Sarva Pitru Amavasya: ನಾಳೆ ಶನಿ ಅಮಾವಾಸ್ಯೆಯಂದೇ ಸೂರ್ಯ ಗ್ರಹಣ, ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

Fri, 13 Oct 2023-6:44 am,

ಕುಟುಂಬದಲ್ಲಿ ಪೂರ್ವಜರ ಆಶೀರ್ವಾದ ಪಡೆಯಲು, ಪಿತೃ ದೋಷ ನಿವಾರಿಸಲು ಸರ್ವ ಪಿತೃ ಅಮಾವಾಸ್ಯೆ ಎಂದರೆ ಮಹಾಲಯ ಅಮಾವಾಸ್ಯೆಯ ದಿನವನ್ನು ತುಂಬಾ ಪ್ರಾಶಸ್ತ್ಯವಾದ ದಿನ ಎಂದು ನಂಬಲಾಗಿದೆ. ಈ ವರ್ಷ ನಾಳೆ ಅಕ್ಟೋಬರ್ 14 ರಂದು ಸರ್ವ ಪಿತೃ ಅಮವಾಸ್ಯೆಯನ್ನು ಆಚರಿಸಲಾಗುತ್ತಿದೆ. 

ಯಾವುದೇ ಶನಿವಾರದ ದಿನ ಅಮಾವಾಸ್ಯೆ ಬಂದರೆ ಅದನ್ನು ಶನಿ ಅಮಾವಾಸ್ಯೆ ಎಂತಲೂ ಕರೆಯಲಾಗುತ್ತದೆ.  ನಾಳೆ, ಶನಿವಾರದಂದು ಬರಲಿರುವ ಸರ್ವ ಪಿತೃ ಅಮಾವಾಸ್ಯೆಯನ್ನೂ ಸಹ ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಸರ್ವ ಪಿತೃ ಅಮಾವಾಸ್ಯೆಯ ದಿನವೇ ಸೂರ್ಯ ಗ್ರಹಣ ಸಂಭವಿಸುತ್ತಿದೆ. 

ಹಲವು ವರ್ಷಗಳ ನಂತರ ಸರ್ವ ಪಿತೃ ಅಮಾವಾಸ್ಯೆಯಂದು ಸೂರ್ಯಗ್ರಹಣ ಸಂಭವಿಸುತ್ತಿದೆ. ಅಮಾವಾಸ್ಯೆಯ ದಿನ ಅಕ್ಟೋಬರ್ 14ರ ರಾತ್ರಿ 8:34ರಿಂದ ಮರುದಿನ ಅಕ್ಟೋಬರ್ 15ರ ಮುಂಜಾನೆ 2:25 ರವರೆಗೆ ಸೂರ್ಯ ಗ್ರಹಣ ಇರಲಿದೆ. ಹಾಗಾಗಿ, ಭಾರತದಲ್ಲಿ ಇದು ಗೋಚರಿಸುವುದಿಲ್ಲ ಎಂದು ಹೇಳಲಾಗುತ್ತಿದೆ. 

ಖಗೋಳ ವಿಧ್ಯಮಾನಗಳಲ್ಲಿ ಒಂದಾದ ಗ್ರಹಣಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ವಿಶೇಷ ಮಹತ್ವವಿದೆ. ಇದೀಗ ಹಲವು ವರ್ಷಗಳ ಬಳಿಕ ಸರ್ವ ಪಿತೃ ಅಮಾವಾಸ್ಯೆಯ ದಿನ, ಅದರಲ್ಲೂ ವಿಶೇಷವಾಗಿ ಶನಿ ಅಮಾವಾಸ್ಯೆಯ ದಿನ ಸಂಭವಿಸುತ್ತಿರುವ ಸೂರ್ಯಗ್ರಹಣವೂ ಬಹಳ ವಿಶೇಷವಾಗಿದ್ದು ಈ ದಿನ ನಾವು ಅಪ್ಪಿತಪ್ಪಿಯೂ ಕೂಡ ಕೆಲವು ತಪ್ಪುಗಳನ್ನು ಮಾಡಲೇಬಾರದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಈ ದಿನ ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ನೋಡುವುದಾದರೆ... 

ಈ ವರ್ಷ ಸೂರ್ಯಗ್ರಹಣದ ನೆರಳಿನಲ್ಲಿ ಸರ್ವ ಪಿತೃ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದ್ದು ಇಂದು ಯಾವುದೇ ಕಾರಣಕ್ಕೂ ತುಳಸಿ ಪೂಜೆಯನ್ನು ಮಾಡಬಾರದು. ಮಾತ್ರವಲ್ಲ, ತುಳಸಿಯನ್ನು ಸ್ಪರ್ಶಿಸುವುದನ್ನು ಕೂಡ ನಿಷೇಧಿಸಲಾಗಿದೆ. ಇದರಿಂದ ತಾಯಿ ಲಕ್ಷ್ಮಿ ಕೋಪಿಸಿಕೊಳ್ಳುತ್ತಾಳೆ ಎನ್ನಲಾಗುತ್ತದೆ.

ಸರ್ವ ಪಿತೃ ಅಮಾವಾಸ್ಯೆಯ ದಿನ ಜಪ, ತಪ, ಉಪವಾಸವನ್ನು ಆಚರಿಸುವ ವ್ಯಕ್ತಿ ಈ ದಿನ ಮರೆತೂ ಸಹ ದೈಹಿಕ ಸಂಬಂಧವನ್ನು ಹೊಂದಬಾರದು. ಬ್ರಹ್ಮಚರ್ಯವನ್ನು ಆಚರಿಸಬೇಕು. ಇಲ್ಲದಿದ್ದರೆ, ಪಿತೃ ದೋಷ ಉಂಟಾಗಬಹುದು.  

ಸರ್ವ ಪಿತೃ ಅಮಾವಾಸ್ಯೆ, ಶನಿ ಅಮಾವಾಸ್ಯೆಯ ದಿನವೇ ಸೂರ್ಯ ಗ್ರಹಣವೂ ಇದೆ. ಇಂದು ಕೈಲಾಗದವರಿಗೆ ತೊಂದರೆ ನೀಡುವುದರಿಂದ ರಾಹು-ಕೇತು ಗ್ರಹಗಳು ನಕಾರಾತ್ಮಕ ಪರಿಣಾಮವನ್ನು ಬೀರಬಹುದು. 

ಅಮಾವಾಸ್ಯೆಯ ದಿನ ನಕಾರಾತ್ಮಕ ಶಕ್ತಿಗಳು ಹೆಚ್ಚು ಸಕ್ರಿಯವಾಗಿರುತ್ತವೆ. ಹಾಗಾಗಿ, ಸ್ಮಶಾನದಂತಹ ಸ್ಥಳಗಳಿಗೆ, ನಿರ್ಜನ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link