Grah Gochar: ಅಕ್ಟೋಬರ್‌ನಲ್ಲಿ ರಾಹು-ಕೇತು ಸಮೇತ 6 ಗ್ರಹಗಳ ರಾಶಿ ಬದಲಾವಣೆ, 5 ರಾಶಿಯವರಿಗೆ ಬಂಪರ್ ಲಾಭ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕ್ಟೋಬರ್‌ನಲ್ಲಿ ನವಗ್ರಹಗಳಲ್ಲಿ ಆರು ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ಅಕ್ಟೋಬರ್ 2023 ರಲ್ಲಿ ಬುಧ, ಶುಕ್ರ, ಮಂಗಳ, ಸೂರ್ಯ ಮತ್ತು ರಾಹು-ಕೇತುಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ಇದರ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳು ದ್ವಾದಶ ರಾಶಿಗಳ ಮೇಲೆ ಕಂಡುಬರುತ್ತದೆ. ಆದಾಗ್ಯೂ, ಐದು ರಾಶಿಯವರಿಗೆ ಇದನ್ನು ಲಾಭದಾಯಕ ಸಮಯವೆಂದು ಹೇಳಲಾಗುತ್ತಿದೆ. ಯಾವ ಗ್ರಹ ಯಾವಾಗ ರಾಶಿ ಪರಿವರ್ತನೆ ಹೊಂದಲಿದೆ. ಯಾವ ರಾಶಿಯವರಿಗೆ ಅದೃಷ್ಟವನ್ನು ತರಲಿದೆ ಎಂದು ತಿಳಿಯೋಣ...
ಗ್ರಹಗಳ ರಾಜಕುಮಾರ ಬುಧನು ಅಕ್ಟೋಬರ್ 1, 2023 ರಂದು, ರಾತ್ರಿ 08.45 ಕ್ಕೆ ಕನ್ಯಾರಾಶಿಯನ್ನು ಪ್ರವೇಶಿಸಲಿದ್ದಾನೆ. ಬುಧ ರಾಶಿ ಪರಿವರ್ತನೆಯು ಕನ್ಯಾ ರಾಶಿಯವರ ವೃತ್ತಿ ಜೀವನದಲ್ಲಿ ಪ್ರಗತಿಯ ಹೊಸ ಹಾದಿಯನ್ನು ತೆರೆಯಲಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ, ಐಷಾರಾಮಿ ಜೀವನಕಾರಕ ಎಂದು ಪರಿಗಣಿಸಲ್ಪಟ್ಟಿರುವ ಶುಕ್ರನು ಅಕ್ಟೋಬರ್ 2, 2023 ರಂದು, ಮಧ್ಯಾಹ್ನ 01.18 ಕ್ಕೆ ಸಿಂಹರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಶುಕ್ರನ ರಾಶಿಚಕ್ರ ಬದಲಾವಣೆಯ ಪರಿಣಾಮವಾಗಿ ಮಿಥುನ ರಾಶಿ ಮತ್ತು ಧನು ರಾಶಿಯವರು ಅಕ್ಟೋಬರ್ ಮಾಸದಲ್ಲಿ ಬಂಪರ್ ಧನಲಾಭವನ್ನು ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಕಮಾಂಡರ್ ಗ್ರಹ ಎಂತಲೇ ಕರೆಯಲ್ಪಡುವ ಮಂಗಳನು ಅಕ್ಟೋಬರ್ 3, 2023 ರಂದು, ರಾಶಿ ಪರಿವರ್ತನೆ ಹೊಂದಿ ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದರ ಶುಭ ಪರಿಣಾಮ ಸಿಂಹ ರಾಶಿಯವರ ಮೇಲೆ ಕಂಡು ಬರಲಿದ್ದು, ಈ ಸಮಯದಲ್ಲಿ ಸಿಂಹ ರಾಶಿಯವರು ಪ್ರಮೋಷನ್ ಪಡೆಯುವ ಸಾಧ್ಯತೆಯಿದೆ.
ಗ್ರಹಗಳ ರಾಜ ಎಂದು ಕರೆಯಲ್ಪಡುವ ಸೂರ್ಯ ದೇವನು 18 ಅಕ್ಟೋಬರ್ 2023 ರಂದು ಬೆಳಿಗ್ಗೆ 01.42 ಕ್ಕೆ ತುಲಾ ರಾಶಿಗೆ ರಾಶಿ ಪರಿವರ್ತನೆ ಹೊಂದಲಿದಾನೆ. ಇದರೊಂದಿಗೆ ತುಲಾ ರಾಶಿಯಲ್ಲಿ ಸೂರ್ಯ-ಮಂಗಳ ಯುತಿ ಉಂಟಾಗಲಿದೆ. ಇದರ ಪರಿಣಾಮವಾಗಿ ಸಿಂಹ ರಾಶಿ ಮತ್ತು ಧನು ರಾಶಿಯವರಿಗೆ ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ಸಮಾಜದಲ್ಲಿ ಗೌರವವೂ ವೃದ್ದಿಯಾಗಲಿದೆ.
ವೈದಿಕ ಜ್ಯೋತಿಷ್ಯದಲ್ಲಿ ಛಾಯಾ ಗ್ರಹಗಳು ಎಂತಲೇ ಕರೆಯಲ್ಪಡುವ ರಾಹು-ಕೇತು ಗ್ರಹಗಳು ಕೂಡ ಅಕ್ಟೋಬರ್‌ನಲ್ಲಿ ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ಸದಾ ಹಿಮ್ಮುಖವಾಗಿ ಚಲಿಸುವ ಈ ಗ್ರಹಗಳು ಒಂದೂವರೆ ವರ್ಷಗಳಿಗೊಮ್ಮೆ ರಾಶಿ ಪರಿವರ್ತನೆ ಹೊಂದುತ್ತವೆ. ಅಕ್ಟೋಬರ್ 30 ರಂದು ರಾಹು ಗ್ರಹವು ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸಿದರೆ, ಕೇತು ತುಲಾ ರಾಶಿಯನ್ನು ತೊರೆದು ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ರಾಹು-ಕೇತು ಗ್ರಹಗಳ ರಾಶಿ ಪರಿವರ್ತನೆಯಿಂದ ಮಕರ ರಾಶಿಯವರ ಅದೃಷ್ಟ ಖುಲಾಯಿಸಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.