ಧನುರ್ಮಾಸದಲ್ಲಿ ಸೂರ್ಯನಂತೆ ಪ್ರಜ್ವಲಿಸಲಿದೆ ಈ ರಾಶಿಯವರ ಬಾಳು, ಸೂರ್ಯ ದೇವನಿಂದ ಸುಖದ ಸುಪ್ಪತ್ತಿಗೆಯಲ್ಲೇ ಜೀವನ..!
ಡಿ. 15ರಂದು ಧನು ರಾಶಿಗೆ ಸೂರ್ಯನ ಪ್ರವೇಶದೊಂದಿಗೆ ಧನುರ್ ಮಾಸ ಆರಂಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧನುರ್ ಮಾಸದಲ್ಲಿ ಕೆಲವು ರಾಶಿಯವರ ಮೇಲೆ ಸೂರ್ಯದೇವನ ವಿಶೇಷ ಅನುಗ್ರಹ ಇರಲಿದೆ ಎನ್ನಲಾಗುತ್ತಿದೆ.
ಮೇಷ ರಾಶಿ: ಸೂರ್ಯನ ಕೃಪೆಯಿಂದ ಈ ರಾಶಿಯವರಿಗೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ವೇಗಗೊಳ್ಳಲಿವೆ. ಹೊಸ ಮನೆ ಅಥವಾ ಭೂಮಿ ಖರೀದಿಸುವ ನಿಮ್ಮ ಬಯಕೆ ಈಡೇರಲಿದೆ. ವೃತ್ತಿ ಬದುಕಿನಲ್ಲೂ ಭಾರೀ ಯಶಸ್ಸನ್ನು ಗಳಿಸುವಿರಿ.
ಮಿಥುನ ರಾಶಿ: ಸೂರ್ಯ ಗೋಚಾರವು ಈ ರಾಶಿಯವರ ಜೀವನದಲ್ಲಿ ಪ್ರತಿ ಹಂತದಲ್ಲೂ ಹೊಸತನವನ್ನು ತರಲಿದೆ. ವೃತ್ತಿಪರರಿಗೆ ಪ್ರಮೋಷನ್ ಭಾಗ್ಯ, ವ್ಯಾಪಾರಿಗಳಿಗೆ ಕೈತುಂಬಾ ಹಣ ಸಂಪಾದನೆಯಾಗಲಿದೆ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಆನಂದಿಸುವಿರಿ.
ಸಿಂಹ ರಾಶಿ: ಉದ್ಯೋಗ ರಂಗದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವಿರಿ. ಬಹಳ ದಿನಗಳ ಹಿಂದೆ ಸ್ಥಗಿತಗೊಂಡಿದ್ದ ಪ್ರಮುಖ ಕೆಲಸವೊಂದು ಮತ್ತೆ ಚಾಲನೆ ಪಡೆಯಲಿದೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮಗೊಳ್ಳಲಿದೆ.
ಕುಂಭ ರಾಶಿ: ಸೂರ್ಯ ಗೋಚಾರದೊಂದಿಗೆ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿದೆ. ವಿದೇಶಕ್ಕೆ ಹೋಗುವ ಅವಕಾಶವನ್ನು ಪಡೆಯುವಿರಿ. ವ್ಯವಹಾರದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲದಿಂದ ಭಾರೀ ಆದಾಯವನ್ನು ಗಳಿಸುವಿರಿ.
ಮೀನ ರಾಶಿ: ಸೂರ್ಯ ಸಂಚಾರ ಬದಲಾವಣೆಯಿಂದಾಗಿ ಬಹಳ ದಿನಗಳ ಆಸ್ತಿ ಖರೀದಿಸುವ ನಿಮ್ಮ ಕನಸನ್ನು ನನಸು ಮಾಡಲಿದೆ. ವೃತ್ತಿಪರರಿಗೆ ಬಡ್ತಿ ಸಂಭವವಿದ್ದು, ಆದಾಯದಲ್ಲಿ ಹೆಚ್ಚಳವಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಮನೆ ಮಾಡಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.