Surya Gochar 2024:ಶೀಘ್ರದಲ್ಲೇ ತನ್ನ ಉನ್ನತ ರಾಶಿಗೆ ಸೂರ್ಯನ ಪ್ರವೇಶ, ಈ ಜನರಿಗೆ ಸಿಗಲಿದೆ ಅಪಾರ ಧನ-ಸ್ಥಾನಮಾನ ಪ್ರತಿಷ್ಠೆ!
Surya Gochar 2024:ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಸಿಂಹ ರಾಶಿಗೆ ಅಧಿಪತಿಯಾಗಿದ್ದಾನೆ. ಸರಿಸುಮಾರು ಒಂದು ತಿಂಗಳಿನ ಬಳಿಕ ಆತ ತನ್ನ ರಾಶಿಯನ್ನು ಪರಿವರ್ತಿಸುತ್ತಾನೆ. ಏಪ್ರಿಲ್ ತಿಂಗಳ ಆರಂಭದಲ್ಲಿ ಸೂರ್ಯ ಮೇಷ ರಾಶಿಗೆ ಪ್ರವೇಶಿಸುತ್ತಾನೆ. ಮೇಷ ಸೂರ್ಯನ ಉನ್ನತ ರಾಶಿಯಾಗಿದ್ದು, ಆತ ಉಚ್ಚ ಫಲಗಳನ್ನು ನೀಡುತ್ತಾನೆ. ಇದರಿಂದ ಕೆಲ ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದ್ದು, ಈ ರಾಶಿಗಳ ಜನರಿಗೆ ಅಪಾರ ಧನಲಾಭದ ಜೊತೆಗೆ ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗಲಿದೆ (Spiritual News In Kannada)
ಸಿಂಹ ರಾಶಿ: ಸೂರ್ಯ ನಿಮ್ಮ ರಾಶಿಗೆ ಅಧಿಪತಿಯಾಗುವುದರ ಜೊತೆಗೆ ನವಮ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ನಿಂತು ಹೋದ ನಿಮ್ಮ ಕೆಲಸಗಳು ಪೂರ್ಣಗೊಳ್ಳಲಿವೆ. ಇದರ ಜೊತೆಗೆ ನಿಮ್ಮ ಸ್ಥಾನಮಾನ ಪ್ರತಿಷ್ಠೆ ಕೂಡ ಹೆಚ್ಚಾಗಲಿದೆ. ಕೌಟುಂಬಿಕ ವಿಷಯದಲ್ಲಿಯೂ ಕೂಡ ಈ ಗೋಚರ ನಿಮಗೆ ಬೆಂಬಲ ನೀಡಲಿದೆ. ಸಂಗಾತಿ ಜೊತೆಗಿನ ನಿಮ್ಮ ಸಂಬಂಧ ಸುಧಾರಣೆಯಾಗಲಿದ್ದು, ದೇಶ-ವಿದೇಶಕ್ಕೆ ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ.
ಧನು ರಾಶಿ: ಸೂರ್ಯ ನಿಮ್ಮ ರಾಶಿಯ ಅಧಿಪತಿ ಗುರುವಿನ ಜೊತೆಗೆ ಸ್ನೇಹಭಾವದ ಸಂಬಂಧ ಹೊಂದಿದ್ದು, ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಿರುವಾಗ ಈ ಅವಧಿಯಲ್ಲಿ ನಿಮಗೆ ಮಕ್ಕಳಿಗೆ ಸಂಬಂಧಿಸಿದಂತೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಮಕ್ಕಳ ನೌಕರಿ ಅಥವಾ ವಿವಾಹ ನೆರವೇರಬಹುದು. ಇನ್ನೊಂದೆಡೆ ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಯಶ ಹಾಗೂ ಪ್ರತಿಷ್ಠೆ ಸಿಗಲಿದೆ. ಇದರಿಂದ ನೀವು ಸಾಕಷ್ಟು ಪ್ರಸನ್ನ ಹಾಗೂ ಸಂತುಷ್ಟಿಯನ್ನು ಅನುಭವಿಸುವಿರಿ. ನೌಕರಿಯಲ್ಲಿ ಬಡ್ತಿಯಿಂದ ಖುಷಿ ಸಿಗಲಿದೆ. ಪ್ರೇಮ ಸಂಬಂಧದಲ್ಲಿ ಯಶಸ್ಸು ಸಿಗಲಿದೆ.
ಮೀನ ರಾಶಿ: ಸೂರ್ಯ ನಿಮ್ಮ ಗೋಚರ ಜಾತಕದ ಧನ ಹಾಗೂ ವಾಣಿಯ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ನಿಮಗೆ ಕಾಲಕಾಲಕ್ಕೆ ಆಕಸ್ಮಿಕ ಧನಲಾಭವಾಗಿ, ದೈನಂದಿನ ಆದಾಯ ಕೂಡ ಹೆಚ್ಚಾಗಲಿದೆ. ಕೌಟುಂಬಿಕ ವಿಷಯಗಳಲ್ಲಿಯೂ ಕೂಡ ಈ ಗೋಚರ ನಿಮಗೆ ಸಾಕಷ್ಟು ಬೆಂಬಲ ನೀಡಲಿದೆ. ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಗಟ್ಟಿಯಾಗಲಿದೆ. ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಅಂದುಕೊಂಡ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿವೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)