Surya Meen Rashi Gochar 2024: ತನ್ನ ಸ್ನೇಹಿತನ ರಾಶಿಯಲ್ಲಿ ಗ್ರಹಗಳ ರಾಜನ ಗೋಚರ, ಈ ಜನರ ಮೇಲೆ ಭಾರಿ ಧನವೃಷ್ಟಿ!

Wed, 24 Jan 2024-8:45 pm,

Surya Meen Rashi Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಸೂರ್ಯನ ಮೀನ ರಾಶಿ ಗೋಚರ ನೆರೆವೆರುತ್ತಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ಭಾರಿ ಧನಲಾಭ ಉಂಟಾಗುವ ಸಂಕೇತಗಳಿವೆ. (Spiritual News In Kannada)  

ಮಿಥುನ ರಾಶಿ: ಈ ಅವಧಿಯಲ್ಲಿ ಸೂರ್ಯ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಕೆಲಸ ಕಾರ್ಯಗಳಲ್ಲಿ ನಿಮಗೆ ಭಾರಿ ಯಶಸ್ಸು ಸಿಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ನಿಮಗೆ ನಿಮ್ಮ ಪ್ರತಿಷ್ಠೆಯ ಲಾಭ ಸಿಗಲಿದೆ. ನೌಕರಿಯಲ್ಲಿ ನಿಮಗೆ ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹನ ಹಾಗೂ ಲಾಭ ಸಿಗಲಿದೆ. ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಅವಧಿಯಲ್ಲಿ ಸಾಕಷ್ಟು ಯಶಸ್ಸು ಸಿಗಲಿದೆ. ಸ್ಥಾನಮಾನ ಕೂಡ ಪ್ರಾಪ್ತಿಯಾಗಲಿದೆ. ವ್ಯಾಪಾರ ವರ್ಗದ ಜನರಿಗೂ ಕೂಡ ಉತ್ತಮ ಧನಲಾಭ ಕಾದಿದೆ. ಹೊಸ ಕಾರ್ಯ ಆರಂಭಕ್ಕೆ ಇದು ಅತ್ಯಂತ ಒಳ್ಳೆಯ ಸಮಯ ಎಂದರೆ ತಪ್ಪಾಗಲಾರದು,   

ಕರ್ಕ ರಾಶಿ:  ಈ ಅವಧಿಯಲ್ಲಿ ಸೂರ್ಯ ನಿಮ್ಮ ಜಾತಕದ ನವಮ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ನಿಮ್ಮ ಭಾಗ್ಯೋದಯ ಬಹುತೇಕ ಪಕ್ಕಾ ಎಂದರೆ ತಪ್ಪಾಗಲಾರದು. ನೀವು ಅಂದುಕೊಂಡ ಯೋಜನೆಗಳನ್ನು ನೀವು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಅವು ನಿಮಗೆ ಶುಭ ಫಲಗಳನ್ನು ನೀಡಲಿವೆ. ಇದಲ್ಲದೆ ಈ ಅವಧಿಯಲ್ಲಿ ನಿಮಗೆ ಸುಖ ನೀಡುವ ಕೆಲ ಸಮಾಚಾರಗಳು ನಿಮಗೆ ಪ್ರಾಪ್ತಿಯಾಗಲಿವೆ. ದೂರದ ಪ್ರಯಾಣ ಜರುಗುವ ಸಾಧ್ಯತೆ ಇದೆ. ಧಾರ್ಮಿಕ ಹಾಗೂ ಮಂಗಳ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವಿರಿ.   

ಧನು ರಾಶಿ:  ಈ ಅವಧಿಯಲ್ಲಿ ಸೂರ್ಯದೇವ ನಿಮ್ಮ ಜಾತಕದ ಚತುರ್ಥ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ನಿಮಗೆ ವಾಹನ ಆಸ್ತಿಪಾಸ್ತಿ ಸುಖ ಪ್ರಾಪ್ತಿಯಾಗಲಿದೆ. ಕಾರ್ಯಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಸಂಪತ್ತಿನ ಮೂಲಕ ಕೂಡ ನಿಮಗೆ ಅಪಾರ ಲಾಭ ಸಿಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಪೋಷಕರ ಅಪಾರ ಬೆಂಬಲ ಕೂಡ ಸಿಗಲಿದೆ. ಧನ ಪ್ರಾಪ್ತಿಯ ಹೊಸ ಮೂಲಗಳು ಕೂಡ ನಿಮ್ಮ ಪಾಲಿಗೆ ತೆರೆದುಕೊಳ್ಳಲಿವೆ  

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link