ಬ್ಲಡ್ ಶುಗರ್ ಅನ್ನು ಕಂಪ್ಲೀಟ್ ನಿಯಂತ್ರಣಕ್ಕೆ ತರುವ ಶಕ್ತಿ ಇರುವುದು ಈ ತರಕಾರಿಗೆ ಮಾತ್ರ !ಚಳಿಗಾಲದಲ್ಲಿಯಷ್ಟೇ ಸಿಗುವ ಈ ವಸ್ತು ಕ್ಯಾನ್ಸರ್ ರೋಗಿಗಳಿಗೂ ಸಂಜೀವಿನಿ !
ನೈಸರ್ಗಿಕವಾಗಿ ಸಿಗುವ ಕೆಲವು ಪದಾರ್ಥಗಳನ್ನು ಸರಿಯಾಗಿ ಬಳಸಿದರೆ ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಾರ್ಮಲ್ ಆಗಿ ಇಟ್ಟುಕೊಳ್ಳುವುದು ಸಾಧ್ಯವಾಗುತ್ತದೆ.
ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಸಿಹಿಗೆಣಸು ವಿಟಮಿನ್ ಎ, ಸಿ ಮತ್ತು ಇ ಅನ್ನು ಹೊಂದಿರುತ್ತದೆ.ಇದರಲ್ಲಿ ಅಡಗಿರುವ ಫೈಬರ್ ಅಂಶದಿಂದಾಗಿ ಜೀರ್ಣಕ್ರಿಯೆಗೆ ಒಳ್ಳೆಯದು.
ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಸಿಹಿಗೆಣಸು ಬೆಳಗಿನ ಉಪಹಾರಕ್ಕೆ ಬೆಸ್ಟ್.ಇದರಲ್ಲಿರುವ ಕ್ಯಾರೊಟಿನಾಯ್ಡ್ ಗಳು ಮತ್ತು ಆಂಥೋಸಯಾನಿನ್ ಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವೂ ಈ ತರಕಾರಿಗಿದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಸಿಹಿ ಗೆಣಸು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ತರಕಾರಿ.ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸ್ಥಿರವಾಗಿರಿಸಲು ಸಹಾಯ ಮಾಡುತ್ತದೆ.
ಸಿಹಿ ಗೆಣಸನ್ನು ಸ್ವಲ್ಪ ಉಪ್ಪು ಹಾಕಿ ಸಿಂಪಲ್ ಆಗಿ ಬೇಯಿಸಿ ತಿನ್ನಬಹುದು. ಅಥವಾ ಕ್ನೆದದಲ್ಲಿ ಸುತ್ತು ಕೂಡಾ ಸೇವಿಸಬಹುದು. ಇಲ್ಲಾ ಆಲೂಗಡ್ಡೆಯಂತೆ ಬೇಯಿಸಿ ಪಲ್ಯ ಮಡಿ ದೋಸೆ, ಚಪಾತಿ ಜೊತೆ ಸೇವಿಸಬಹುದು.
ಸೂಚನೆ : ಇವೆಲ್ಲವೂ ಸಾಮಾನ್ಯ ಮತ್ತು ಮನೆಮದ್ದು ಆಧಾರಿತ ಮಾಹಿತಿಯ ಆಧಾರದ ಮೇಲೆ ಬರೆಯಲಾಗಿದೆ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.ಇದಕ್ಕೆ ಜೀ ಕನ್ನಡ ನ್ಯೂಸ್ ಹೊಣೆಯಲ್ಲ.