ಒಂದು ವರ್ಷದ ಬಳಿಕ ತನ್ನ ಸ್ವಂತ ರಾಶಿಯಲ್ಲಿ ಸೂರ್ಯನ ಪ್ರವೇಶ, ಈ ರಾಶಿಗಳಿಗೆ ಅಪಾರ ಧನಲಾಭ-ಉನ್ನತಿಯ ಯೋಗ!
ಮಿಥುನ ರಾಶಿ: ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಸೂರ್ಯನ ಈ ಸಂಕ್ರಮಣ ನೆರವೇರಲಿದೆ. ಇದರಿಂದ ನಿಮಗೆ ವಿಶೇಷ ಲಾಭ ಸಿಗಲಿದೆ. ನೌಕರ ವರ್ಗದ ಜನರ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಪದೋನ್ನತಿಯ ಎಲ್ಲಾ ಸಾಧ್ಯತೆಗಳಿವೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸಗಳು ಪುನಃ ಆರಂಭಗೊಳ್ಳಲಿವೆ. ಕುಟುಂಬ ಹಾಗೂ ಬಂಧುಮಿತ್ರರ ಜೊತೆಗೆ ಒಂದು ಅವಿಸ್ಮರಣೀಯ ಯಾತ್ರೆ ಜರುಗುವ ಎಲ್ಲಾ ಸಾಧ್ಯತೆಗಳಿವೆ.
ಕರ್ಕ ರಾಶಿ: ನಿಮ್ಮ ಗೋಚರ ಜಾತಕದ ದ್ವಿತೀಯ ಭಾವದಲ್ಲಿ ಸೂರ್ಯನ ಈ ಸಂಕ್ರಮಣ ನೆರವರುತ್ತಿದೆ. ಸಾಮಾನ್ಯವಾಗಿ ಜೋತಿಷ್ಯದಲ್ಲಿ ಈ ಭಾವವನ್ನು ಉಳಿತಾಯ, ಮಾತು ಹಾಗೂ ಕೌಟುಂಬಿಕ ಭಾವ ಎಂದು ಭಾವಿಸಲಾಗುತ್ತದೆ. ಹೀಗಿರುವಾಗ ನಿಮಗೆ ಆಕಷ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ನೌಕರ ವರ್ಗದ ಜನರ ಜೀವನದಲ್ಲಿ ಖುಷಿಗಳ ಆಗಮನವಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ ಹಾಗೂ ಅವರ ಬೆಂಬಲ ನಿಮಗೆ ಸಿಗಲಿದೆ. ಆದರೆ ಮಾತು ಹಾಗೂ ವ್ಯವಹಾರದ ಮೇಲೆ ಹಿಡಿತವಿರಲಿದೆ. ಸಂಬಂಧ ಹಾಳುಮಾಡಬಹುದು.
ಸಿಂಹ ರಾಶಿ: ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಸೂರ್ಯನ ಈ ಗೋಚರ ನೆರವೇರುತ್ತಿದೆ. ಸೂರ್ಯ ನಿಮ್ಮ ರಾಶಿಗೆ ರಾಶ್ಯಾಧಿಪನಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಉತ್ತಮ ಆರೋಗ್ಯ, ಶಕ್ತಿ, ಆತ್ಮವಿಶ್ವಾಸ ಲಭಿಸಲಿದೆ. ನೀವು ನಿಮ್ಮ ಕೆಲಸದ ಆಧಾರದ ಮೇಲೆ ಯಶಸ್ಸನ್ನು ಸಂಪಾದಿಸುವಿರಿ. ಹೊಸ ಅವಕಾಶಗಳೂ ಕೂಡ ಒದಗಿ ಬರಲಿವೆ ಮತ್ತು ಆದಷ್ಟು ಅವುಗಳನ್ನು ಹಿಡಿದಿಟ್ಟುಕೂಳಲು ಪ್ರಯತ್ನಿಸಿ. ಆರೋಗ್ಯ ಉತ್ತಮವಾಗಿರಲಿದೆ. ಬೇರೆಯವರ ಸಹಾಯಕ್ಕೆ ಇಳಿದು ನೀವು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿವಿರಿ.
ತುಲಾ ರಾಶಿ: ಸೂರ್ಯ ಸಂಕ್ರಾಂತಿ ತುಲಾ ರಾಶಿಯವರ ಜಾತಕದ ಏಕಾದಶ ಭಾವದಲ್ಲಿ ನೆರವೇರುತ್ತಿದೆ. ಸಾಮಾನ್ಯವಾಗಿ ಈ ಭಾವವನ್ನು ಧನ ಲಾಭ, ತಂದೆ, ಕುಟುಂಬದ ಇತರ ಸದಸ್ಯರಿಗೆ ಸಂಬಂಧಿಸಿದೆ. ಹೀಗಿರುವಾಗ ಸೂರ್ಯನ ಈ ಸಿಂಹ ಸಂಕ್ರಮಣ ನಿಮ್ಮ ಪಾಲಿಗೆ ಅತ್ಯಂತ ಲಾಭಕಾರಿ ಸಿದ್ಧ ಸಾಬೀತಾಗಲಿದೆ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ. ದೀರ್ಘಾವಧಿಯಿಂದ ನಿಂತುಹೋದ ಕೆಲಸ ಕಾರ್ಯಗಳಿಗೆ ಮತ್ತೆ ಗತಿ ಸಿಗಲಿದೆ. ನಿಮ್ಮ ಕಠಿಣ ಪರಿಶ್ರಮ ತಕ್ಕ ಪ್ರತಿಫಲ ನೀಡಲಿದೆ. ಬಿಸ್ನೆಸ್ ನಲ್ಲಿ ಅಪಾರ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಕುಟುಂಬ ಹಾಗೂ ಮಕ್ಕಳ ಜೊತೆಗೆ ಉತ್ತಮ ಕಾಲ ಕಳೆಯುವಿರಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)