365 ದಿನಗಳ ಬಳಿಕ ಕನ್ಯಾ ರಾಶಿಯಲ್ಲಿ ಶುಕ್ರಾದಿತ್ಯ ರಾಜಯೋಗ, 3 ರಾಶಿಯವರಿಗೆ ಕೈ ಇಟ್ಟಲ್ಲೆಲ್ಲಾ ಯಶಸ್ಸು, ಹಣಕ್ಕಿಲ್ಲ ಕೊರತೆ
ಜ್ಯೋತಿಷ್ಯ ಶಾಸ್ತ್ರದಲ್ಲಿ ಐಷಾರಾಮಿ, ಸುಖ-ಸಂಪತ್ತಿನ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರ ನಿನ್ನೆಯಷ್ಟೇ (ಸೆಪ್ಟೆಂಬರ್ 16) ಕನ್ಯಾ ರಾಶಿಗೆ ಪ್ರವೇಶಿಸಿದ್ದಾನೆ.
ಗ್ರಹಗಳ ರಾಜ ಸೂರ್ಯದೇವ ಈಗಾಗಲೇ ಕನ್ಯಾ ರಾಶಿಯಲ್ಲೇ ಸ್ಥಿತನಾಗಿದ್ದಾನೆ.
ಬರೋಬ್ಬರಿ 365 ದಿನಗಳ ಬಳಿಕ ಕನ್ಯಾ ರಾಶಿಯಲ್ಲಿ ಸೂರ್ಯ-ಶುಕ್ರ ಸಂಯೋಗದಿಂದ ಅತ್ಯಂತ ಶುಭಕರವಾದ ಶುಕ್ರಾದಿತ್ಯ ರಾಜಯೋಗ ನಿರ್ಮಾಣವಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರಾದಿತ್ಯ ರಾಜಯೋಗದ ಪ್ರಭಾವದಿಂದಾಗಿ ಮೂರು ರಾಶಿಯವರ ಬದುಕಿನಲ್ಲಿ ಭಾಗ್ಯದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ.
ಶುಕ್ರಾದಿತ್ಯ ರಾಜಯೋಗವು ಈ ರಾಶಿಯವರಿಗೆ ಕೈ ಇಟ್ಟಲ್ಲೆಲ್ಲಾ ಯಶಸ್ಸನ್ನು ನೀಡಲಿದೆ. ಕೌಟುಂಬಿಕ ಸುಖ ಹೆಚ್ಚಾಗಲಿದೆ. ವೃತ್ತಿ-ವ್ಯವಹಾರದಲ್ಲಿ ಯಶಸ್ಸು ಕೀರ್ತಿ ನಿಮ್ಮನ್ನು ಹರಸಿ ಬರಲಿದೆ.
ಎರಡು ಶುಭ ಗ್ರಹಗಳಿಂದ ನಿರ್ಮಾಣವಾಗಿರುವ ಶುಕ್ರಾದಿತ್ಯ ರಾಜಯೋಗವು ಈ ರಾಶಿಯವರ ಬದುಕಿನಲ್ಲಿ ಪ್ರತಿ ಕ್ಷೇತ್ರದಲ್ಲೂ ಶುಭ ಫಲಗಳನ್ನು ತರಲಿದೆ. ಅದರಲ್ಲೂ, ವೃತ್ತಿ ಬದುಕಿನಲ್ಲಿ ವಿಶೇಷ ಲಾಭವಾಗಲಿದೆ. ಹಣದ ಹರಿವು ಹೆಚ್ಚಾಗಿ, ಆರೋಗ್ಯವೂ ಸುಧಾರಿಸಲಿದೆ.
ಶುಕ್ರಾದಿತ್ಯ ರಾಜಯೋಗದಿಂದ ಈ ರಾಶಿಯವರು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಯಶಸ್ಸನ್ನು ನೀಡಲಿದೆ. ಆರ್ಥಿಕ ಸ್ಥಿತಿ ಸುಧಾರಿಸಿ ಜೀವನದಲ್ಲಿ ಸುಖ-ಸಂತೋಷ ಇಮ್ಮಡಿಗೊಳ್ಳಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.