ಡ್ಯಾನ್ಸ್ ನೋಡಿ ಲವ್ವಲ್ಲಿ ಬಿದ್ದ! ಮೊದಲ ನೋಟದಲ್ಲೇ ಕರ್ನಾಟಕದ ಈ ಬೆಡಗಿಗೆ ಮನಸೋತು ನಿಂತಲ್ಲೇ ಪ್ರಪೋಸ್ ಮಾಡಿದ ಟೀಂ ಇಂಡಿಯಾದ ಕ್ರಿಕೆಟಿಗನೀತ
ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಪ್ರಯಾಣದ ಜೊತೆಗೆ ಅವರ ಪ್ರೇಮ ಜೀವನವೂ ತುಂಬಾ ಆಸಕ್ತಿದಾಯಕವಾಗಿದೆ. ಸೂರ್ಯಕುಮಾರ್ ಯಾದವ್’ಗೆ ಅವರ ಪತ್ನಿಯೇ ಬೆನ್ನೆಲುಬು.
ಸೂರ್ಯಕುಮಾರ್ ಯಾದವ್ ಅವರು 2016 ರಲ್ಲಿ ದೇವಿಶಾ ಶೆಟ್ಟಿ ಎಂಬವರನ್ನು ವಿವಾಹವಾಗಿದ್ದಾರೆ. ಅಂದಹಾಗೆ ದೇವಿಶಾ 1993 ರಲ್ಲಿ ಮುಂಬೈನಲ್ಲಿ ಜನಿಸಿದರು. ಆದರೆ ಕರ್ನಾಟಕದ ಮಂಗಳೂರಿಗೆ ಅವರ ನಂಟು ಇದೆ. ಉಡುಪಿ, ಮಂಗಳೂರಿನ ದೇವಾಲಯಕ್ಕೆ ದೇವಿಶಾ ಕುಟುಂಬ ಸಮೇತ ಆಗಾಗ್ಗೆ ಭೇಟಿ ನೀಡುತ್ತಾರೆ.
ಮುಂಬೈನ ಪೊದ್ದಾರ್ ಕಾಲೇಜ್ ಆಫ್ ಆರ್ಟ್ಸ್‌ನಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ಮೊದಲು ಭೇಟಿಯಾಗಿದ್ದು. ಈ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ದೇವಿಶಾ ಡ್ಯಾನ್ಸ್ ನೋಡಿ ಸೂರ್ಯ ಲವ್ವಲ್ಲಿ ಬಿದ್ದಿದ್ದರಂತೆ.
ದೇವಿಶಾ ಶೆಟ್ಟಿಗೆ ಕಾಲೇಜು ಜೀವನದಿಂದಲೂ ನೃತ್ಯದ ಬಗ್ಗೆ ಒಲವು. ಡ್ಯಾನ್ಸ್ ಕಾರ್ಯಕ್ರಮದಿಂದಲೇ ಇಬ್ಬರ ಪ್ರೇಮಕಥೆ ಶುರುವಾಗಿದೆ. ಮದುವೆಗೂ ಮುನ್ನ ಇಬ್ಬರೂ 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ದೇವಿಶಾ 2013 ರಿಂದ 2015 ರವರೆಗೆ 'ದಿ ಲೈಟ್‌ಹೌಸ್ ಪ್ರಾಜೆಕ್ಟ್' ಎಂಬ ಎನ್‌ಜಿಒಗೆ ಸ್ವಯಂಸೇವಕರಾಗಿ ಕೆಲಸ ಮಾಡಿದ್ದಾರೆ
ದೇವಿಶಾ ಶೆಟ್ಟಿ ಹಲವು ಬಾರಿ ಸ್ಟೇಡಿಯಂಗೆ ಆಗಮಿಸಿ, ಸೂರ್ಯಕುಮಾರ್ ಯಾದವ್ ಅವರನ್ನು ಬೆಂಬಲಿಸುತ್ತಿರುವುದು ಕಂಡುಬಂದಿದೆ. ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ಇಬ್ಬರೂ Instagram ನಲ್ಲಿ ಸಕ್ರಿಯರಾಗಿದ್ದು, ತಮ್ಮ ಫೋಟೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ.