Surya Makara Sankranti 2024: ಒಂದು ವರ್ಷದ ಬಳಿಕ ವೃಷಭ ರಾಶಿಗೆ ಸೂರ್ಯನ ಪ್ರವೇಶ, ಈ ಜನರಿಗೆ ಭಾರಿ ಧನಲಾಭದ ಜೊತೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು!

Fri, 05 Jan 2024-6:12 pm,

Surya Makara Sankranti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಸೂರ್ಯನ ಮಕರ ಸಂಕ್ರಮಣ ನೆರವೇರಲಿದೆ. ಸೂರ್ಯನ ಈ ಮಕರ ಸಂಕ್ರಮಣ ಹಲವು ಜಾತಕದವರಿಗೆ ಅಪಾರ ಧನ-ಸಂಪತ್ತಿನ ಜೊತೆಗೆ ಸ್ಥಾನಮಾನವನ್ನು ಕರುಣಿಸಲಿದೆ. (Spiritual News In Kannada)  

ಮೇಷ ರಾಶಿ: ಸೂರ್ಯನ ಮಕರ ಸಂಕ್ರಮಣ ಮೇಷ ರಾಶಿಯ ಜಾತಕದವರಿಗೆ ಅಪಾರ ಲಾಭವನ್ನು ತಂದು ಕೊಡಲಿದೆ. ಏಕೆಂದರೆ ಸೂರ್ಯ ನಿಮ್ಮ ಗೋಚರ ಜಾತಕದ ಪಂಚಮ ಭಾವದ ಅಧಿಪತಿಯಾಗಿ ದಶಮ ಭಾವಕ್ಕೆ ಪ್ರವೇಶಿಸುತ್ತಿದ್ದಾನೆ. ಇದರಿಂದ ನಿಮಗೆ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಲಾಭ ಸಿಗಲಿದೆ. ಕಾರ್ಯಕ್ಷೇತ್ರದ ಕುರಿತು ಹೇಳುವುದಾದರೆ, ಈ ರಾಶಿಯ ಜಾತಕದವರಿಗೆ ವಿಶೇಷ ಲಾಭ ಸಿಗಲಿದೆ. ನಿಮ್ಮ ಕೆಲಸಕ್ಕೆ ಪ್ರಶ್ಮ್ಸೆ ವ್ಯಕ್ತವಾಗಲಿದೆ. ಇದರಿಂದ ಉನ್ನತ ಅಧಿಕಾರಿಗಳು ನಿಮಗೆ ದೊಡ್ಡ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ. ಇದಲ್ಲದೆ ಬಿಸ್ನೆಸ್ ನಲ್ಲಿ ತೊಡಗಿಸಿಕೊಂಡವರಿಗೂ ಕೂಡ ಅಪಾರ ಧನಲಾಭ ಸಿಗಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಇದರಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಸಾಕಷ್ಟು ಹಣ ಉಳಿತಾಯ ಮಾಡುವಲ್ಲಿಯೂ ಕೂಡ ನೀವು ಯಶಸ್ವಿಯಾಗುವಿರಿ. ಕೌಟುಂಬಿಕ ವಾತಾವರಣ ಸುಖಮಯವಾಗಿರಲಿದೆ. ಲವ್ ಲೈಫ್ ಕೂಡ ಉತ್ತಮವಾಗಿರಲಿದೆ. ಸ್ಥಾನಮಾನ ಕೂಡ ವೃದ್ಧಿಯಾಗಲಿದ್ದು, ಆರೋಗ್ಯ ಕೂಡ ಉತ್ತಮವಾಗಿಯಲಿದೆ.   

ಸಿಂಹ ರಾಶಿ: ಸೂರ್ಯ ನಿಮ್ಮ ಜಾತಕದ ಪ್ರಥಮ ಭಾವಕ್ಕೆ ಅಧಿಪತಿ ಹಾಗೂ ಮಕರ ರಾಶಿಗೆ ಪ್ರವೇಶಿಸಿ ನಿಮ್ಮ ಗೋಚರ ಜಾತಕದ ಶಷ್ಟಮ ಭಾವದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಇದರಿಂದ ನಿಮಗೆ ಹೊಸ ನೌಕರಿಯ ಆಫರ್ ಬರುವ ಸಾಧ್ಯತೆ ಇದೆ. ನೌಕರವರ್ಗದ ಜನರಿಗೆ ಪದೋನ್ನತಿ ಭಾಗ್ಯ. ಪ್ರೋತ್ಸಾಹನೆ ಸಿಗಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ವಿಶಿಷ್ಟ ಕಾರ್ಯಶೈಲಿಯ ಕಾರಣ ನಿಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗುವಿರಿ. ವ್ಯಾಪಾರಿಗಳಿಗೆ ಹೇಳುವುದಾದರೆ. ವ್ಯಾಪಾರದಲ್ಲಿ ಹಲವು ಲಾಭದ ಅವಕಾಶಗಳು ಒದಗಿ ಬರಲಿವೆ. ನಿಂತುಹೋದ ಮಹತ್ವದ ಒಪ್ಪಂದ ಅಂತಿಮಗೊಳಿಸುವಿರಿ. ದೀರ್ಘಾವಧಿಯಿಂದ ಬಿಸ್ನೆಸ್ ನಲ್ಲಿ ನಡೆದುಕೊಂಡ ಸಮಸ್ಯೆಗಳು ಅಂತ್ಯವಾಗಲಿವೆ. ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ, ಹೂಡಿಕೆಯಿಂದ ಅಪಾರ ಲಾಭ ಗಳಿಸುವಿರಿ. ಆದಾಯದ ಹೊಸ ಮಾರ್ಗಗಳು ಕೂಡ ತೆರೆದುಕೊಳ್ಳಲಿವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಕಾಳಜಿವಹಿಸಿ.   

ಮೀನ ರಾಶಿ: ನಿಮ್ಮ ಗೋಚರ ಜಾತಕದ ಶಷ್ಟಮ ಭಾವಕ್ಕೆ ಸೂರ್ಯ ಅಧಿಪತಿ ಹಾಗೂ ಆತ ಮಕರ ರಾಶಿಗೆ ಸಂಕ್ರಮಿಸಿ ನಿಮ್ಮ ಜಾತಕದ ಏಕಾದಶ ಭಾವವನ್ನು ಪ್ರವೇಶಿಸಲಿದ್ದಾನೆ. ಇದರಿಂದ ಅಧಿಯ ಯಶಸ್ಸು-ಧನಲಾಭ ನಿಮ್ಮದಾಗಲಿದೆ. ವೃತ್ತಿ ಜೀವನದಲ್ಲಿ ಈ ಅವಧಿ ವಿಶೇಷವಾಗಿರಲಿದೆ. ಪದೋನ್ನತಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಪರಿಶ್ರಮದ ಸಂಪೂರ್ಣ ಫಲ ನಿಮಗೆ ಸಿಗಲಿದೆ. ಜೀವನದಲ್ಲಿ ಹಲವು ಖುಷಿಗಳು ನಿಮ್ಮ ಕದ ತಟ್ಟಲಿವೆ. ವ್ಯಾಪಾರದಲ್ಲಿ ಮುಂದುವರೆಯುವ ಹಲವು ಅವಕಾಶಗಳು ನಿಮಗೆ ಸಿಗಳಿವೆ. ಆರ್ಥಿಕ ಸ್ಥಿತಿ ಕೂಡ ಅತ್ಯುತ್ತಮವಾಗಿರಲಿದೆ. ಬಾಳಸಂಗಾತಿ ಜೊತೆಗೆ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ.  

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link