11 ಮಂದಿ ಜೊತೆ ಡೇಟಿಂಗ್ ಮಾಡಿದರೂ ಕೂಡಿ ಬಂದಿಲ್ಲ ಕಂಕಣ ಭಾಗ್ಯ ! 24ನೇ ವಯಸ್ಸಿನಲ್ಲಿಯೇ ತಾಯಿಯಾದರು ಈ ಖ್ಯಾತ ನಟಿ

Tue, 05 Dec 2023-10:42 am,

1994ರಲ್ಲಿ ಮಿಸ್ ಯುವಿವರ್ಸ್ ಕಿರೀಟ ಮುಡಿಗೇರಿಸಿಕೊಂಡ ಚೆಲುವೆ ಸುಶ್ಮಿತಾ ಸೇನ್. ಭುವನ ಸುಂದರಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸವನ್ನು  ಸುಶ್ಮಿತಾ ನಿರ್ಮಿಸಿದರು. 

1994 ರಲ್ಲಿ ಭುವನ ಸುಂದರಿ ಪ್ರಶಸ್ತಿಯನ್ನು ಗೆದ್ದ ನಂತರ, ಸುಶ್ಮಿತಾ ಸೇನ್ 1996 ರಲ್ಲಿ ಬಾಲಿವುಡ್ ನತ್ತ ಹೆಜ್ಜೆ ಹಾಕಿದರು.  ದಸ್ತಕ್‌ನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅವರು ನಂತರ ಅವರು ತಮಿಳು ಆಕ್ಷನ್ ಚಿತ್ರ ರಚಗನ್ ನಲ್ಲಿಯೂ ಕಾಣಿಸಿಕೊಂಡರು. ಇದಾದ ನಂತರ ಮತ್ತೆ ಬಾಲಿವುಡ್‌ಗೆ  ಮರಳಿದ ಅವರು ಸಲ್ಮಾನ್ ಖಾನ್ ಜೊತೆ ಬಿವಿ ನಂ 1 ನಲ್ಲಿ  ಕಾಣಿಸಿಕೊಂಡರು. 

 ಈ ಮಧ್ಯೆ ಅನೇಕ ಪ್ರಸಿದ್ಧ ವ್ಯಕ್ತಿಗಳೊಂದಿಗೆ ರ ಸುಶ್ಮಿತಾ ಹೆಸರು ತಳುಕು ಹಾಕಿಕೊಂಡಿತ್ತು. ಲಲಿತ್ ಮೋದಿ, ಸಂಜಯ್ ನಾರಂಗ್, ರಣದೀಪ್ ಹೂಡಾ, ಇಮ್ತಿಯಾಜ್ ಖತ್ರಿ, ವಾಸಿಂ ಅಕ್ರಮ್ ಮತ್ತು ಮುದಸ್ಸರ್ ಅಜೀಜ್ ಸೇರಿದಂತೆ 11 ಜನರೊಂದಿಗೆ ಸುಶ್ಮಿತಾ ಡೇಟಿಂಗ್ ನಡೆಸಿರುವ ಬಗ್ಗೆ ಸುದ್ದಿ ಹಬ್ಬಿತ್ತು. 

ತನ್ನ 24 ನೇ ವಯಸ್ಸಿನಲ್ಲಿ, ಸುಶ್ಮಿತಾ ಸೇನ್ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡರು. ರೆನೀಯನ್ನು ದತ್ತು ಪಡೆದ ಸುಶ್ಮಿತಾ ಸಿಂಗಲ್ ಪೇರೆಂಟ್ ಆಗಲು ನಿರ್ಧರಿಸಿದರು. 

2010 ರಲ್ಲಿ, ಸುಶ್ಮಿತಾ ಸೇನ್ ಮತ್ತೊಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡರು.  ಸುಶ್ಮಿತಾ ಎರಡನೇ ಪುತ್ರಿಯ ಹೆಸರು ಅಲಿಸಾ.   

ಅನೇಕ ವಿಫಲ ಸಂಬಂಧಗಳ ನಂತರ, ಸುಶ್ಮಿತಾ ಸೇನ್ 15 ವರ್ಷಗಳ ಕಿರಿಯ ಕಾಶ್ಮೀರಿ ಮಾಡೆಲ್ ರೋಹ್ಮನ್ ಶಾಲ್ ಜೊತೆಯೂ ಸಂಬಂಧ ಇರಿಸಿಕೊಂಡಿದ್ದರು.  ಇವರಿಬ್ಬರೂ ಸೋಶಿಯಲ್ ಮಿಡಿಯಾದಲ್ಲಿ ತಮ್ಮಿಬ್ಬರ ಫೋಟೋ ಗಳನ್ನೂ ಶೇರ್ ಮಾಡಿಕೊಳ್ಳುತ್ತಿದ್ದರು.  ಆದರೆ ಇದೀಗ ರೋಹ್ಮನ್  ಜೊತೆಗಿನ ಸಂಬಂಧವೂ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. 

ಇದೆಲ್ಲದರ ಮಧ್ಯೆ ಸುಶ್ಮಿತಾ ಅಡಿಸನ್ ಕಾಯಿಲೆಯಿಂದ ಬಳಲಿದ್ದಾರೆ. ಆದರೆ ಈ ಕಾಯಿಲೆ ವಿರುದ್ದ ಹೋರಾಡಿ, ಸಂಪೂರ್ಣ ಗುಣಮುಖರಾಗಿದ್ದಾರೆ.  ಈ ಮಧ್ಯೆ ತನ್ನ 43 ನೇ ವಯಸ್ಸಿನಲ್ಲಿ ಲಘು ಹೃದಯಾಘಾತಕ್ಕೂ ಒಳಗಾಗಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link