ಮಧುಮೇಹವನ್ನು ಶಾಶ್ವತವಾಗಿ ನಿಯಂತ್ರಿಸುತ್ತೆ ಈ ಸಿಹಿತಿಂಡಿ! ಕಣ್ಣುಮುಚ್ಚಿ ತಿನ್ನಬಹುದು-ಆರೋಗ್ಯಕ್ಕೆ ಭಾರೀ ಉತ್ತಮ
ಜೀವಕೋಶಗಳಲ್ಲಿನ ಇನ್ಸುಲಿನ್ ಪ್ರತಿರೋಧಕ್ಕೆ ಪ್ರತಿಕ್ರಿಯೆಯಾಗಿ ಮಧುಮೇಹ ಉಂಟಾಗುತ್ತದೆ. ಇನ್ಸುಲಿನ್ ಹಾರ್ಮೋನ್ ಆಗಿದ್ದು ಅದು ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ಸುಲಿನ್ ಗೆ ಪ್ರತಿರೋಧದ ಕೊರತೆಯು ಹೆಚ್ಚುವರಿ ಸಕ್ಕರೆಯನ್ನು ರಕ್ತದಲ್ಲಿ ಸಂಗ್ರಹಿಸಲು ಕಾರಣವಾಗುತ್ತದೆ.
ಈ ಲೇಖನದಲ್ಲಿ ಮಧುಮೇಹ ಇರುವವರು ತಿನ್ನಲು ಸುರಕ್ಷಿತವಾದ ಮತ್ತು ಸುಲಭವಾಗಿ ತಯಾರಿಸಬಹುದಾದ ಸಿಹಿ ತಿಂಡಿಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ.
ಕೋಕೋ & ನಟ್ ಬಟರ್: ಮಧುಮೇಹಿಗಳ ಆಹಾರ ಕ್ರಮಕ್ಕೆ ಕೋಕೋ ಪೌಡರ್ ಉತ್ತಮ ಸೇರ್ಪಡೆಯಾಗಿದೆ. ಕೋಕೋ & ನಟ್ ಬಟರ್ ಅಥವಾ ಮನೆಯಲ್ಲಿ ತಯಾರಿಸಿದ ಸಕ್ಕರೆ-ಮುಕ್ತ ನಟ್ ಬಟರ್ ನ್ನು ಸೇವಿಸಬಹುದು. ಇದರ ರುಚಿಯನ್ನು ಮತ್ತಷ್ಟು ಹೆಚ್ಚಿಸಲು ಸೇಬು ಅಥವಾ ಇತರ ಹಣ್ಣುಗಳೊಂದಿಗೆ ಸೇವಿಸಿ.
ಚಿಯಾ ಪುಡಿಂಗ್: ಚಿಯಾ ಪುಡಿಂಗ್ ಮಧುಮೇಹಿಗಳ ಆಹಾರಕ್ಕೆ ಮತ್ತೊಂದು ಉತ್ತಮ ಸೇರ್ಪಡೆಯಾಗಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಚಿಯಾ ಬೀಜಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ವಿವಿಧ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಸಹ ಇದು ಕಡಿಮೆ ಮಾಡುತ್ತದೆ. ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಫೈಬರ್, ಪೊಟ್ಯಾಸಿಯಮ್ ಮತ್ತು ಮುಂತಾದ ವಿವಿಧ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.
ಸೇಬು ಮತ್ತು ನಟ್ ಬಟರ್: ಪೀನಟ್ ಬಟರ್ ಜೊತೆಗೆ ಸೇಬನ್ನು ಸೇವಿಸಬಹುದು. ಸೇಬು ಮತ್ತು ಪೀನಟ್ ಬಟರ್ ನಲ್ಲಿ ಫೈಬರ್, ಪ್ರೋಟೀನ್, ವಿಟಮಿನ್ ಸಿ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಮುಂತಾದ ವಿವಿಧ ಪೋಷಕಾಂಶಗಳಿವೆ.
ಗ್ರೀನ್ ಯೋಗರ್ಟ್: ಇದು ಮಧುಮೇಹಿಗಳಿಗೆ ರುಚಿಕರವಾದ ತಿಂಡಿಯ ಆಯ್ಕೆಯಾಗಿದೆ. ಸ್ಟೀವಿಯಾವನ್ನು ಸಿಹಿಕಾರಕವಾಗಿ ಬಳಸುವ ಮೂಲಕ ಗ್ರೀನ್ ಯೋಗರ್ಟ್ ಸೇವಿಸಬಹುದು. ಇದನ್ನು ಮಧುಮೇಹಿಗಳಿಗೆ ಸುರಕ್ಷಿತ ಪರ್ಯಾಯವೆಂದು ಪರಿಗಣಿಸಲಾಗುತ್ತದೆ.
ಪೇರಳೆ: ಸೇಬಿನಂತೆಯೇ ಪೇರಳೆಯು ಮಧುಮೇಹಿಗಳಿಗೆ ಸೇವನೆಗೆ ಯೋಗ್ಯವಾದ ಹಣ್ಣುಗಳಾಗಿವೆ. ಇವುಗಳನ್ನು ಬೆಣ್ಣೆ, ಡಾರ್ಕ್ ಚಾಕೊಲೇಟ್, ಯೋಗರ್ಟ್ ಇತ್ಯಾದಿಗಳೊಂದಿಗೆ ಸೇವಿಸಬಹುದು.
ಓಟ್ ಮೀಲ್ ಬೈಟ್ಸ್: ಮಧುಮೇಹಿಗಳಿಗೆ ಸಾಮಾನ್ಯವಾಗಿ ಓಟ್ಸ್ ನ್ನು ಆಹಾರವಾಗಿ ನೀಡಲಾಗುತ್ತದೆ. ಆದರೆ ಮಾಗಿದ ಬಾಳೆಹಣ್ಣು ಮತ್ತು ದಾಲ್ಚಿನ್ನಿ ಸೇರಿಸಿ, ಅವುಗಳನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಸೇವಿಸಬಹುದು. ರುಚಿಯೂ-ಆರೋಗ್ಯವು ಸಿಗುತ್ತದೆ,
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಒಳಪಟ್ಟಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು zee news kannada ಹೊರುವುದಿಲ್ಲ.