ಕೆಲವೇ ಗಂಟೆಗಳಲ್ಲಿ ಈ ರಾಶಿಗಳ ಜನರ ಜೀವನದಲ್ಲಿ ಸುದಿನಗಳ ಆರಂಭ, ಧನಲಕ್ಷ್ಮಿಯ ಸ್ವಾಗತಕ್ಕೆ ಈಗಲೇ ಸಿದ್ಧತೆ ಆರಂಭಿಸಿ!
ವೈದಿಕ ಜೋತಿಷ್ಯ ಶಾಸ್ತ್ರರ ಪ್ರಕಾರ ಸೆಪ್ಟೆಂಬರ್ 17, 2023 ರಂದು ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ದೇವ ತನ್ನ ಸ್ನೇಹಿತನ ರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಜೋತಿಷ್ಯದಲ್ಲಿ ಘನತೆ-ಗೌರವ, ಪ್ರತಿಷ್ಠೆ, ರಾಜಸುಖ, ಆಡಳಿತ, ತಂದೆ, ಬಾಸ್ ಹಾಗೂ ಸರ್ಕಾರಿ ನೌಕರಿಯ ಕಾರಕ ಅಂಶ ಎಂದು ಸೂರ್ಯನನ್ನು ಪರಿಗಣಿಸಲಾಗುತ್ತದೆ. ಹೀಗಾಗಿ ಸೂರ್ಯನ ರಾಶಿ ಪರಿವರ್ತನೆ ಅತ್ಯಂತ ಮಹತ್ವದ ಸ್ಥಾನ ಪಡೆದುಕೊಳ್ಳುತ್ತದೆ. ಹಾಗೆ ನೋಡಿದರೆ ಸೂರ್ಯನ ಈ ರಾಶಿ ಪರಿವರ್ತನೆ ಎಲ್ಲಾ ದ್ವಾದಶ ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರುತ್ತದೆ. ಆದರೆ, ಮೂರು ರಾಶಿಗಳ ಜಾತಕದವರ ಪಾಲಿಗೆ ಇದು ಅತ್ಯಂತ ಶುಭ ಸಾಬೀತಾಗಲಿದ್ದು (Spiritual News In Kannada), ಅವರ ಜೀವನದಲ್ಲಿ ಹಣದ ಹೊಳೆಯೇ ಹರಿಯಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಮಿಥುನ ರಾಶಿ: ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಸೂರ್ಯನ ಈ ಸಂಕ್ರಮಣ ನಡೆಯಲಿದೆ. ಇದಲ್ಲದೆ ಸೂರ್ಯ ನಿಮ್ಮ ಗೋಚರ ಜಾತಕದ ತೃತೀಯ ಭಾವದ ಅಧಿಪತಿ ಕೂಡ ಹೌದು, ಹೀಗಾಗಿ ಸೂರ್ಯನ ಈ ಸಂಕ್ರಮಣ ನಿಮ್ಮ ಪಾಲಿಗೆ ಅತ್ಯದ್ಭುತ ಸಾಬೀತಾಗಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಎಲ್ಲಾ ರೀತಿಯ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ನೌಕರ ವರ್ಗದ ಜನರಿಗೆ ವೃತ್ತಿಜೀವನದಲ್ಲಿ ಉನ್ನತಿ ಹಾಗೂ ಅತ್ಯುತ್ತಮ ಅವಕಾಶಗಳು ಸಿಗಲಿವೆ. ಈ ಅವಧಿಯಲ್ಲಿ ನೀವು ಆಸ್ತಿಪಾಸ್ತಿ ಅಥವಾ ವಾಹನ ಖರೀದಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ಈ ಅವಧಿಯಲ್ಲಿ ನಿಮಗೆ ಸಹೋದರ-ಸಹೋದರಿಯರ ಬೆಂಬಲ ಪ್ರಾಪ್ತಿಯಾಗಲಿದೆ.
ಧನು ರಾಶಿ: ಗ್ರಹಗಳ ರಾಜ ಸೂರ್ಯನ ಈ ಸಂಕ್ರಮಣ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ನೆರವೇರುತ್ತಿದೆ. ಹೀಗಾಗಿ ಅದು ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಎರಡರಲ್ಲಿಯೂ ಕೂಡ ದೀರ್ಘಕಾಲದಿಂದ ನಡೆದುಕೊಂಡ ಬಂದ ಸಮಸ್ಯೆಗಳಿಗೆ ತೆರೆಬೀಳಲಿದೆ. ನೌಕರವರ್ಗದ ಜನರಿಗೆ ನೌಕರಿಯಲ್ಲಿ ಅಧಿಕಾರಿಗಳ ಬೆಂಬಲ ಪ್ರಾಪ್ತಿಯಾಗಲಿದೆ. ಒಳ್ಳೆಯ ಸ್ಥಳದಲ್ಲಿ ನೌಕರಿಯ ಪ್ರಸ್ತಾವನೆ ಬರುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಅಪಾರ ಧನಲಾಭ ಉಂಟಾಗುವ ಸಾಧ್ಯತೆ ಇದೆ. ವ್ಯಾಪಾರದ ಯೋಜನೆಗಳು ಭಾರಿ ವೇಗ ಪಡೆದುಕೊಳ್ಳಲಿದ್ದುಭಾರಿ ಸುಧಾರಣೆ ಕಂಡುಬರಲಿದೆ. ತಂದೆಯ ಬೆಂಬಲ ನಿಮಗೆ ಸಿಗಲಿದೆ.
ವೃಶ್ಚಿಕ ರಾಶಿ: ಸೂರ್ಯನ ಈ ರಾಶಿ ಪರಿವರ್ತನೆ ನಿಮ್ಮ ಪಾಲಿಗೆ ಸಾಕಷ್ಟು ಲಾಭಕಾರಿ ಸಾಬೀತಾಗಲಿದೆ. ಏಕೆಂದರೆ ಸೂರ್ಯ ದೇವ ನಿಮ್ಮ ರಾಶಿಯ ಆದಾಯ ಭಾವದಲ್ಲಿ ಸಂಚರಿಸಲಿದ್ದಾನೆ. ನಿಮ್ಮ ಜಾತಕದ ದಶಮ ಭಾವಕ್ಕೆ ಆತ ಅಧಿಪತಿ ಕೂಡ ಹೌದು, ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ಹಳೆ ಹೂಡಿಕೆಗಳಿಂದ ನಿಮಗೆ ಲಾಭ ಸಿಗಲಿದೆ ಹಾಗೂ ಆರ್ಥಿಕ ಸ್ಥಿತಿ ಬಲಿಷ್ಠವಾಗಲಿದೆ. ಇನ್ನೊಂದೆಡೆ ಈ ಅವಧಿಯಲ್ಲಿ ಯಾವುದಾದರೊಂದು ವ್ಯಾಪಾರದ ಹೊಸ ಒಪ್ಪಂದ ಕುದುರಲಿದೆ. ಅದರಿಂದ ನಿಮಗೆ ಲಾಭ ಉಂಟಾಗುವ ಸಾಧ್ಯತೆ ಇದೆ. ಷೇರು ಮಾರುಕಟ್ಟೆ, ಲಾಟರಿಗಳಂತಹ ವ್ಯವಹಾರಗಳಲ್ಲಿ ಲಾಭ ನಿಮ್ಮದಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)