ಐವತ್ತು ವರ್ಷಗಳ ಬಳಿಕ ಮಕರ ರಾಶಿಯಲ್ಲಿ ಸೂರ್ಯ ಮಂಗಳರ ಶುಭ ಸಂಯೋಜನೆ, ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ ಯೋಗ!
Sruya Mangal Yuti 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮಕರ ರಾಶಿಯಲ್ಲಿ ಸೂರ್ಯ ಮಂಗಳರ ಶುಭ ಸಂಯೋಜನೆ ನೆರವೇರಲಿದೆ ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. Spiritual News In Kannada
ಮೇಷ ರಾಶಿ: ಈ ಮೈತ್ರಿ ನಿಮ್ಮ ಜಾತಕದ ಕರ್ಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ವೃತ್ತಿ-ವ್ಯಾಪಾರದಲ್ಲಿ ನಿಮಗೆ ಸಾಕಷ್ಟು ಉನ್ನತಿಯಾಗಲಿದೆ. ನೌಕರಿ ಹಾಗೂ ವ್ಯಾಪಾರಿಗಳಿಗೆ ಸೂರ್ಯ ಮಂಗಳರ ಈ ಮೈತ್ರಿ ಉತ್ತಮ ಲಾಭದ ಜೊತೆಗೆ ಆದಾಯವನ್ನು ಕೂಡ ಹೆಚ್ಚಿಸಲಿದೆ. ನಿವೇಶನ ಖರೀದಿಗೆ ಯೋಜನೆ ರೂಪಿಸುತ್ತಿದ್ದರೆ, ಈ ಅವಧಿ ನಿಮ್ಮ ಪಾಲಿಗೆ ಅತ್ಯುತ್ತಮ ಸಾಬೀತಾಗಲಿದೆ, ಈ ಅವಧಿಯಲ್ಲಿ ವ್ಯಾಪಾರಿಗಳಿಗೆ ಅಧಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ವಿದ್ಯಾರ್ಹ್ತಿಗಳಿಗೆ ಹೊಸ ವರ್ಷ ಸಾಕಷ್ಟು ಅನುಕೂಲತೆಗಳನ್ನು ತರುತ್ತಿದ್ದು ಶಿಕ್ಷಣ ಕ್ಷೇತ್ರದಲ್ಲಿ ಅವರು ಉತ್ತಮ ಸಾಧನೆಯನ್ನು ಮಾಡುವರು. ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿರುವವರಿಗೆ ಶುಭ ಸಮಾಚಾರ ಸಿಗುವ ಸಾಧ್ಯತೆ ಇದೆ.
ವೃಷಭ ರಾಶಿ: ಈ ಮೈತ್ರಿಯಿಂದ ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಏಕೆಂದರೆ ಈ ಯುತಿ ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದರಿಂದ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಘನತೆ-ಗೌರವದಲ್ಲಿ ಸಾಕಷ್ಟು ವೃದ್ಧಿಯಾಗಲಿದೆ. ಹೊಸ ವರ್ಷದಲ್ಲಿ ಹಣ ಉಳಿತಾಯ ಮಾಡುವಲ್ಲಿ ನೀವು ಯಶಸ್ವಿಯಾಗುವಿರಿ ಮತ್ತು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ ಈ ಅವಧಿಯಲ್ಲಿ ನೀವು ಧಾರ್ಮಿಕ ಹಾಗೂ ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸುವ ನಿರೀಕ್ಷೆ ಇದೆ, ಅದು ನಿಮ್ಮ ಪಾಲಿಗೆ ಸಾಕಷ್ಟು ಶುಭವಾಗಿರಲಿದೆ.
ಧನು ರಾಶಿ: ಸೂರ್ಯ-ಮಂಗಳರ ಈ ಮೈತ್ರಿ ನಿಮ್ಮ ಗೋಚರ ಜಾತಕದ ಧನ ಹಾಗೂ ವಾಹಿಯ ಭಾವದಲ್ಲಿ ರೂಪುಗೊಳ್ಳುತ್ತಿದೆ. ಈ ಅವಧಿಯಲ್ಲಿ ನಿಮ್ಮ ಸಂಪರ್ಕ ಹೆಚ್ಚಾಗಲಿದ್ದು, ನಿಮ್ಮ ಸಾಮಾಜಿಕ ಕ್ಷೇತ್ರ ಹೆಚ್ಚಾಗಲಿದೆ. ವೃತ್ತಿ ಜೀವನದಲ್ಲಿ ಉನ್ನತಿಯ ಹಲವು ಅವಕಾಶಗಳು ಸಿಗಲಿವೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿ ಪ್ರಭಾವವಿರಲಿದ್ದು, ಜನರು ನಿಮ್ಮತ್ತ ಆಕರ್ಷಿತರಾಗಲಿದ್ದಾರೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)