Swift Z series: ಮಾರುತಿ ಸ್ವಿಫ್ಟ್‌ನ ಹೊಸ Z ಸರಣಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ ಕಾರು ಬಿಡುಗಡೆ
ಈ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಫ್ರಂಟ್ ಬಂಪರ್, ರೆಡಿಯೇಟರ್ ಗ್ರಿಲ್, ಫ್ರೋಟರಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, LED ಹೆಡ್‌ಲೈಟ್ಸ್ & ಫಾಗ್ ಲೈಟ್ಸ್ ನೀಡಲಾಗಿದೆ. ಹಿಂದಿನ ಮಾದರಿಗಿಂತಲೂ 15MM ಉದ್ದ, 40MM ಅಗಲ ಮತ್ತು 30MM ಎತ್ತರ ಹೊಂದಿದ್ದು, ಆರಾಮದಾಯಕ ಪ್ರಯಾಣಕ್ಕೆ ಅನುಕೂಲಕರವಾಗಿದೆ.
ದೇಶದಲ್ಲಿ 29 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಸ್ವಿಫ್ಟ್ ಬ್ರ್ಯಾಂಡ್ ಕಾರಿಗೆ ಭಾರೀ ಬೇಡಿಕೆಯಿದೆ. ಕಂಪನಿಯು ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಹೊಸ ಮಾದರಿಯ ಸ್ವಿಫ್ಟ್ ಕಾರನ್ನು ಅಭಿವೃದ್ಧಿಪಡಿಸಲಾಗಿದೆ.
ಇದೇ ಮೇ 9ರಂದು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಬಿಡುಗಡೆಯಾಗಿದ್ದ ಈ ಕಾರು ಇದೀಗ ಕರ್ನಾಟಕದ ಮಾರುಕಟ್ಟೆಯಲ್ಲಿಯೂ ಲಭ್ಯವಿದೆ. ಈಗಾಗಲೇ 14 ಸಾವಿರಕ್ಕೂ ಹೆಚ್ಚು ಯುನಿಟ್‌ಗಳು ಬುಕ್ಕಿಂಗ್ ಆಗಿವೆ.
3 ಸಿಲಿಂಡರ್ ವೈಶಿಷ್ಟ್ಯತೆಯ 1.2 ಲೀಟರ್ Z12E ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಇದು 5 ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. ಇದರಲ್ಲಿ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 24.8KM ಮೈಲೇಜ್ ನೀಡಿದರೆ, ಆಟೋಮ್ಯಾಟಿಕ್ ಮಾದರಿಯು 25.75KM ಮೈಲೇಜ್ ನೀಡುತ್ತದೆ.
ಹೊಸ ಕಾರು ಹಿಂದಿನ ಮಾದರಿಗಿಂತ ಹೆಚ್ಚಿನ ಇಂಧನ ಕ್ಷಮತೆ ಹೊಂದಿದೆ. ಇದು ಹೆಚ್ಚಿನ ಸುರಕ್ಷತೆ ಮತ್ತು ಪರಿಸರ ಸ್ನೇಹಿಯಾಗಿದೆ. ಇದರ ಎಕ್ಸ್ ಶೋರೂಂ ದರವು 6.49 ಲಕ್ಷ ರೂ.ನಿಂದ 9.50 ಲಕ್ಷ ರೂ.ವರೆಗೆ ಇದೆ.