8 ರನ್’ಗೆ 7 ವಿಕೆಟ್ ಉಡೀಸ್! ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿಶ್ವದಾಖಲೆ ಬರೆದೇಬಿಟ್ಟ 32ರ ಹರೆಯದ ಈ ವೇಗಿ

Thu, 27 Jul 2023-9:41 am,

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಅತಿ ಕಡಿಮೆ ಸ್ಕೋರ್’ಗೆ ಏಳು ವಿಕೆಟ್ ಕಬಳಿಸಿ 32ರ ಹರೆಯದ ಕ್ರಿಕೆಟಿಗನೊಬ್ಬ ವಿಶ್ವದಾಖಲೆ ಬರೆದಿದ್ದಾನೆ. ಈ ಆಟಗಾರನ ಸಾಧನೆ ಮುಂದೆ ಚೀನಾದ ಬ್ಯಾಟ್ಸ್’ಮನ್’ಗಳು ಮಂಡಿಯೂರಿದ್ದಾರೆ

ಕಿಲ್ಲರ್ ಬೌಲಿಂಗ್ ಮೂಲಕ ಎಲ್ಲೆಡೆ ಸಂಚಲನ ಮೂಡಿಸಿರುವ ಆಟಗಾರನ ಹೆಸರು ಸೈಝ್ರುಲ್ ಇದ್ರಸ್ (Syazrul Idrus). ಈತ ಮಲೇಷ್ಯಾದ ಯುವ ವೇಗದ ಬೌಲರ್. ಟಿ20 ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾನೆ.

ಬಲಗೈ ವೇಗದ ಬೌಲರ್ ಸೈಝ್ರುಲ್ ಇದ್ರಸ್ (Syazrul Idrus) 8 ರನ್’ಗೆ 7 ವಿಕೆಟ್ ಪಡೆದು ಈ ಹಿಂದೆ ಯಾವುದೇ ಪುರುಷ ಬೌಲರ್ ಮಾಡದ ಸಾಧನೆ ಮಾಡಿದ್ದಾರೆ. ಟಿ20 ವಿಶ್ವಕಪ್ ಏಷ್ಯಾ ಬಿ ಕ್ವಾಲಿಫೈಯರ್’ನಲ್ಲಿ ಚೀನಾ ವಿರುದ್ಧ 8 ರನ್’ಗೆ 7 ವಿಕೆಟ್ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.

ಮಲೇಷಿಯಾದ ವೇಗದ ಬೌಲರ್ ಸೈಝ್ರುಲ್ ಇದ್ರಸ್ (Syazrul Idrus) 9 ಜನವರಿ 1991 ರಂದು ಜನಿಸಿದ್ದಾರೆ. ಇದುವರೆಗೆ ಒಟ್ಟು 233 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 1207 ರನ್ ಗಳಿಸಿ 273 ವಿಕೆಟ್ ಪಡೆದಿದ್ದಾರೆ. ಟಿ20ಯಲ್ಲಿ ಒಟ್ಟು 23 ಪಂದ್ಯಗಳನ್ನು ಆಡಿರುವ 47 ವಿಕೆಟ್‌’ಗಳನ್ನು ಪಡೆದಿದ್ದಾರೆ.

ಇದರಲ್ಲಿ ಅವರ ಅತ್ಯುತ್ತಮ ಬೌಲಿಂಗ್ ಅಂಕಿ ಅಂಶವೆಂದರೆ 8 ರನ್‌ಗಳಿಗೆ 7 ವಿಕೆಟ್. 2022 ರಲ್ಲಿ ಡೆನ್ಮಾರ್ಕ್ ವಿರುದ್ಧ ಲಿಸ್ಟ್ ಎ ಕ್ರಿಕೆಟ್‌’ಗೆ ಪಾದಾರ್ಪಣೆ ಮಾಡಿದ್ದಾರೆ. 2019 ರಲ್ಲಿ ವನವಾಟು ವಿರುದ್ಧ T20 ನಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಿದರು. 32 ವರ್ಷದ ಈ ಬೌಲರ್‌’ನ ಪೂರ್ಣ ಹೆಸರು ಸೈಝ್ರುಲ್ ಎಜತ್ ಇದ್ರಸ್ (Syazrul Idrus),

ZEENEWS TRENDING STORIES

By continuing to use the site, you agree to the use of cookies. You can find out more by Tapping this link