Surya Nakshatra Gochar 2024: ಚಂದಿರನ ನಕ್ಷತ್ರದಲ್ಲಿ ಸೂರ್ಯನ ಪ್ರವೇಶ, ಈ ಜನರಿಗೆ ಪ್ರಾಪ್ತಿಯಾಗಲಿದೆ ಧನಕುಬೇರ ನಿಧಿ!

Thu, 25 Jan 2024-8:59 pm,

Surya Nakshatra Parivartan 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜ ಸೂರ್ಯ ಜನವರಿ 24, 2024 ರಂದು ಚಂದ್ರಿನನ ಅಧಿಪತ್ಯದ ಶ್ರವಣಾ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. ಇದರಿಂದ ಕೆಲ ರಾಶಿಗಳ ಜನರಿಗೆ ಧನಕುಬೇರ ನಿಧಿ ಪ್ರಾಪ್ತಿಯಾಗಲಿದೆ. (Spiritual News In Kannada)  

ಮೇಷ ರಾಶಿ: ಸೂರ್ಯನ ಈ ಶ್ರವಣಾ ನಕ್ಷತ್ರ ಗೋಚರ ನಿಮ್ಮ ಪಾಲಿಗೆ ಒಂದು ವರದಾನ ಎಂದರೆ ತಪ್ಪಾಗಲಾರದು. ಈ ಅವಧಿಯಲ್ಲಿ ನಿಮಗೆ ನಿಮ್ಮ ನೌಕರಿಯಲ್ಲಿ ಉನ್ನತಿ ಇರಲಿದೆ. ಆರ್ಥಿಕ ಕ್ಷೇತ್ರದಲ್ಲಿ ನಡೆಸಲಾದ ಪ್ರಯತ್ನ ಯಶಸ್ವಿಯಾಗಲಿದೆ. ನೌಕರ ವರ್ಗದ ಜನರಿಗೆ ಕಾರ್ಯಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ಅಂದುಕೊಂಡ ಜಾಗಕ್ಕೆ ವರ್ಗಾವಣೆ ಭಾಗ್ಯ ಪ್ರಾಪ್ತಿಯಾಗಲಿದೆ. ವ್ಯಾಪಾರಿಗಳಾಗಿದ್ದರೆ, ಈ ಅವಧಿಯಲ್ಲಿ ನಿಮಗೆ ಉತ್ತಮ ಧನಲಾಭ ಉಂಟಾಗಲಿದೆ. ನೌಕರಿಯಲ್ಲಿ ಹೊಸ ಅವಕಾಶಗಳು ಪಾಪ್ತಿಯಾಗಲಿವೆ.   

ತುಲಾ ರಾಶಿ: ಸೂರ್ಯನ ಈ ಶ್ರವಣಾ ನಕ್ಷತ್ರ ಗೋಚರ ನಿಮ್ಮ ಪಾಲಿಗೆ ಸಾಕಷ್ಟು ಶುಭ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ಈ ಅವಧಿಯಲ್ಲಿ ನೀವು ವಾಹನ ಖರೀದಿಸುವ ಸಾಧ್ಯತೆ ಇದೆ. ಏಕೆಂದರೆ ನಿಮ್ಮ ಜಾತಕದಲ್ಲಿ ವಾಹನ ಸುಖದ ಯೋಗ ಗೋಚರಿಸುತ್ತಿದೆ. ನೀವು ಅಂದುಕೊಂಡ ಯೋಜನೆಗಳು ಪೂರ್ಣಗೊಳ್ಳಲಿವೆ. ಘನತೆ-ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಸಂಪತ್ತಿನ ಮೂಲಕ ಕೂಡ ನಿಮಗೆ ಸಾಕಷ್ಟು ಲಾಭ ಸಿಗಲಿದೆ.   

ಕನ್ಯಾ ರಾಶಿ: ಸೂರ್ಯದೇವನ ಈ ನಕ್ಷತ್ರ ಪರಿವರ್ತನೆ ನಿಮ್ಮ ಪಾಲಿಗೂ ಕೂಡ ಅದ್ಭುತ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಸಾಹಸ-ಪರಾಕ್ರಮ ಹೆಚ್ಚಾಗಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಭಾಗ್ಯ ನಿಮ್ಮ ಪರವಾಗಿರಲಿದೆ. ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಆದಾಯದಲ್ಲಿ ಜಬರ್ದಸ್ತ ಹೆಚ್ಚಳ ಉಂಟಾಗಲಿದೆ. ಈ ಅವಧಿ ವಿದ್ಯಾರ್ಥಿಗಳ ಪಾಲಿಗೆ ಸಾಕಷ್ಟು ಅನುಕೂಲಕರವಾಗಿದೆ. ಪರೀಕ್ಷೆಗಳಲ್ಲಿ ಮನಸ್ಸಿಗೆ ತಕ್ಕಂತೆ ಫಲಿತಾಂಶ ಪ್ರಕಟವಾಗಲಿದೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link