Surya Grahan Horoscope: 54 ವರ್ಷಗಳ ಬಳಿಕ ಖರ್ಗ್ರಾಸ್ ಸೂರ್ಯ ಗ್ರಹಣ, ಈ ಜನರಿಗೆ ಬಂಬಾಟ್ ಲಾಟರಿ ಭಾಗ್ಯ!

Wed, 27 Mar 2024-8:03 pm,

ಸುದೀರ್ಘ 54 ವರ್ಷಗಳ ಬಳಿಕ ಖಗ್ರಾಸ್ ಸೂರ್ಯಗ್ರಹಣ ಗೋಚರಿಸುತ್ತಿದೆ. ಈ ಸೂರ್ಯಗ್ರಹಣವು ನವರಾತ್ರಿಯ (Chaitra Navaratri 2024) ಒಂದು ದಿನ ಮುಂಚಿತವಾಗಿ ಅಂದರೆ ಚೈತ್ರ ಅಮವಾಸ್ಯೆಯಂದು (Chaitra Amavasya 2024) ಗೋಚರಿಸಲಿದ್ದು, ಕೆಲ ರಾಶಿಗಳ (Astrology) ಜನರಿಗೆ ಜೀವನದಲ್ಲಿ  ಸಂತೋಷವನ್ನು ತರಲಿದೆ. ಸೂರ್ಯಗ್ರಹಣದ ಪ್ರಭಾವದಿಂದಾಗಿ (Surya Grahan 2024 Effect), ಈ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾಗಲಿವೆ, ಉದ್ಯೋಗ, ಕುಟುಂಬ, ವ್ಯಾಪಾರ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯಲಿದ್ದಾರೆ. ಸೂರ್ಯಗ್ರಹಣದಿಂದ ಯಾವ ರಾಶಿಯವರಿಗೆ (Zodias Signs) ಲಾಭವಾಗಲಿದೆ ತಿಳಿದುಕೊಳ್ಳೋಣ ಬನ್ನಿ (solar eclipse In Revati Nakshatra Meen Rashi)  

ಮೇಷ ರಾಶಿ - ಮೇಷ ರಾಶಿಯವರಿಗೆ, ಸೂರ್ಯಗ್ರಹಣವು ಅವರ ಆಸೆ ಆಕಾಂಕ್ಷೆಗಳನ್ನು ಈಡೇರಿಸಲಿದೆ. ಮುಂದಿನ ಒಂದು ತಿಂಗಳಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಲಿದೆ. ಶತ್ರುಗಳು ಕೆಲಸಕ್ಕೆ ಅಡ್ಡಿಯಾಗುವುದಿಲ್ಲ.   

ಮೇಷ ರಾಶಿಯ ಜನರಿಗೆ ಈ ಅವಧಿಯಲ್ಲಿ, ಕುಟುಂಬದಲ್ಲಿ ಬರುವ ಸಮಸ್ಯೆಗಳು ಪರಿಹಾರವಾಗಲಿವೆ. ಇದಲ್ಲದೆ, ಇದು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಕೆಲಸದ ಸ್ಥಳದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುವಿರಿ. ನಿಮಗೆ ಹೊಸ ಜವಾಬ್ದಾರಿ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ,  

ಮಕರ ರಾಶಿ - ಈ ವರ್ಷದ ಮೊದಲ ಸೂರ್ಯಗ್ರಹಣವು ಮಕರ ರಾಶಿಯವರಿಗೆ ಸಾಕಷ್ಟು ಅದೃಷ್ಟವನ್ನು ಹೊತ್ತುತರಲಿದೆ. ಹಣ ಗಳಿಕೆಯ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ, ಅದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸಾಕಷ್ಟು ಸುಧಾರಿಸಲಿದೆ. ಹಣವನ್ನು ಉಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ.  

ಮಕರ ರಾಶಿಯ ಜನರಿಗೆ ಈ ಸೂರ್ಯಗ್ರಹಣ ಅವರು ಸಾಕಹ್ತು ದಿನಗಳಿಂದ ಮಾಡಲು ಯೋಜಿಸುತ್ತಿರುವ ಕೆಲಸದಲ್ಲಿ ಯಶಸ್ಸನ್ನು ನೀಡಲಿದೆ. ಪಾರ್ಟ್ನರ್ ಶಿಪ್ ನಲ್ಲಿ ನೀವು ಮಾಡಿದ ವ್ಯಾಪಾರವು ಅಭಿವೃದ್ಧಿ ಹೊಂದಲಿದೆ. ನೌಕರವರ್ಗದ ಜನರಿಗೆ ಕ್ಷೇತ್ರದಲ್ಲಿ ಕಾರ್ಯಕ್ಕೆ ಮೆಚ್ಚುಗೆ ದೊರೆಯಲಿದೆ.  

ವೃಷಭ ರಾಶಿ - ಈ ಸೂರ್ಯಗ್ರಹಣವು ವೃಷಭ ರಾಶಿಯವರಿಗೆ ಸಾಕಷ್ಟು ಸಂತೋಷವನ್ನು ನೀಡಲಿದೆ. ಬಯಸಿದ ಉದ್ಯೋಗಕ್ಕಾಗಿ ಹುಡುಕಾಟವು ಪೂರ್ಣಗೊಳ್ಳಲಿದೆ. ಮಾನಸಿಕ ಒತ್ತಡದಿಂದ ನೆಮ್ಮದಿ ಸಿಗಲಿದೆ.   

ಈ ಖಗ್ರಾಸ್ ಸೂರ್ಯ ಗ್ರಹಣ ವೃಷಭ ರಾಶಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಸುದ್ದಿ ತರಲಿದೆ. ಕುಟುಂಬದವರ ಬೆಂಬಲದಿಂದ ಆರ್ಥಿಕ ಬಲ ಬರಲಿದೆ. ವ್ಯಾಪಾರದಲ್ಲಿ ಸಿಕ್ಕಿಬಿದ್ದ ಹಣ ವಾಪಸ್ ಬರಲಿದೆ.  

(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link