Surya Gochar 2023: ಸೂರ್ಯ ಕೃಪೆಯಿಂದ ಈ ರಾಶಿಯವರಿಗೆ ಇನ್ಮುಂದೆ ಇರಲ್ಲ ದುಡ್ಡಿನ ಸಮಸ್ಯೆ: ದೀಪದಂತೆ ಬೆಳಗುವುದು ಅದೃಷ್ಟ!

Fri, 12 May 2023-6:05 am,

ಮೇ 15 ಮತ್ತು ಜೂನ್ 15 ರ ನಡುವೆ ಸೂರ್ಯನು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಸದ್ಯ ವೃಷಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಸೂರ್ಯ ದೇವರ ಈ ಬದಲಾವಣೆಯು ಕನ್ಯಾ ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಸೂರ್ಯನ ಕೃಪೆಯ ಇವರ ಮೇಲಿರಲಿದ್ದು, ಅದೃಷ್ಟವನ್ನು ಸೂರ್ಯನಂತೆ ಬೆಳಗಿಸುತ್ತದೆ.

ಕನ್ಯಾ ರಾಶಿಯ ಜನರು ಇನ್ಮುಂದೆ ಹಣಕ್ಕಾಗಿ ಚಿಂತಿಸಬೇಕಿಲ್ಲ. ಏಕೆಂದರೆ ಸೂರ್ಯದೇವನ ಕೃಪೆಯಿಂದ ಅಪಾರ ಧನ ಪ್ರಾಪ್ತಿಯಾಗಲಿದೆ.

ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅದೃಷ್ಟವು ಕನ್ಯಾ ರಾಶಿಯವರನ್ನು ಬೆಂಬಲಿಸುತ್ತದೆ. ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ ಈ ಸಮಯವು ನಿಮಗೆ ಸೂಕ್ತವಾಗಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಅನೇಕ ಸ್ಥಳಗಳಿಗೆ ಪ್ರಯಾಣಿಸಬೇಕಾಗಬಹುದು. ಸಾಫ್ಟ್ ವೇರ್ ಇಂಜಿನಿಯರ್ ಇತ್ಯಾದಿ ಕೆಲಸಗಳಲ್ಲಿ ಬಡ್ತಿ ಪಡೆಯಬಹುದು.

ವಿದೇಶಿ ಸಂಬಂಧಿತ ವ್ಯವಹಾರದಲ್ಲಿ ಹೂಡಿಕೆ ಮಾಡುವ ಉತ್ತಮ ಸಮಯವಿದು. ಇದರ ಫಲಿತಾಂಶ ಸದ್ಯಕ್ಕೆ ಕಾಣಿಸದಿದ್ದರೂ ಮುಂದಿನ ದಿನಗಳಲ್ಲಿ ಉತ್ತಮ ಲಾಭವನ್ನು ನೀಡಲಿದೆ.

ಯುವಕರು ಒಡನಾಟದ ಮೇಲೆ ನಿಗಾ ಇಡಬೇಕು. ಕೆಲವು ಸ್ನೇಹಿತರು ನಿಮಗೆ ಕೆಟ್ಟದನ್ನು ಮಾಡಬಹುದು. ಎಚ್ಚರಿಕೆ ವಹಿಸಿಕೊಳ್ಳಿ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕುಟುಂಬದವರೊಂದಿಗೆ ಧಾರ್ಮಿಕ ಪ್ರವಾಸ ಕೈಗೊಳ್ಳಬಹುದು.

ದೀರ್ಘಕಾಲದ ಕಾಯಿಲೆಗಳ ಬಗ್ಗೆ ಎಚ್ಚರವಿರಲಿ. ಯಾವುದೇ ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ನಿಯಮಿತ ಔಷಧವನ್ನು ಸೇವಿಸುವವರು ಒಮ್ಮೆ ವೈದ್ಯರಿಂದ ಸಾಮಾನ್ಯ ತಪಾಸಣೆ ಮಾಡಿಸಿಕೊಳ್ಳಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link