ಅಸೂಯೆ ಇಲ್ಲ..ನಾಯಕತ್ವ ಕೈ ತಪ್ಪಿದ ಮೇಲೂ ಸ್ನೇಹದಲ್ಲಿ ಬಿರುಕಿಲ್ಲ..ಗೆಳಯನ್ನನ್ನು ಬಿಗಿದಪ್ಪಿ ಅಭಿನಂದಿಸಿದ ಹಾರ್ದಿಕ್‌ ಪಾಂಡ್ಯ..!

Wed, 24 Jul 2024-12:30 pm,

ಭಾರತ ಹಾಗೂ ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ20 ಸರಣಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಭಾರತ ಟಿ20 ತಂಡದ ನಾಯಕನಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಹಾಗೂ ಹೊಸ ಕೋಚ್ ಆಗಿ ಗೌತಮ್ ಗಂಭೀರ್ ಅವರ ಮೊದಲ ಸರಣಿ ಇದಾಗಿರುವುದರಿದ ಇದು ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.   

ಹಾರ್ದಿಕ್ ಪಾಂಡ್ಯ ಮುಂದಿನ ನಾಯಕರಾಗುತ್ತಾರೆ ಎಂದು ಹಲವರು ನಿರೀಕ್ಷಿದಿದ್ದರು, ಬಿಸಿಸಿಐ ಆಡಳಿತವು ಹಠಾತ್ ಅವರನ್ನು ನಾಯಕನ ಸ್ಥಾನದಿಂದ ಕೈಬಿಟ್ಟಿದೆ. ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನ ಸ್ಥಾನದಿಂದ ಅಷ್ಟೆ ಅಲ್ಲದೆ, ಉಪನಾಯಕನ ಸ್ಥಾನದಿಂದಲೂ ಬಿಸಿಸಿಐ ಕೆಳಗಿಳಿಸಿದೆ. ಈಗಾಗಲೇ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯಗೆ, ಈ ಘಟನೆಯು ಹೆಚ್ಚು ಆಘತ ನೀಡಿದೆ.   

ಈ ಪರಿಸ್ಥಿತಿಯಲ್ಲಿ ಶ್ರೀಲಂಕಾ ತಂಡದ ವಿರುದ್ಧದ ಟಿ20 ಸರಣಿಯಲ್ಲಿ ಭಾಗವಹಿಸಲು ಭಾರತದ ಆಟಗಾರರು ಕೊಲಂಬೊ ತಲುಪಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ನೂತನ ನಾಯಕನಾಗಿ ನೇಮಕಗೊಂಡ ಸೂರ್ಯಕುಮಾರ್ ಯಾದವ್ ಅವರನ್ನು ಅಭಿನಂದಿಸಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರ ಸ್ನೇಹವನ್ನು ಕಂಡು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.   

ಅಭಿಮಾನಿಗಳು ಈ ವಿಡಿಯೋವನ್ನು ಎಲ್ಲಡೆ ಶೇರ್ ಮಾಡುತ್ತಿದ್ದು, ಈ ಮೂಲಕ ಕ್ಯಾಪ್ಟನ್ ಅಲ್ಲದಿದ್ದರೂ ಸೂರ್ಯಕುಮಾರ್ ಯಾದವ್ ಬಗ್ಗೆ ಅಸೂಯೆ ಇಲ್ಲ ಎಂಬುದನ್ನು ಸಾಬೀತುಪಡಿಸಿರುವ ಹಾರ್ದಿಕ್ ಪಾಂಡ್ಯ ಅವರನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಇದರೊಂದಿಗೆ ಭಾರತ ತಂಡದಲ್ಲಿ ಆಟಗಾರರ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂಬುದು ದೃಢಪಟ್ಟಿದೆ.  

ಭಾರತ ತಂಡದ ನಾಯಕತ್ವದ ಬಗ್ಗೆ ಭಾರತೀಯ ಆಟಗಾರರೊಂದಿಗೆ ಸಮಾಲೋಚಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ. ಸೂರ್ಯಕುಮಾರ್ ಯಾದವ್ ಅವರಿಗೆ ಭಾರತ ತಂಡದ ಆಟಗಾರರ ಬೆಂಬಲವಿರುವುದು ಗಮನಾರ್ಹ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link