸ್ಪರ್ಧಿಯೇ ಔಟ್!
Bigg Boss Kannada 11 Elimination: ಕನ್ನಡ ಬಿಗ್ ಬಾಸ್ ಮೊದಲ ಎಲಿಮಿನೇಷನ್ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿಸರ್‌ಪ್ರೈಸ್ ಎಲಿಮಿನೇಷನ್ ನಡೆದಿದ್ದು, ಕೊನೆಯ ವರೆಗೆ ಉಳಿಯಬಹುದೆಂದು ಊಹಿಸಿದ್ದ ಸ್ಪರ್ಧಿಯೇ ಮನೆಯಿಂದ ಹೊರ ನಡೆದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಒಂದು ತಿಂಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಆರಂಭದಿಂದಲೂ ಕಾರ್ಯಕ್ರಮವು ವೀಕ್ಷಕರ ಗಮನವನ್ನು ಸೆಳೆಯುತ್ತಿದೆ. ಕಳೆದ ವಾರದ ಮಧ್ಯದಲ್ಲಿ ಜಗದೀಶ್ ಮತ್ತು ರಂಜಿತ್ ಎಲಿಮಿನೇಟ್ ಆದರು.
ಆ ಬಳಿಕ ಮನೆಗೆ ವೀಕೆಂಡ್‌ನಲ್ಲಿ ಸಿಂಗರ್ ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ ಪಡೆದರು. ಆಟ ಮತ್ತೆ ತಿರುವು ಪಡೆಯಿತು. ಈ ವಾರ ವೀಕೆಂಡ್ ಎಪಿಸೋಡ್ ಗೆ ಕಿಚ್ಚ ಸುದೀಪ್ ಬರುವುದಿಲ್ಲ. ಕಿಚ್ಚನ ಅನುಪಸ್ಥಿತಿಯಲ್ಲಿ ಎಲಿಮಿನೇಷನ್ ನಡೆಯಲಿದೆ.
ಭವ್ಯ, ಚೈತ್ರ, ಗೌತಮಿ, ಹಂಸ, ಮಂಜು, ಮಾನಸ, ಮೋಕ್ಷಿತಾ, ಶಿಶಿರ್ ಮತ್ತು ಗೋಲ್ಡ್ ಸುರೇಶ್ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಇವರಲ್ಲಿ ಮಾನಸಾ ಅವರ ಕೆಲವು ವರ್ತನೆಗಳು ಜನರ ಮನಸ್ಸಿಗೆ ಹಿಡಿಸುತ್ತಿಲ್ಲ ಎನ್ನಲಾಗುತ್ತಿದೆ.
ಸೋಷಿಯಲ್ ಮೀಡಿಯಾ ಸಮೀಕ್ಷೆಗಳನ್ನು ಪರಿಗಣಿಸಿದಾಗ, ಭವ್ಯ, ಚೈತ್ರ, ಗೌತಮಿ, ಮೋಕ್ಷಿತಾ, ಶಿಶಿರ್ ಮೊದಲಿಗೆ ಸೇವ್ ಆಗಿದ್ದು ಮನೆಯಲ್ಲಿ ಆಟ ಮುಂದುವರೆಸಲಿದ್ದಾರೆ.
StudyBizz.com ನಡೆಸಿದ ಸಮೀಕ್ಷೆಯ ಪ್ರಕಾರ, ಹಂಸ, ಗೋಲ್ಡ್ ಸುರೇಶ್ ಮತ್ತು ಮಾನಸ ಅಪಾಯದ ವಲಯದಲ್ಲಿದ್ದಾರೆ. ವೆಬ್‌ಸೈಟ್‌ನಲ್ಲಿನ ಸಮೀಕ್ಷೆಯ ಪ್ರಕಾರ ಅವರು ಕೊನೆಯ ಮೂರು ಸ್ಥಾನದಲ್ಲಿದ್ದಾರೆ.
ಮತದಾನದ ಭವಿಷ್ಯ ನಿಜವಾದರೆ, ವಾರಾಂತ್ಯದ ಸಂಚಿಕೆಯಲ್ಲಿ ಹಂಸ ಅಥವಾ ಮಾನಸ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಕನ್ನಡ 2024 ರ ವಾರಾಂತ್ಯದ ಸಂಚಿಕೆಯಲ್ಲಿ ಮತದಾನದ ಫಲಿತಾಂಶಗಳನ್ನು ಪ್ರಕಟಿಸಲಾಗುವುದು.