Surya Grahan 2024: ಹೊಸ ವರ್ಷದಲ್ಲಿ ಮೊದಲ ಸೂರ್ಯಗ್ರಹಣ ಯಾವಾಗ? ಎಲ್ಲೆಲ್ಲಿ ಗೋಚರ

Mon, 25 Dec 2023-6:00 am,

ಸೂರ್ಯ-ಚಂದ್ರ ಗ್ರಹಣಗಳು ಖಗೋಳ ವಿದ್ಯಮಾನಗಳು. ಇವು ಖಗೋಳ ಘಟನೆಗಳಾಗಿದ್ದರೂ ಸಹ ಜ್ಯೋತಿಷ್ಯದಲ್ಲಿ ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣಕ್ಕೆ ವಿಶೇಷ ಮಹತ್ವವಿದೆ. 

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ಆತ್ಮದ ಅಂಶವೆಂದು ಪರಿಗಣಿಸಲಾಗಿದೆ. ಹಾಗಾಗಿ ಸೂರ್ಯಗ್ರಹಣವು ಭೂಮಿಯ ಮೇಲೆ ವಾಸಿಸುವ ಎಲ್ಲಾ ಜೀವಿಗಳ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ

2024ರಲ್ಲಿ ಎರಡು ಬಾರಿ ಸೂರ್ಯಗ್ರಹಣ ಸಂಭವಿಸಲಿದೆ. ಮೊದಲ ಸೂರ್ಯಗ್ರಹಣವು ಏಪ್ರಿಲ್ 8ರಂದು ಸಂಭವಿಸಿದರೆ, ಎರಡನೇ ಸೂರ್ಯಗ್ರಹಣವು ಅಕ್ಟೋಬರ್ 02ರಂದು ಸಂಭವಿಸಲಿದೆ. 

2024ರ ಮೊದಲ ಸೂರ್ಯಗ್ರಹಣ:  2024ರ ಮೊದಲ ಸೂರ್ಯಗ್ರಹಣ ಏಪ್ರಿಲ್ 8ರಂದು ಸಂಭವಿಸಲಿದೆ. ಏಪ್ರಿಲ್ 8 ರಂದು ರಾತ್ರಿ 09:12 ರಿಂದ ಮಧ್ಯರಾತ್ರಿ 01:25 ರವರೆಗೆ. ಸೂರ್ಯಗ್ರಹಣದ ಒಟ್ಟು ಅವಧಿ: 4 ಗಂಟೆ 25 ನಿಮಿಷಗಳು  

2024ರ ಮೊದಲ ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ: ಈ ಗ್ರಹಣವು ಪೆಸಿಫಿಕ್ ಪಶ್ಚಿಮ ಯುರೋಪ್, ಅಟ್ಲಾಂಟಿಕ್, ಆರ್ಕ್ಟಿಕ್, ಮೆಕ್ಸಿಕೋ, ಉತ್ತರ ಅಮೆರಿಕಾ (ಅಲಾಸ್ಕಾ ಹೊರತುಪಡಿಸಿ), ಕೆನಡಾ, ಮಧ್ಯ ಅಮೆರಿಕ, ದಕ್ಷಿಣ ಅಮೆರಿಕಾದ ಉತ್ತರ ಭಾಗಗಳು, ಇಂಗ್ಲೆಂಡ್‌ನ ವಾಯುವ್ಯ ಪ್ರದೇಶ ಮತ್ತು ಐರ್ಲೆಂಡ್‌ನಲ್ಲಿ ಸಂಭವಿಸಲಿದೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲ. 

2024ರ ಎರಡನೇ ಸೂರ್ಯಗ್ರಹಣ:  ವರ್ಷದ ಎರಡನೇ ಹಾಗೂ ಕೊನೆಯ ಸೂರ್ಯಗ್ರಹಣ ಅಕ್ಟೋಬರ್ 02 ರಂದು ರಾತ್ರಿ 09:13ಕಕ್ಕೆ ಆರಂಭವಾಗಿ ಮಧ್ಯರಾತ್ರಿ 03:17 ಕ್ಕೆ ಕೊನೆಗೊಳ್ಳುತ್ತದೆ.  ಸೂರ್ಯಗ್ರಹಣದ ಒಟ್ಟು ಅವಧಿ: 6 ಗಂಟೆ 04 ನಿಮಿಷಗಳು. 

2024ರ ಎರಡನೇ ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ: 2024 ರ ಎರಡನೇ ಸೂರ್ಯಗ್ರಹಣವು ದಕ್ಷಿಣ ಅಮೆರಿಕಾದ ಉತ್ತರ ಭಾಗಗಳು, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್, ಆರ್ಕ್ಟಿಕ್, ಚಿಲಿ, ಪೆರು, ಹೊನೊಲುಲು, ಅಂಟಾರ್ಕ್ಟಿಕಾ, ಅರ್ಜೆಂಟೀನಾ, ಉರುಗ್ವೆ, ಬ್ಯೂನಸ್ ಐರಿಸ್, ಬೆಕಾ ದ್ವೀಪ, ಫ್ರೆಂಚ್ ಪಾಲಿನೇಷ್ಯಾ ಸಾಗರ, ಉತ್ತರ ಅಮೆರಿಕದ ದಕ್ಷಿಣ ಭಾಗ, ಫಿಜಿ, ನ್ಯೂಗಳಲ್ಲಿ ಗೋಚರಿಸುತ್ತದೆ. ಚಿಲಿ, ಬ್ರೆಜಿಲ್, ಮೆಕ್ಸಿಕೋ ಮತ್ತು ಪೆರುವಿನಲ್ಲಿ ಗೋಚರಿಸುತ್ತದೆ. ಈ ಗ್ರಹಣವೂ ಸಹ ಭಾರತದಲ್ಲಿ ಗೋಚರಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link