ದೇಹದಲ್ಲಿ ಐರನ್ ಅಂಶ ಕೊರತೆಯಾದರೆ ಕಾಣಿಸುತ್ತದೆ ಈ ಲಕ್ಷಣಗಳು!
ದೇಹದಲ್ಲಿ ಐರನ್ ಕೊರತೆಯಾದಾಗ ಪಾದಗಳು ಮರಗಟ್ಟಲು ಆರಂಭವಾಗುತ್ತವೆ. ಪದೇ ಪದೇ ಪಾದಗಳಿಗೆ ಪಿನ್ ಚುಚ್ಚಿದಂಥಹ ಅನುಭವವಾಗುತ್ತದೆ. ರಾತ್ರಿ ಮಲಗುವ ವೇಳೆ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ದೇಹದಲ್ಲಿ ಐರನ್ ಕೊರತೆಯಾದರೆ ನಾಲಿಗೆ ಊದಿಕೊಂಡ ಹಾಗಾಗುತ್ತದೆ. ಇದನ್ನು ಗ್ಲೋಸಿಟಿಸ್ ಎಂದು ಕರೆಯಲಾಗುತ್ತದೆ. ಇಲ್ಲಿ ನಾಲಗೆಯ ಬಣ್ಣವೂ ಬದಲಾಗುತ್ತದೆ. ಈ ಲಕ್ಷಣವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಈ ಸಮಸ್ಯೆ ಇದ್ದಾಗ ಆಹಾರವನ್ನು ಅಗಿಯುವುದು ಮತ್ತು ನುಂಗುವುದು ಕಷ್ಟವಾಗಬಹುದು. ಇತರ ಚಿಹ್ನೆಗಳಾದ ತುಟಿ ಒಡೆಯುವುದು, ನಾಲಗೆಯ ಮೂಲೆಗಳಲ್ಲಿ ಬಿರುಕುಗಳು ಮತ್ತು ಬಾಯಿ ಹುಣ್ಣುಗಳು ಕೂಡಾ ಕಂಡು ಬರುತ್ತದೆ.
ಆಹಾರ ಮತ್ತು ಪಾನೀಯವನ್ನು ಹೊರತುಪಡಿಸಿ ಬೇರೆ ಯಾವುದನ್ನಾದರೂ ಸೇವಿಸಬೇಕು ಅನಿಸಿದಾಗ, ಈ ಸ್ಥಿತಿಯನ್ನು ಪಿಕಾ ಎಂದು ಕರೆಯಲಾಗುತ್ತದೆ. ಐರನ್ ಕೊರತೆ ಇದ್ದವರಿಗೆ ಪದೇ ಪದೇ ಐಸ್ ತಿನ್ನಬೇಕು ಅನ್ನಿಸುತ್ತಿರುತ್ತದೆ. ಐರನ್ ಅಂಶವಿರುವ ಆಹಾರವನ್ನು ಸೇವಿಸಿದರೆ ಈ ಸಮಸ್ಯೆಯು ಸುಲಭವಾಗಿ ಪರಿಹಾರವಾಗುತ್ತದೆ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)