ಈ ಲಕ್ಷಣಗಳು ಮಾಮೂಲಿಯಂತೆ ಕಾಣಿಸಬಹುದು !ಆದರೆ ಇದು ಲಿವರ್ ಡ್ಯಾಮೇಜ್ ಸಂಕೇತ
ಸಾಮಾನ್ಯ ವಿಶ್ರಾಂತಿಯ ನಂತರವೂ ಹೋಗದಿರುವ ಅತಿಯಾದ ಆಯಾಸವು ಯಕೃತ್ತಿನ ಹಾನಿಯ ಕೇತವಾಗಿರಬಹುದು.ಹಾನಿಗೊಳಗಾದ ಯಕೃತ್ತು ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಾಕಷ್ಟು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳನ್ನು ಉತ್ಪಾದಿಸಲು ಸಾಧ್ಯವಾಗದ ಕಾರಣ ಹೀಗಾಗುತ್ತದೆ.
ಹಸಿವಿನ ಕೊರತೆ ಅಥವಾ ತೂಕ ನಷ್ಟ ಆಗುವುದು ಯಕೃತ್ತಿನ ಸಮಸ್ಯೆಗಳ ಸಂಕೇತವಾಗಿರಬಹುದು. ಹಾನಿಗೊಳಗಾದ ಯಕೃತ್ತು ಆಹಾರದಿಂದ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗದ ಕಾರಣ ಹೀಗಾಗುತ್ತದೆ.
ಹೊಟ್ಟೆಯ ಮೇಲಿನ ಬಲ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಅದು ಯಕೃತ್ತಿನ ಹಾನಿಯ ಸಂಕೇತವಾಗಿದೆ.ಈ ನೋವು ಜೋರಾಗಿರಬಹುದು ಅಥವಾ ಮಂದವಾಗಬಹುದು.
ಚರ್ಮ ಮತ್ತು ನಿಮ್ಮ ಕಣ್ಣುಗಳ ಬಿಳಿಭಾಗವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ,ಇದು ಯಕೃತ್ತಿನ ಹಾನಿಯ ಪ್ರಮುಖ ಲಕ್ಷಣವಾಗಿದೆ. ಬಿಲಿರುಬಿನ್ ಎಂಬ ವಸ್ತುವಿನ ಮಟ್ಟವು ರಕ್ತದಲ್ಲಿ ಹೆಚ್ಚಾದಾಗ ಹೀಗಾಗುತ್ತದೆ.
ನಿಮ್ಮ ಮೂತ್ರವು ಗಾಢ ಬಣ್ಣಕ್ಕೆ ತಿರುಗಿದರೆ ಅದು ಯಕೃತ್ತಿನ ಹಾನಿಯ ಸಂಕೇತವಾಗಿರಬಹುದು.ಸಾಕಷ್ಟು ಪ್ರಮಾಣದ ನೀರು ಕುಡಿದರೂ ಮೂತ್ರವು ನೀರಿನಂತೆ ಸ್ಪಷ್ಟವಾಗದಿದ್ದರೆ ಅದು ಯಕೃತ್ತಿನ ಸಮಸ್ಯೆಯ ಸಂಕೇತವಾಗಿರುತ್ತದೆ.
ಸೂಚನೆ:ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ವೈದ್ಯರನ್ನು ಸಂಪರ್ಕಿಸಿ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.