30 ವರ್ಷಗಳ ನಂತರ ಸೂರ್ಯ-ಶನಿ ಸಂಯೋಗ: ಈ 4 ರಾಶಿಯವರು ಇನ್ನೊಂದು ವರ್ಷ ರಾಜರಂತೆ ಬಾಳುವುದರಲ್ಲಿ ಅನುಮಾನವೇ ಇಲ್ಲ!

Fri, 16 Feb 2024-4:23 pm,

ಫೆಬ್ರವರಿ 13 ರಂದು ಸೂರ್ಯನು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ ಮತ್ತು ಶನಿ ದೇವನು ಈಗಾಗಲೇ ಕುಂಭ ರಾಶಿಯಲ್ಲಿ ಇದ್ದಾನೆ. ಹೀಗಿರುವಾಗ ಕುಂಭ ರಾಶಿಯಲ್ಲಿ ಗ್ರಹಗಳ ಸಂಯೋಗವಾಗಿದೆ.

ಸೂರ್ಯ ಮತ್ತು ಶನಿಯು ಪರಸ್ಪರ ಹಗೆತನ ಹೊಂದಿರುವ ಗ್ರಹಗಳೆಂದು ಹೇಳಲಾಗುತ್ತದೆ. ಆದರೆ ಈ ಬಾರಿಯ ಸಂಯೋಗವು ಕೆಲವು ರಾಶಿಗಳಿಗೆ ಮಂಗಳಕರವಾಗಿದೆ. ಸೂರ್ಯ ಮತ್ತು ಶನಿಯ ಸಂಯೋಗದಿಂದ ಶುಭಫಲ ಪಡೆಯಲಿರುವ ಅದೃಷ್ಟವಂತ ರಾಶಿಗಳು ಯಾವುವು ಎಂದು ತಿಳಿಯೋಣ.

ಮೇಷ ರಾಶಿ: ಶನಿ ಮತ್ತು ಸೂರ್ಯನ ಸಂಯೋಗವು ಮೇಷ ರಾಶಿಯ ಜನರಿಗೆ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಮೇಷ ರಾಶಿಯ ಜನರು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಕೆಲಸ ಮಾಡುತ್ತಿರುವವರಿಗೆ ಸ್ಥಳ ಬದಲಾವಣೆಯಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭ ಇರಲಿದೆ. ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಲು ಬಯಸುವವರಿಗೆ ಇದು ಉತ್ತಮ ಸಮಯ.

ಮಿಥುನ ರಾಶಿ: ಕುಂಭ ರಾಶಿಯಲ್ಲಿ ಸೂರ್ಯ ಮತ್ತು ಶನಿಯ ಸಂಯೋಗವು ಮಿಥುನ ರಾಶಿಯವರಿಗೆ ತುಂಬಾ ವಿಶೇಷವಾಗಲಿದೆ. ದುಡಿಯುವ ಜನರಿಗೆ ಇದು ಬಹಳ ಒಳ್ಳೆಯ ಸಮಯ. ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮಾಡಲು ಬಯಸುವವರಿಗೆ ಇದು ಉತ್ತಮ ಸಮಯ. ವೃತ್ತಿಯಲ್ಲಿ ಕೆಲವು ಸಮಸ್ಯೆಗಳಿರಬಹುದು.

ಕಟಕ ರಾಶಿ: ಈ ರಾಶಿಯವರ ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಯನ್ನು ಮಾಡಲು ಬಯಸುವವರಿಗೆ ಈ ಸಮಯವು ತುಂಬಾ ಅನುಕೂಲಕರವಾಗಿರಲಿದೆ. ಉದ್ಯೋಗಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು.

ತುಲಾ ರಾಶಿಯವರಿಗೆ ಈ ಸಮಯವು ತುಂಬಾ ಮಂಗಳಕರ ಮತ್ತು ಫಲಪ್ರದ. ಏಕೆಂದರೆ ಸೂರ್ಯದೇವನ ಕೃಪೆಯಿಂದ ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಅಲ್ಲದೆ, ಮನೆಯಲ್ಲಿ ಕೆಲವು ಶುಭ ಕಾರ್ಯಕ್ರಮಗಳು ನಡೆಯಲಿವೆ. ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link