Surya Shukra Yuti: ಕರ್ಕ ರಾಶಿಯಲ್ಲಿ ಸೂರ್ಯ-ಶುಕ್ರರ ಸಂಯೋಗ, 3 ರಾಶಿಯವರಿಗೆ ಹಣದ ಸುರಿಮಳೆ
ಜುಲೈ 7 ರಂದು, ಸಂಪತ್ತು, ಪ್ರೀತಿ, ಸೌಂದರ್ಯ ಮತ್ತು ಭೌತಿಕ ಸಂತೋಷವನ್ನು ನೀಡುವ ಶುಕ್ರ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ.
ಶುಕ್ರ ಸಂಚಾರದ ಒಂದು ವಾರದ ಬಳಿಕ ಜುಲೈ 16ರಂದು ಗ್ರಹಗಳ ರಾಜ ಸೂರ್ಯ ಕೂಡ ಕರ್ಕ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
ಈ ರೀತಿಯಾಗಿ ಸುಮಾರು ಐದು ವರ್ಷಗಳ ಬಳಿಕ ಕರ್ಕಾಟಕ ರಾಶಿಯಲ್ಲಿ ಶುಕ್ರ-ಸೂರ್ಯರ ಸಂಯೋಗದಿಂದ ಶುಭ ಯೋಗ ನಿರ್ಮಾಣವಾಗುತ್ತಿದೆ.
ಜುಲೈ 31, 2024ರವರೆಗೆ ಕರ್ಕಾಟಕ ರಾಶಿಯಲ್ಲಿ ಶುಕ್ರ-ಸೂರ್ಯರ ಸಂಯೋಗ ಇರಲಿದ್ದು ಈ ಸಮಯದಲ್ಲಿ ಮೂರು ರಾಶಿಯವರ ಜೀವನದಲ್ಲಿ ಅದೃಷ್ಟ ಲಕ್ಷ್ಮಿಯ ಪ್ರವೇಶವಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಸ್ವ ರಾಶಿಯಲ್ಲಿ ಶುಕ್ರ-ಸೂರ್ಯರ ಯುತಿಯಿಂದ ಕರ್ಕಾಟಕ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಹಣ ಗಳಿಸಲು ಹೊಸ ಮಾರ್ಗಗಳು ಲಭಿಸಲಿದೆ. ಇದರಿಂದ ಆರ್ಥಿಕ ಸ್ಥಿತಿಯೂ ಉತ್ತಮಗೊಳ್ಳುತ್ತದೆ.
ಶುಕ್ರ ಸೂರ್ಯ ಸಂಯೋಗವು ಕನ್ಯಾ ರಾಶಿಯವರಿಗೆ ಆದಾಯವನ್ನು ಹೆಚ್ಚಿಸಲಿದೆ. ವ್ಯಾಪಾರದಲ್ಲಿ ಲಾಭದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಹೂಡಿಕೆಯಿಂದಲೂ ಲಾಭವನ್ನು ನಿರೀಕ್ಷಿಸಬಹುದು.
ಸೂರ್ಯ-ಶುಕ್ರರ ಸಂಯೋಗದಿಂದ ತುಲಾ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಒಳ್ಳೆಯ ಫಲಗಳು ಲಭಿಸಲಿವೆ. ಉದ್ಯೋಗದಲ್ಲಿ ಪ್ರಗತಿಯಿಂದ ಆದಾಯವೂ ಹೆಚ್ಚಳವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಸಾಧ್ಯತೆ ಇದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.